ಚಿತ್ರದುರ್ಗದಲ್ಲಿ ಈದ್ ಹಬ್ಬದ ಮೆರವಣಿಗೆ : ಪ್ಯಾಲೆಸ್ಟೈನ್ ಪರ ಘೋಷಣೆ, ಬಾವುಟ ಪ್ರದರ್ಶನ

| Published : Sep 17 2024, 12:47 AM IST / Updated: Sep 17 2024, 05:30 AM IST

palestine flag
ಚಿತ್ರದುರ್ಗದಲ್ಲಿ ಈದ್ ಹಬ್ಬದ ಮೆರವಣಿಗೆ : ಪ್ಯಾಲೆಸ್ಟೈನ್ ಪರ ಘೋಷಣೆ, ಬಾವುಟ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಕೆಲ ಮುಸ್ಲಿಂ ಯುವಕರು ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿ, ಬಾವುಟ ಪ್ರದರ್ಶಿಸಿದ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಎರಡು ಧ್ವಜಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ: ನಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಕೆಲ ಮುಸ್ಲಿಂ ಯುವಕರು ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಮಧ್ಯಾಹ್ನ ಎರಡುವರೆ ವೇಳೆಗೆ ಈದ್ ಮೆರವಣಿಗೆ ಆರಂಭವಾಗಿದ್ದು, ಮೆರವಣಿಗೆ ಗಾಂಧಿ ವೃತ್ತದ ಬಳಿ ಬಂದಾಗ ಕೆಲ ಯುವಕರು ಪ್ಯಾಲಿಸ್ಟೈನ್ ಪರ ಘೋಷಣೆ ಕೂಗಿದ್ದಾರೆ. 

ಸಾಲದೆಂಬಂತೆ ಬಾವುಟ ಕೂಡಾ ಪ್ರದರ್ಶಿಸಿದ್ದಾರೆ. ಈ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ತಕ್ಷಣ ಜಾಗೃತರಾದ ನಗರಠಾಣೆ ಪೊಲೀಸರು ಎರಡು ಧ್ವಜಗಳ ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ. 

ಪ್ಯಾಲೆಸ್ಟೈನ್ ಬಾವುಟ ಪ್ರದರ್ಶನ ದೃಢಪಡಿಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಮಧ್ಯಾಹ್ನ ಮೂರು ಗಂಟೆ ವೇಳೆಗೆ ಗಾಂಧಿ ವೃತ್ತದಲ್ಲಿ ಕೆಲ ಯುವಕರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದು ಗಮನಕ್ಕೆ ಬಂದಿತು. ತಕ್ಷಣವೇ ಅವರಿಂದ ಬಾವುಟ ವಶಕ್ಕೆ ಪಡೆಯಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದರು.