ಚನ್ನಸಂದ್ರ ಡೇರಿಗೆ ಜೆಡಿಎಸ್ ಬೆಂಬಲಿತ ರವಿ ಚನ್ನಸಂದ್ರ ಹೊಸ ಅಧ್ಯಕ್ಷ..!

| Published : Apr 09 2024, 12:49 AM IST

ಚನ್ನಸಂದ್ರ ಡೇರಿಗೆ ಜೆಡಿಎಸ್ ಬೆಂಬಲಿತ ರವಿ ಚನ್ನಸಂದ್ರ ಹೊಸ ಅಧ್ಯಕ್ಷ..!
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಉತ್ಪಾದಕರು ತಮ್ಮ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟು ಆಯ್ಕೆ ಮಾಡಿದ್ದಾರೆ. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರ ಹಾಗೂ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಕಾಲಕಾಲಕ್ಕೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಚನ್ನಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರವಿ ಚನ್ನಸಂದ್ರ, ಉಪಾಧ್ಯಕ್ಷರಾಗಿ ಈ.ರಾಜು ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ರವಿ ಚನ್ನಸಂದ್ರ ಹಾಗೂ ಈ.ರಾಜು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಅಧಿಕಾರಿ ಫಿಲೋಮಿನಾ ಅಂತಿಮವಾಗಿ ಘೋಷಣೆ ಮಾಡಿದರು.

ನಂತರ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನೂತನ ಅಧ್ಯಕ್ಷ ರವಿ ಚನ್ನಸಂದ್ರ ಹಾಗೂ ಉಪಾಧ್ಯಕ್ಷ ಈ.ರಾಜು ಅವರನ್ನು ತಮ್ಮ ನಿವಾಸದಲ್ಲಿ ಅಭಿನಂದಿಸಿದರು. ಹಾಲು ಉತ್ಪಾದಕರು ತಮ್ಮ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟು ಆಯ್ಕೆ ಮಾಡಿದ್ದಾರೆ. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರ ಹಾಗೂ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಕಾಲಕಾಲಕ್ಕೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸಂಘದ ನಿರ್ದೇಶಕರಾದ ನಟರಾಜು, ಲೋಕೇಶ, ಪುಷ್ಪ ದೇವರಾಜು, ಸುನಂದ ಶಿವಣ್ಣ, ಅಂಬಿಕಾ ಈರೇಗೌಡ, ಜೆಡಿಎಸ್ ತಾಲೂಕ್ ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಮುಖಂಡರಾದ ಸಿ.ಎಸ್.ಯೋಗೇಶ್, ಸಿ.ಎಸ್.ಅನಿಲ್ ಕುಮಾರ್, ನಗರಕೆರೆ ಸಂದೀಪ, ಕಾಳಿರಯ್ಯ, ಸಿ.ಕೆ. ಪ್ರಸನ್ನ, ಕೆ .ಬಿ. ಸಿದ್ದೇಗೌಡ ಮತ್ತಿತರರು ಇದ್ದರು.ಅನಾಥ ಹಸುಗೂಸು ಮಕ್ಕಳಿಗೆ 20 ಸಾವಿರ ರು. ಮೌಲ್ಯದ ಹಾಲಿನ ಪೌಡರ್ ವಿತರಣೆಪಾಂಡವಪುರ:ಪಟ್ಟಣದ ಫ್ರೆಂಚ್‌ ರಾಕ್ಸ್ ಲಯನ್ಸ್ ಕ್ಲಬ್ ಆಫ್‌ ಪಾಂಡವಪುರ ಸಂಸ್ಥೆಯಿಂದ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಅನಾಥ ಹಸುಗೂಸು ಮಕ್ಕಳಿಗೆ 20 ಸಾವಿರ ಮೌಲ್ಯದ ಲ್ಯಾಕ್ಟೋಜೆನ್ ಹಾಲಿನ ಪೌಡರ್ ಅನ್ನು ಸಂಸ್ಥೆ ಅಧ್ಯಕ್ಷ ಟಿ.ಪಿ.ರೇವಣ್ಣ ಹಾಗೂ ಪದಾಧಿಕಾರಿಗಳು ವಿತರಿಸಿದರು.ನಂತರ ಮಾತನಾಡಿದ ಟಿ.ಪಿ.ರೇವಣ್ಣ, ಜನಪದ ಸೇವಾ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಹಸುಗೂಸು ಅನಾಥ ಮಕ್ಕಳನ್ನು ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿದೆ. ಈ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಸಂಸ್ಥೆಯಿಂದ ಸುಮಾರು 20 ಸಾವಿರ ಮೌಲ್ಯದ ಲ್ಯಾಕ್ಟೋಜೆನ್ ಹಾಲಿನ ಪೌಡರ್ ಪ್ಯಾಕೇಟ್ ವಿತರಣೆ ಮಾಡಿದ್ದೇವೆ ಎಂದರು.ಜನಪದ ಸೇವಾಟ್ರಸ್ಟ್ ತಮ್ಮ ಸಮಾಜ ಸೇವೆಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವ ಮೂಲಕ ಅನಾಥ ಮಕ್ಕಳ ರಕ್ಷಣೆ ಮಾಡಬೇಕು. ನಿಮ್ಮಂತಹ ಸಂಸ್ಥೆಗಳನ್ನು ತಮ್ಮ ಸಮಾಜ ಸೇವೆ ಇನ್ನಷ್ಟು ಮುಂದುವರೆಸಬೇಕು ಎಂದರು.ಸಂಸ್ಥೆಯೂ ಆರಂಭದಿಂದಲೂ ಹಲವು ಸಮಾಜ ಸೇವೆ ಮಾಡುವ ಮೂಲಕ ಸಮಾಜಕ್ಕೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಸೇವೆ ಮುಂದುವರೆಸಲಿದೆ ಎಂದರು.ಈ ವೇಳೆ ಸಂಸ್ಥೆ ಕಾರ್ಯದರ್ಶಿ ಮಾಣಿಕ್ಯನಹಳ್ಳಿ ಅಶೋಕ್, ಖಜಾಂಚಿ ಆರ್.ದಿಲೀಪ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.