ತಿಪಟೂರಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ

| Published : Jan 15 2025, 12:45 AM IST

ಸಾರಾಂಶ

ವಿವೇಕ ಜನ್ಮೋತ್ಸವದ ಅಂಗವಾಗಿ ಭಾಷಣ ಸ್ಪರ್ಧೆ, ಪ್ರಬಂಧ, ಚಿತ್ರಕಲಾ, ನುಡಿಮುತ್ತುಗಳ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಕ ಉಡುಗೆ ತೊಟ್ಟು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.

ತಿಪಟೂರು: ತಾಲೂಕಿನ ಹೊನ್ನವಳ್ಳಿಯ ಕೆಪಿಎಸ್ ಪ್ರೌಢಶಾಲೆಯಲ್ಲಿ ಚೈತನ್ಯ ಭಾರತ ಸಮಿತಿಯಿಂದ 162ನೇ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ಚೈತನ್ಯ ಭಾರತ ಸಮಿತಿ ನಿರ್ಮಾತೃ ಸಂತೋಷ ಮಾತನಾಡಿ, ವಿವೇಕಾನಂದರ ಭಾರತದ ಬಗೆಗಿನ ದೇಶಭಕ್ತಿ ಹಾಗೂ ಗುರು ಶಿಷ್ಯರ ಸಂಬಂಧ ಹೇಗಿತ್ತು, ಹೇಗಿರಬೇಕು ಎಂಬ ಬಗ್ಗೆ ಹಾಗೂ ವಿವೇಕಾನಂದರು ಮತ್ತು ಪರಮಹಂಸರ ಭಾಂದವ್ಯದ ಬಗ್ಗೆ ತಿಳಿಸಿದರು. ವಿವೇಕ ಜನ್ಮೋತ್ಸವದ ಅಂಗವಾಗಿ ಭಾಷಣ ಸ್ಪರ್ಧೆ, ಪ್ರಬಂಧ, ಚಿತ್ರಕಲಾ, ನುಡಿಮುತ್ತುಗಳ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಕ ಉಡುಗೆ ತೊಟ್ಟು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಮಿತಿಯಿಂದ ಸನ್ಮಾನಿಸಲಾಯಿತು. ಎಲ್ಲರಿಗೂ ವಿವೇಕ ಬ್ಯಾಂಡ್ (ಉತ್ತಮನಾಗು, ಉಪಕಾರಿಯಾಗು) ತೊಡಿಸುವುದರ ಮೂಲಕ ಶುಭಾಶಯ ಕೋರಿದರು. ಭರತನಾಟ್ಯ ನಾಟಕ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿವೇಕಾನಂದರ ೬೦ಕ್ಕೂ ಹೆಚ್ಚು ಭಾವಚಿತ್ರ ಚಿತ್ರಕಲಾ ಪ್ರದರ್ಶನ ಹಾಗೂ ೫೦ಕ್ಕೂ ಹೆಚ್ಚು ನುಡಿಮುತ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಗ್ರಾಪಂ ಅಧ್ಯಕ್ಷ ದೊಡ್ಡೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಪುರುಷತ್ತಮ್, ಸದಸ್ಯ ಶ್ರೀಕಂಠ ಮೂರ್ತಿ, ಗ್ರಾಮದ ರಂಗಪ್ಪ, ಮಲ್ಲಿಗಪ್ಪಚಾರ್, ಚಿಕ್ಕನಾಯಕನಹಳ್ಳಿಯ ಅರುಣ್, ಕವಿತಾ, ಮಮತಾ, ಸಮಿತಿಯ ಹೇಮಂತ್, ರವಿ, ವಿಶ್ವಾಸ್, ಚರಣ್ ರಾಜ್‌ ಇದ್ದರು.