ಜನಪರ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಜೆಸಿಐ : ಕೆ.ಎಸ್.ಸೋಮಶೇಖರ್

| Published : Sep 17 2024, 12:47 AM IST

ಸಾರಾಂಶ

ಬೀರೂರು, ಜನಸಾಮಾನ್ಯರ ಜೀವನದಲ್ಲಿ ಉತ್ತಮ ಬೆಳವಣಿಗೆಗೆ ಸಾಮಾಜಿಕ ಕೊಡುಗೆ ನೀಡುವಲ್ಲಿ ಜೆಸಿ ಸಂಸ್ಥೆ ಮುಂದಾಗಲಿ ಎಂದು ಪತ್ರಕರ್ತ ಕೆ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.

ಜನಪರ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಜೆಸಿಐ : ಕೆ.ಎಸ್.ಸೋಮಶೇಖರ್ಕನ್ನಡಪ್ರಭವಾರ್ತೆ,ಬೀರೂರು.ಜನಸಾಮಾನ್ಯರ ಜೀವನದಲ್ಲಿ ಉತ್ತಮ ಬೆಳವಣಿಗೆಗೆ ಸಾಮಾಜಿಕ ಕೊಡುಗೆ ನೀಡುವಲ್ಲಿ ಜೆಸಿ ಸಂಸ್ಥೆ ಮುಂದಾಗಲಿ ಎಂದು ಪತ್ರಕರ್ತ ಕೆ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದ ವಾಸವಿ ವಿದ್ಯಾಶಾಲಾ ಆವರಣದಲ್ಲಿ ಭಾನುವಾರ ಸಂಜೆ ಜೆಸಿಐ ಹಮ್ಮಿಕೊಂಡಿದ್ದ 2024ರ ಜೇಸಿ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಎಲ್ಲರೂ ನಾಯಕರಾಗಲು ಸಾಧ್ಯವಲ್ಲವಾದರೂ ಸಹ ನಾಯಕತ್ವದ ಗುಣ ಬೆಳೆಸಿಕೊಳ್ಳು ವಂತಹ ಉತ್ತಮ ವೇದಿಕೆ ಜೇಸಿಐ ಸಂಸ್ಥೆಯಾಗಿದೆ. ಗುರಿಯೊಂದು ಇರಬೇಕು ಮುನ್ನಡೆಯಲು ಗುರುವಿನ ಅಣತಿಯಿರಬೇಕೆಂಬ ನೀತಿಯಂತೆ ಸಮಾಜ ಮುಖಿ ಚಿಂತನೆಯ ಮೂಲಕ ಜನಪರ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಈ ಲೋಕದಲ್ಲಿ ತನಗಾಗಿ , ತನ್ನವರಿಗಾಗಿ ಯಾರೂ ತಾನೆ ಬದುಕುವುದಿಲ್ಲಾ, ಆದರೆ ಇತರರಿಗಾಗಿ ಯಾರು ಬದುಕುತ್ತಾನೋ ಅವನ ಬದುಕೆ ನಿಜವಾದ ಬದುಕು. ಸೇವೆ ಎನ್ನುವುದು ನಾನು ಮತ್ತು ನನ್ನವರು ಎಂಬ ದೃಷ್ಠಿಕೋನದಿಂದ ನಾವು ಮತ್ತು ನಮ್ಮವರು ಎಂಬ ಸಮಷ್ಠಿ ರೂಪಕ್ಕೆ ನಮ್ಮನ್ನು ನಾವೇ ಪರಿವರ್ತಿಸಿಕೊಳ್ಳುವ ಒಂದು ಪವಿತ್ರ ಕಾರ್ಯ. ಕಷ್ಟದಲ್ಲಿ ಇರುವ ಇತರರಿಗೆ ಯಾವುದೇ ಪ್ರಚಾರ , ಪ್ರತಿಫಲಾಪೇಕ್ಷೆಯಿಲ್ಲದೇ ನಿಷ್ಕಾಮ ದೃಷ್ಠಿಯಿಂದ, ಸಂತೊಷವಾಗಿ ಸಕಾಲದಲ್ಲಿ ಸಮಪ್ರಮಾಣದಲ್ಲಿ ಮಾಡುವ ನಿಟ್ಟಿನಲ್ಲಿ ಜೆಸಿಐ ಸಂಸ್ಥೆ ಕಾರ್ಯನಿರ್ವಹಿಸಲಿ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆಸಿಐನ ಹಿರಿಯ ಸದಸ್ಯ ಪಿ.ಎಸ್.ರಾಘವೇಂದ್ರ ಮಾತನಾಡಿ, ಜನಪರ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ನಿರ್ವಹಿಸುವ ಸಂದರ್ಭದಲ್ಲಿ ಬರೀ ಮಾತನ್ನಾಡದೇ ಸಾಧನೆ ಮೂಲಕ ಕೃತಿಯಲ್ಲಿ ವ್ಯಕ್ತಪಡಿಸಿ ತೋರಿಸಬೇಕು. ಶಿಸ್ತು ಹಾಗೂ ಆತ್ಮವಿಶ್ವಾಸದ ಮೂಲಕ ಸಂಸ್ಥೆ ಕಟ್ಟಿ ಬೆಳೆಸಿದರೆ ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.ಜೆಸಿಐ ಅಧ್ಯಕ್ಷ ಅಯ್ಯೂಬ್ ಅಹಮದ್ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ಈ ತಿಂಗಳಿನ ಸಮಾಗಮ ಕಾರ್ಯಕ್ರಮದಲ್ಲಿ ವಿವಿಧ ಆಟೋಟ , ಸಸಿ ನೆಡುವ ಪರಿಸರ ಕಾರ್ಯಕ್ರಮಗಳನ್ನು ಕಳೆದ ಒಂದು ವಾರದಿಂದ ಆಯೋಜಿಸಿ ಇಂದು ಮುಕ್ತಾಯವಾಗಿದೆ. ನಿಮ್ಮೆಲ್ಲರ ಸಹಕಾರ ಸದಾ ಹೀಗೆ ಇದ್ದರೆ ಮುಂದಿನ ದಿನಗಳಲ್ಲಿ ಇನ್ನು ಅದ್ಬುತ ಕಾರ್ಯಕ್ರಮ ನೀಡಿ ಸಂಸ್ಥೆ ಹೆಸರುಗಳಿಸಲಿದೆ ಎಂದರು.ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷ ಜೇಸಿ ಲಕ್ಷ್ಮಣ್, ಕಾರ್ಯದರ್ಶಿ ಜೇಸಿ ಪ್ರದೀಪ್, ಜೇಸಿ ಹರ್ಷ, ಮಲ್ಲಿಕಾ ರಾಘವೇಂದ್ರ, ಮಲ್ಲಿಕಾರ್ಜುನ್ ಬಿ.ಎಂ, ಸಂತೊಷ್ ಕುಮಾರ್, ಸಂದೀಪ್, ಜಯಣ್ಣ, ಸಂಪತ್ ಕುಮಾರ್, ಜಯಶ್ರೀ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕೋಧ್ಯಮದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಾದ ಎನ್.ಗಿರೀಶ್, ಕೆ.ಎಸ್. ಸೋಮಶೇಖರ್‌ರನ್ನು ಜೆಸಿಐ ನಿಂದ ಗೌರವಿಸಲಾಯಿತು.15 ಬೀರೂರು 2ಬೀರೂರಿನ ವಾಸವಿ ವಿದ್ಯಾಶಾಲಾ ಆವರಣದಲ್ಲಿ ಭಾನುವಾರ ಸಂಜೆ ಜೆಸಿಐ ಹಮ್ಮಿಕೊಂಡಿದ್ದ 2024ರ ಜೇಸಿ ಸಮಾಗಮ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎನ್.ಗಿರೀಶ್, ಕೆ.ಎಸ್. ಸೋಮಶೇಖರ್‌ರನ್ನು ಸನ್ಮಾನಿಸಲಾಯಿತು.