ಮಾನವ ಕಳ್ಳ ಸಾಗಾಣಿಕೆಯು ಸಮಾಜದ ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದು, ಬಡತನ, ನಿರುದ್ಯೋಗ, ತಂದೆ-ತಾಯಿಗಳಿಗೆ ವಿದ್ಯಾಭ್ಯಾಸದ ಕೊರತೆ ಇವೆಲ್ಲವೂ ಮಾನವ ಕಳ್ಳ ಸಾಗಾಣಿಕೆಗೆ ದಾರಿಯಾಗುತ್ತದೆ. ಮಹಿಳೆಯರು. ಮಕ್ಕಳು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಮಾನವ ಕಳ್ಳಸಾಗಾಣಿಕೆಯಾಗದಂತೆ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಿ, ಜಿಲ್ಲೆಯಲ್ಲಿ ಮಾನವ ಕಳ್ಳಸಾಗಾಣಿಕೆಯಾಗದಂತೆ ವಿದ್ಯಾಭ್ಯಾಸ ಹಾಗೂ, ವೈಯುಕ್ತಿಕ ಜೀವನಕ್ಕೆ ಆದ್ಯತೆ ನೀಡುವ ಮೂಲಕ ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟಬಹುದು ಎಂದು ಸಿವಿಲ್ ನ್ಯಾಯಾಧೀಶರಾದ ಗಣೇಶ್ ಅಭಿಪ್ರಾಯಪಟ್ಟರು.

ನಗರದ ಡಾ. ಎಚ್.ಎನ್. ಕಲಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಮಾನವ ಕಳ್ಳಸಾಗಾಣಿಕೆ ತಡೆದಿನಾಚರಣೆ ಹಾಗೂ ಜಾಗೃತಿ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರುಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಿ

ಪ್ರತಿಯೊಂದು ಮಗುವು ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. 18 ವರ್ಷದೊಳಗಿನ ಮಕ್ಕಳನ್ನು ಯಾವುದೇಕೆಲಸಗಳಿಗೆ ಬಳಕೆಮಾಡಿಕೊಳ್ಳುವಂತಿಲ್ಲ, ಹಲವು ಆಯಾಮಗಳನ್ನು ವಿಮರ್ಶೆ ಮಾಡಿದಾಗ ಭಿಕ್ಷಾಟನೆ, ಅನೈತಿಕಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದ ಅವರು, ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತ ಗಮನಿಸಿ ಇಂತಹ ಚಟುವ ಟಿಕೆಗಳನ್ನು ತಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು. ಮಾನವ ಕಳ್ಳ ಸಾಗಾಣಿಕೆಯು ಸಮಾಜದ ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದು, ಬಡತನ, ನಿರುದ್ಯೋಗ, ತಂದೆ-ತಾಯಿಗಳಿಗೆ ವಿದ್ಯಾಭ್ಯಾಸದ ಕೊರತೆ ಇವೆಲ್ಲವೂ ಮಾನವ ಕಳ್ಳ ಸಾಗಾಣಿಕೆಗೆ ದಾರಿಯಾಗುತ್ತದೆ. ಮಹಿಳೆಯರು. ಮಕ್ಕಳು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು. ಸಾರ್ವಜನಿಕರಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾದಕ ದ್ರವ್ಯ, ಮದ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಮಾನವ ಕಳ್ಳಸಾಗಣೆಭಾರತದಲ್ಲಿ ಪ್ರತಿ ಹತ್ತು ಮಂದಿ ಮಕ್ಕಳಲ್ಲಿ ಒಬ್ಬರು ಕಳ್ಳಸಾಗಾಣಿಕೆಗೆ ಗುರಿಯಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರನ್ನು ಲೈಂಗಿಕ, ಮಾರಾಟ, ಭಿಕ್ಷಾಟನೆ, ಬಾಲಕಾರ್ಮಿಕ, ಜೀತಪದ್ದತಿ, ಮುಂತಾದವುಗಳಿಗೆ ಕಳ್ಳಸಾಗಾಣಿಕೆಯಾದ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ, ವಿದ್ಯಾಭ್ಯಾಸ ಕೇವಲ ಅಂಕಪಟ್ಟಿಗೆ ಸೀಮಿತವಾಗದೇ, ವಸ್ತು ವಿಷಯ, ಜ್ಞಾನಾರ್ಜನೆ, ಸಂಸ್ಕಾರ ಮುಂತಾದವುಗಳಿದೆ ಆದ್ಯತೆ ನೀಡಬೇಕು, ಭಾರತದ ಸಂವಿಧಾನ ಉತ್ತಮವಾದದ್ದು, ಇದನ್ನು ತಿಳಿಯಲು ವಿದ್ಯಾರ್ಥಿಗಳು ಉತ್ಸಾಹ ಭರಿತರಾಗಿರಬೇಕು, ಸಮಾನತೆ, ಶೋಷಣೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸಿದರು.ಮಂಚೇನಹಳ್ಳಿ ತಹಸೀಲ್ದಾರ್‌ ಪೂರ್ಣಿಮ ಮಾತನಾಡಿ, ವಿದ್ಯಾರ್ಥಿ ದೆಶೆಯಲ್ಲೇ ಸಮಾಜದಲ್ಲಿನ ಮೌಢ್ಯ, ದುರಾಚಾರಗಳ ಬಗ್ಗೆ ಅರಿವಿರಬೇಕು. ನಿಮ್ಮ ನೆರ ಹೊರೆಯಲ್ಲಿ ಸಮಾಜದಲ್ಲಿ ಇಂತಹ ದುರಾಚಾರಗಳು ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳ ಗಮನತ್ತೆ ತರಬೇಕು ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಅರವಿಂದ ಕೆ.ಎಂ, ಕ್ಷೇತ್ರಶಿಕ್ಷಣಾಧಿಕಾರಿ ಗಂಗರೆಡ್ಡಿ, ನ್ಯಾಯಾಧೀಶೆ ಪುಷ್ಪ, ನಗರಸಭೆ ಪೌರಾಯುಕ್ತ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಪ್ಪ ಗೌಡ್ ನಾಯಕ್, ವಿಜಯಕುಮಾರ್, ಗೋಪಾಲ್ ಮುಂತಾದವರು ಭಾಗವಹಿಸಿದ್ದರು.