ಸಾರಾಂಶ
ನುಗ್ಗೇಹಳ್ಳಿ ಹೋಬಳಿಯ ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ. ಸಿದ್ದರಹಟ್ಟಿ ಗ್ರಾಮದ ಎಸ್. ಜಿ. ಜಯರಾಮ್, ಉಪಾಧ್ಯಕ್ಷರಾಗಿ ಕಲ್ಲು ಮಲ್ಲೇನಹಳ್ಳಿ ಗ್ರಾಮದ ಕೆ. ಸಿ. ಪ್ರತೀಪ್, ಗುರುವಾರ ಅವಿರೋಧವಾಗಿ ಆಯ್ಕೆಯಾದರು. ನೂತನ ಜೆಡಿಎಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಸಿ. ಎನ್. ಬಾಲಕೃಷ್ಣ ಅಭಿನಂದಿಸಿದರು.
ನುಗ್ಗೇಹಳ್ಳಿ: ಹೋಬಳಿಯ ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ. ಸಿದ್ದರಹಟ್ಟಿ ಗ್ರಾಮದ ಎಸ್. ಜಿ. ಜಯರಾಮ್, ಉಪಾಧ್ಯಕ್ಷರಾಗಿ ಕಲ್ಲು ಮಲ್ಲೇನಹಳ್ಳಿ ಗ್ರಾಮದ ಕೆ. ಸಿ. ಪ್ರತೀಪ್, ಗುರುವಾರ ಅವಿರೋಧವಾಗಿ ಆಯ್ಕೆಯಾದರು. ನೂತನ ಜೆಡಿಎಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಸಿ. ಎನ್. ಬಾಲಕೃಷ್ಣ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ್, ಉಪಾಧ್ಯಕ್ಷೆ ಸುಕನ್ಯ, ಚುನಾವಣಾ ಅಧಿಕಾರಿ ವಿಜಯೇಂದ್ರ, ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಜೆಡಿಎಸ್ ಪಕ್ಷದ ಮುಖಂಡರುಗಳಾದ ಓಬಳಾಪುರ ಎನ್. ಬಸವರಾಜ್, ಕಲ್ಲೇ ಸೋಮನಹಳ್ಳಿ ತಮ್ಮಯ್ಯ, ಉದ್ಯಮಿ ಭವನಳ್ಳಿ ಯೋಗರಾಜ್, ಟಿ.ಸಿ. ಮಂಜುನಾಥ್, ಕಲ್ಲು ಮಲ್ಲೇನಹಳ್ಳಿ ಮಹಾಲಿಂಗೇಗೌಡ, ಟಿ. ಎಂ. ಗಿರೀಶ್, ಟಿ.ವಿ. ಬಸವರಾಜ್, ಎಲ್. ಬಿ. ಕಾಂತರಾಜ್, ಟಿ.ಎಸ್. ತೊಂಟರಾಧ್ಯ, ಒಳಗೇರಳ್ಳಿ ಮಂಜುನಾಥ್, ಸಿದ್ದರಹಟ್ಟಿ ಗ್ರಾಮದ ನಾಗರಾಜ್, ಶಂಕರ್, ಮಂಜುನಾಥ್, ಇತರರು ಹಾಜರಿದ್ದರು.