ಸಾರಾಂಶ
ದಿ.ಮೀರಾ ಕಾಮತ್ ಸ್ಮರಣಾರ್ಥ ಕಾರ್ಕಳ ಹೊಸಸಂಜೆ ಬಳಗ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಶಿವಾ ಸ್ಮರಣಿಕ, ಕಾರ್ಕಳ ಟೈಗರ್ಸ್, ಆದಿಲಕ್ಷ್ಮೀ ಸ್ಟೋನ್ ಡಿಸೈನರ್ಸ್ ಜಂಟಿಯಾಗಿ ಎಸ್‌ವಿಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಕ್ಕಳ ಚಿತ್ರಕಲಾ ಸ್ಪರ್ಧೆ ಆಯೋಜಿಸಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಎಳೆಯ ಮಕ್ಕಳಲ್ಲಿ ಅಗಾಧ ಪ್ರತಿಭೆ ಸುಪ್ತವಾಗಿರುತ್ತದೆ. ಸೂಕ್ತ ಕಾಲದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಅವರಿಗೆ ಪ್ರೋತ್ಸಾಹ ನೀಡಿದರೆ ಪ್ರತಿಭಾ ವಿಕಸನ ಬಹು ಎತ್ತರಕ್ಕೆ ಮುಟ್ಟಲು ಸಾಧ್ಯವಿದೆ ಎಂದು ಉದ್ಯಮಿ, ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ್ ಕಾಮತ್ ಹೇಳಿದರು.ದಿ.ಮೀರಾ ಕಾಮತ್ ಸ್ಮರಣಾರ್ಥ ಕಾರ್ಕಳ ಹೊಸಸಂಜೆ ಬಳಗ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಶಿವಾ ಸ್ಮರಣಿಕ, ಕಾರ್ಕಳ ಟೈಗರ್ಸ್, ಆದಿಲಕ್ಷ್ಮೀ ಸ್ಟೋನ್ ಡಿಸೈನರ್ಸ್ ಜಂಟಿಯಾಗಿ ಎಸ್‌ವಿಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಕ್ಕಳ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಮುಹಮ್ಮದ್ ಗೌಸ್, ಕಾರ್ಕಳ ತೋಟಗಾರಿಕೆ ರೈತರ ಉತ್ಪಾದನಾ ಕಂಪನಿ ನಿಯಮಿತ ಅಧ್ಯಕ್ಷ ಆಂಟನಿ ಡಿಸೋಜ, ಉದ್ಯಮಿ ಅರುಣಕುಮಾರ್ ನಿಟ್ಟೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಕಳ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮೀ, ಶಿವಾ ಜಾಹೀರಾತು ಸಂಸ್ಥೆಯ ಮಾಲೀಕ ವರದರಾಯ ಪ್ರಭು, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ರೊ.ವೆಂಕಟೇಶ್ ಕಾಮತ್ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭ ಹಾರೈಸಿದರು.ನಿವೃತ್ತ ಮುಖ್ಯಶಿಕ್ಷಕಿ, ಸಾಹಿತಿ ಸಾವಿತ್ರಿ ಮನೋಹರ್ ಅಧ್ಯಕ್ಷತೆ ವಹಿಸಿದ್ದರು.
ಚೇತನಾ ವಿಶೇಷ ಶಾಲೆಯ ವಿಶೇಷಚೇತನ ವಿದ್ಯಾರ್ಥಿನಿ ಸುಧೀಕ್ಷಾ ಸ್ಪರ್ಧೆಗೆ ಚಾಲನೆ ನೀಡಿದರು.ಪದ್ಮಾವತಿ ಭಟ್ ಸ್ವಾಗತಿಸಿದರು. ಹೊಸಸಂಜೆ ಬಳಗ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ ನಂಬಿಯಾರ್ ವಂದಿಸಿದರು.