ಕನ್ನಡದ ಸೊಗಸು, ಸೊಗಡು ಶ್ರೀಮಂತಗೊಂಡಿದೆ. ಕನ್ನಡ ಕಲಿಯಲು, ಬರೆಯಲು, ಮಾತನಾಡಲು ಹಾಗೂ ಕೇಳಲು ಬಹು ಇಂಪು. ಇತರ ಭಾಷೆಗಿಂತ ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವವನ್ನು ಹೊಂದಿದೆ.
ಗದಗ: ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಾಗಿ, ಆಡಳಿತ ಭಾಷೆಯಾಗಿ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು. ಕನ್ನಡಿಗರಿಗೆ ಕನ್ನಡವೇ ಜೀವಾಳ. ಹಿಂದಿ ಇಂಗ್ಲಿಷ್ ಭಾಷೆ ಶಿಕ್ಷಣ, ಜ್ಞಾನ, ಸಂಪರ್ಕ ಭಾಷೆಯಾಗಿರಲಿ ಎಂದು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ರತ್ನಾ ಗಿರೋಸಾ ಬದಿ ತಿಳಿಸಿದರು.ನಗರದ ಲಯನ್ಸ್ ಭವನದಲ್ಲಿ ರಾಜ್ಯ ಲೇಖಕಿಯರ ಸಂಘ ಜಿಲ್ಲಾ ಘಟಕ ಹಾಗೂ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಜಿಲ್ಲಾ ಘಟಕ, ಧಾರವಾಡದ ಚೇತನ ಫೌಂಡೇಶನ್, ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘದಿಂದ ನಡೆದ ರಾಜ್ಯಮಟ್ಟದ ಕನ್ನಡ ನುಡಿ ಸಡಗರ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ಕನ್ನಡದ ಸೊಗಸು, ಸೊಗಡು ಶ್ರೀಮಂತಗೊಂಡಿದೆ. ಕನ್ನಡ ಕಲಿಯಲು, ಬರೆಯಲು, ಮಾತನಾಡಲು ಹಾಗೂ ಕೇಳಲು ಬಹು ಇಂಪು. ಇತರ ಭಾಷೆಗಿಂತ ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವವನ್ನು ಹೊಂದಿದೆ. ಅಂತೆಯೇ ನಮ್ಮ ಹಿರಿಯ ಮೇಧಾವಿ ಸಾಹಿತಿಗಳು ರಚಿಸಿದ ಕನ್ನಡ ಕೃತಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಕನ್ನಡ ಭಾಷೆಗಿರುವ ಮಹತ್ವ ಮತ್ತು ಶ್ರೀಮಂತಿಕೆಯನ್ನು ಅಭಿವ್ಯಕ್ತಗೊಳಿಸುವುದು ಎಂದರು.ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಶಿವಪ್ಪ ಕುರಿ, ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಸಾಹಿತಿ ಶಿವಶಾಂತ ಬಿಸನಳ್ಳಿ, ಚಂಪಾ ಚಂದ್ರಶೇಖರ ಪಾಟೀಲ, ವಿವೇಕಾನಂದ ಗುಡಿಮನಿ, ಸಾಹಿತಿ ಜಿ.ಎಸ್. ಪಾಟೀಲ, ದೀಪ್ತಿ ಪಾಠಕ, ಪುಷ್ಪಲತಾ ಬಳ್ಳಾರಿ, ಸುಮತಿ ಗದಗಿನಮಠ, ಉಡಚಮ್ಮ ವಾಲ್ಮೀಕಿ, ವಿಜಯಲಕ್ಷ್ಮೀ ಕಮತರ, ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ, ಡಾ. ದತ್ತಾತ್ರೇಯ ವೈಕುಂಠೆ, ಪ್ರೊ. ಬಸವರಾಜ ನೆಲಜೇರಿ, ಶರಣಪ್ಪ ಹೊಸಂಗಡಿ, ಸುಜಾತಾ ಪಾಟೀಲ, ಆರ್.ಎಸ್. ತ್ರಿಮಲ್ಲೆ, ಚಂದ್ರಶೇಖರ ಪಾಟೀಲ, ನಿರ್ಮಲಾ ಚಿತ್ತಾಮೂರ, ಶಕುಂತಲಾ ಬಂಡಿ, ರೇಖಾ ರೊಟ್ಟಿ, ಚಂದ್ರಕಲಾ ಸ್ಥಾವರಮಠ, ವಿಜಯಲಕ್ಷ್ಮೀ ಹಳ್ಳಿ, ಸಂಧ್ಯಾ ಕೋಟಿ, ಸುಶೀಲಾ ಕೋಟಿ, ವೀಣಾ ಕಾವೇರಿ, ಮೀನಾಕ್ಷಿ ಕೊರವನವರ, ಬಸವಣ್ಣೆವ್ವ ಹರ್ತಿ, ಕಸ್ತೂರಿ ಕಡಗದ, ಡಾ. ಅರ್ಚನಾ ಪಾಟೀಲ, ಕಾವ್ಯಾ ದಂಡಿನ, ಶಶಿಕಲಾ ಕಮತರ, ಅನುರಾಧಾ ವೈಕುಂಠೆ, ಎ.ಎಸ್. ಮಕಾನದಾರ, ಜಿ. ಚಂದ್ರಶೇಖರ, ಲಕ್ಷ್ಮೀ ಕೋಡಿಹಳ್ಳಿ, ಬಾವುಟ ಬಸವರಾಜ, ಹೇಮಂತದಾಸ್ ಕೆ.ಸಿ. ಸೇರಿದಂತೆ ಸಾಹಿತಿಗಳು, ಗಣ್ಯರು ಇದ್ದರು. ಡಾ. ಜಿ. ಪ್ರೇಮಾ ನಿರೂಪಿಸಿ, ವಂದಿಸಿದರು.