ಮಡಿಕೇರಿ : ಕೊಡಗಿನಲ್ಲಿ ಮತ್ತೊಮ್ಮೆ ಕನ್ನಡ ಸಾಹಿತ್ಯ ಮೊಳಗಲು ಅವಕಾಶ ಮಾಡಿಕೊಡಬೇಕು ಮತ್ತು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಲೋಕೇಶ್ ಸಾಗರ್ ಅವರಿಗೆ ಬೆಂಬಲ ನೀಡಬೇಕು ಎಂದು ಕನ್ನಡಸಿರಿ ಸ್ನೇಹ ಬಳಗದ ಪದಾಧಿಕಾರಿಗಳು ಮನವಿ ಮಾಡಿದರು. ಸುವರ್ಣ ಕರ್ನಾಟಕ ಹೆಸರಿನಲ್ಲಿ ೨೦ ವಿಭಿನ್ನ ಕಾರ್ಯಕ್ರಮಗಳನ್ನು ಕನ್ನಡಸಿರಿ ಬಳಗದ ಮೂಲಕ ಆಯೋಜಿಸಲಾಗಿತ್ತು. ಇದನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಳಗಕ್ಕೆ ಅನುದಾನ ನೀಡಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಶ್ರಮಿಸುತ್ತಿರುವ ಲೋಕೇಶ್ ಸಾಗರ್ ಅವರ ಕನ್ನಡ ಅಭಿಮಾನವನ್ನು ಪರಿಗಣಿಸಿ ಸರ್ಕಾರ ಅವರನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ.
ಆದ್ದರಿಂದ ಮುಂಬರುವ ಕ.ಸಾ.ಪ. ಚುನಾವಣೆಯಲ್ಲಿ ಅವರಿಗೆ ಮತ್ತೊಮ್ಮೆ ಕೊಡಗು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಳಗದ ಪದಾಧಿಕಾರಿ ರಂಗಸ್ವಾಮಿ ಹೇಳಿದರು. ಪದಾಧಿಕಾರಿ ಪಿ.ಎಸ್.ವೈಲೇಶ್ ಮಾತನಾಡಿ, 2016ರಿಂದ 2021ರ ಅವಧಿಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಕ್ಕೆ ಮಾದರಿಯಾಗುವಂತಹ ಹಲವು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ವಿವರಿಸಿದರು. ಪದಾಧಿಕಾರಿ ಕೆ.ಎಸ್.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ೩,೬೫೦ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿದ್ದಾರೆ ಎಂದರು. ಬಳಗದ ಪದಾಧಿಕಾರಿಗಳಾದ ಕುಡೆಕಲ್ಲು ಸಂತೋಷ್, ಮಲ್ಲಪ್ಪ, ಎಚ್.ಎಸ್.ಜವರಪ್ಪ ಉಪಸ್ಥಿತರಿದ್ದರು.ಲೋಕೇಶ್ ಸಾಗರ್ ಬೆಂಬಲಿಸಲು ಕನ್ನಡಸಿರಿ ಬಳಗ ಮನವಿ
ಕೊಡಗಿನಲ್ಲಿ ಮತ್ತೊಮ್ಮೆ ಕನ್ನಡ ಸಾಹಿತ್ಯ ಮೊಳಗಲು ಅವಕಾಶ ಮಾಡಿಕೊಡಬೇಕು ಮತ್ತು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಲೋಕೇಶ್ ಸಾಗರ್ ಅವರಿಗೆ ಬೆಂಬಲ ನೀಡಬೇಕು ಎಂದು ಕನ್ನಡಸಿರಿ ಸ್ನೇಹ ಬಳಗದ ಪದಾಧಿಕಾರಿಗಳು ಮನವಿ ಮಾಡಿದರು. ಸುವರ್ಣ ಕರ್ನಾಟಕ ಹೆಸರಿನಲ್ಲಿ ೨೦ ವಿಭಿನ್ನ ಕಾರ್ಯಕ್ರಮಗಳನ್ನು ಕನ್ನಡಸಿರಿ ಬಳಗದ ಮೂಲಕ ಆಯೋಜಿಸಲಾಗಿತ್ತು. ಇದನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಳಗಕ್ಕೆ ಅನುದಾನ ನೀಡಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಶ್ರಮಿಸುತ್ತಿರುವ ಲೋಕೇಶ್ ಸಾಗರ್ ಅವರ ಕನ್ನಡ ಅಭಿಮಾನವನ್ನು ಪರಿಗಣಿಸಿ ಸರ್ಕಾರ ಅವರನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
