ಪೃಥ್ವಿ ಹೆಗಡೆಗೆ ಕಲಾಭೂಷಣ ರಾಜ್ಯ ಪ್ರಶಸ್ತಿ

| Published : Feb 10 2025, 01:47 AM IST

ಸಾರಾಂಶ

ತಾಳಿಕೋಟೆ: ಪಟ್ಟಣದ ನಾಟ್ಯಕಲಾವಿದೆ ಪೃಥ್ವಿ ಹೆಗಡೆಗೆ ಸ್ವಾಮಿ ವಿವೇಕಾನಂದ ಕಲಾಭೊಷಣ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಳಿಕೋಟೆ: ಪಟ್ಟಣದ ನಾಟ್ಯಕಲಾವಿದೆ ಪೃಥ್ವಿ ಹೆಗಡೆಗೆ ಸ್ವಾಮಿ ವಿವೇಕಾನಂದ ಕಲಾಭೊಷಣ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು. ವಿಜಯಪುರ ಜಿಲ್ಲಾ ಹಾಗೂ ತಾಲೂಕ ಘಟಕ ಮುದ್ದೇಬಿಹಾಳ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಜಾನಪದ ಯುವ ಬ್ರಿಗೇಡ್ ಹಾಗೂ ಸಾಧನಾ ಮಹಿಳಾ ಒಕ್ಕೂಟ ಮುದ್ದೇಬಿಹಾಳ ಮತ್ತು ಧರ್ಮಯುದ್ಧ ದಿನ ಪತ್ರಿಕಾ ಬಳಗ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಕಲಾಭೂಷಣ ರಾಜ್ಯ ಪ್ರಶಸ್ತಿಯನ್ನು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಪುಂಡಲೀಕ ಮುರಾಳ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ಗುರುರಾಜ ಹೊಸಕೋಟೆ, ಡಾ.ಎಸ್. ಬಾಲಾಜಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪ್ರಶಸ್ತಿ ನೀಡಿ ಗೌರವಿಸಿದರು. ತಾಳಿಕೋಟೆಯ ಶ್ರೀ ವಿರಕ್ತೇಶ್ವರ ಭರತ ನಾಟ್ಯ ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ ಇವರ ಹತ್ತಿರ ಭರತನಾಟ್ಯ ಹಾಗೂ ಜಾನಪದ ನೃತ್ಯ ಒಳಗೊಂಡು ಕರ್ನಾಟಕ, ಕೆರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಹಾಗೂ ಚಂದನ ವಾಹಿನಿಯಲ್ಲಿ ಹಾಗೂ ಶ್ರೀ ಬಸವ ವಾಹಿನಿಯಲ್ಲಿ ತಮ್ಮ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡಿದ್ದಾರೆ ಅಲ್ಲದೇ ರಾಜ್ಯ, ಅಂತರಾಜ್ಯ, ರಾಷ್ಟ್ರೀಯ, ಮತ್ತು ಅಂತರಾಷ್ಟ್ರೀಯ ಹಲವಾರು ಪ್ರಶಸ್ತಿ ಪಡೆದುಕೊಂಡಿರುವ ಪೃಥ್ವಿ ಹೆಗಡೆ ಇಲ್ಲಿಯವರೆಗೆ ೯೯೨ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಶ್ರೀ ವಿರಕ್ತೇಶ್ವರ ಭರತ ನಾಟ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ ಅವರು ಅಭಿನಂದಿಸಿದ್ದಾರೆ.