ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಆರದಿರಲಿ ಕನ್ನಡದ ದೀಪ ಈ ಕವನ ಸಂಕಲನದಲ್ಲಿ ಪ್ರಬುದ್ಧ ಕವಿಗಳು ತಮ್ಮ ಅನುಭವವನ್ನು ಹಂಚಿಕೊಂಡು ಕಾವ್ಯ ರಚಿಸಿದ್ದಾರೆ. 6 ರಿಂದ 75 ರವರೆಗಿನ ವಯಸ್ಸಿನ ಕವಿಗಳು ಮೆರಗು ತಂದು ಕೊಟ್ಟಿದ್ದಾರೆ ಎಂದು ಸವದತ್ತಿ ತಾಲೂಕು ಕನ್ನಡ ಸಾಹಿತ್ಯ ಪರಷತ್ತಿನ ಅಧ್ಯಕ್ಷ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.ಹಿಡಕಲ್ ಡ್ಯಾಮಿನ ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಗಂಧದ ಗುಡಿ ಪ್ರಕಾಶನ ಹಿಡಕಲ್ ಡ್ಯಾಮ್ ಹಾಗೂ ಎಚ್‌ಬಿಎನ್ ಪ್ರಕಾಶನ ಮೆಳವಂಕಿ ಅವರ ಪ್ರಕಾಶನಗೊಂಡ ಕರ್ನಾಟಕ ಸುವರ್ಣ ಸಂಭ್ರಮದ ಸವಿನೆನಪಿನಗಾಗಿ ಡಾ.ಪ್ರಕಾಶ ಹೊಸಮನಿ ಹಾಗೂ ಹನುಮಂತರಾವ ನಾಗಪ್ಪಗೋಳ ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ಕೃತಿ ಆರದಿರಲಿ ಕನ್ನಡದ ದೀಪ ರಾಜ್ಯಮಟ್ಟದ ಪ್ರಾತಿನಿಧಿಕ ಕನ್ನಡ ಕವನ ಸಂಕಲನ ಲೋಕಾರ್ಪಣೆ ಹಾಗೂ ಕಾವ್ಯ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕವನ ಸಂಕಲನದಲ್ಲಿ ಎಲ್ಲ ಕವನಗಳು ಕನ್ನಡ ಭಾಷೆ ಸತ್ವವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ ಎಂದರು.
ಹುಕ್ಕೇರಿ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಕವಿಗಳನ್ನು ಒಗ್ಗೂಡಿಸುವುದರ ಮೂಲಕ ಅತ್ಯುತ್ತಮವಾದಂತಹ ಕವನ ಶಿರ್ಷಿಕೆ ಪ್ರಕಟಿಸುವುದರ ಜತೆಗೆ ಕನ್ನಡತನವನ್ನು ಉಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಹಿರಿಯ ಸಾಹಿತಿ ಎಸ್.ಎಂ.ಶಿರೂರ ಅಧ್ಯಕ್ಷತೆ ವಹಿಸಿದರು. ಹುಕ್ಕೇರಿಯ ಹಿರಿಯ ವಿದ್ವಾಸ ಡಾ.ರಾಜಶೇಖರ ಇಚ್ಚಂಗಿ ಕೃತಿ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಮಟಗಾರ, ಕೆ.ಆರ್.ಇ ಸೊಸೈಟಿಯ ಅಧ್ಯಕ್ಷ ಬಸವರಾಜ ಖಡಕಭಾಂವಿ, ಹುಕ್ಕೇರಿ ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ವಿಜಯ ಕರ್ನಾಟಕ ಸಂಕಲನ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಜಯಶ್ರೀ ಮತ್ತಿಕೊಪ್ಪ, ಮುಖ್ಯ ಶಿಕ್ಷಕ ಎಸ್.ಎ.ಸರಿಕರ, ಬಾಬು ನಾಯಿಕ ಮಾತನಾಡಿದರು. ಡಾ.ಪ್ರಕಾಶ ಹೊಸಮನಿ ಆಶಯ ನುಡಿ ಹೇಳಿದರು. ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಡಿ.ಎಂ.ಹಜ್ಜೆ, ಹೊಸಪೇಟ ಗ್ರಾಪಂ ಅಧ್ಯಕ್ಷ ಸುಹಾಸಿನಿ ಮಗದುಮ್ಮ, ಸದಸ್ಯೆ ಭಾರತಿ ಬೆಣ್ಣಿ, ಬಂಡೆಪ್ಪ ಮಾದರ, ಅನಿಲ ಕಾಗಿನಕರ ಉಪಸ್ಥಿತರಿದ್ದರು. ಕಾವ್ಯ ಗೋಷ್ಠಿಯಲ್ಲಿ ಕವಿಗಳಾದ ಮಹಾಂತೇಶ ಹೊಸಮನಿ, ಕಲ್ಲಪ್ಪ ಹೊಸಮನಿ, ಗೋಪಾಲ ಚಿಪ್ಪನಿ, ಶಿವಾನಂದ ಬಡಿಗೇರ, ಸಹನಾ ಗಾಣಗಿ, ಲಕ್ಷ್ಮಣ ಪೂಜಾರಿ, ಮಹಾವೀರ ತೆಳಗಡಿ, ಸತ್ಯಪ್ಪ ಅಡಕಿಪೂಜೇರಿ, ಶಿವಾನಂದ ನಾವಿ, ಸೇರಿದಂತೆ 25 ಕವಿಗಳು ತಮ್ಮ ಕವನ ವಾಚಿಸಿದರು. ಶಿಕ್ಷಕಿ ಪಿ.ಎಸ್.ಪರಕನಟ್ಟಿ, ಸ್ವಾಗತಿಸಿದರು. ಶಿಕ್ಷಕಿ ಕಸ್ತೂರಿ ಹುರಳಿ ಕಾರ್ಯಕ್ರಮ ನಿರೂಪಿಸಿದರು. ಎ.ವೈ.ಸೋನ್ಯಾಗೋಳ ವಂದಿಸಿದರು. ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ಘಟಕದ ಸದಸ್ಯರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.