ಮಡಿಕೇರಿ : ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ಬರುವ ಮಂಗಳೂರಿನ ‘ಶಾಖಾ ಎಂಎಸ್‍ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ’ಯು (MSME-DFO), ಮಡಿಕೇರಿಯಲ್ಲಿ ಮಹಿಳೆಯರಿಗಾಗಿ ‘ಬ್ಲೌಸ್ ಹೊಲಿಗೆ’ ಕುರಿತು ಆರು ವಾರಗಳ ‘ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ’ವನ್ನು (ESDP) ಆಯೋಜಿಸುತ್ತಿದ್ದು, 2026 ರ ನ. 2 ರಂದು ಪ್ರಾರಂಭವಾಗಲಿದೆ. ಕಾರ್ಯಕ್ರಮವು ಬ್ಲೌಸ್ ಹೊಲಿಗೆಯ ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುವ ಹಾಗೂ ಉದ್ಯಮಶೀಲತೆ, ವ್ಯಾಪಾರ ಅವಕಾಶಗಳು, ಸರ್ಕಾರಿ ಯೋಜನೆಗಳು, ಉದ್ಯಮ್ ನೋಂದಣಿ, ಆರ್ಥಿಕ ನೆರವು ಮತ್ತು ಮಾರುಕಟ್ಟೆ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಸ್ವಯಂ ಉದ್ಯೋಗ ಮತ್ತು ಆದಾಯ ಗಳಿಕೆಯ ಚಟುವಟಿಕೆಯಾಗಿ ಹೊಲಿಗೆ ವೃತ್ತಿಯನ್ನು ಕೈಗೊಳ್ಳಲು ಬಯಸುವವರು ಹಾಗೂ ತಮ್ಮ ಹೊಲಿಗೆ ಉದ್ಯಮವನ್ನು ಪ್ರಾರಂಭಿಸಲು ಅಥವಾ ಬಲಪಡಿಸಲು ಆಸಕ್ತಿ ಹೊಂದಿರುವ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಆಸಕ್ತರು ಕಾರ್ಯಕ್ರಮದ ನೋಂದಣಿಗಾಗಿ ಕಾರ್ಯಕ್ರಮ ಸಂಯೋಜಕರಾದ ಸುಮನ್ ಎಸ್. ರಾಜು (ಸಹಾಯಕ ನಿರ್ದೇಶಕರು) ಅವರನ್ನು 9448383720 ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.ನ. 2ರಂದು ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ಬರುವ ಮಂಗಳೂರಿನ ‘ಶಾಖಾ ಎಂಎಸ್‍ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ’ಯು (MSME-DFO), ಮಡಿಕೇರಿಯಲ್ಲಿ ಮಹಿಳೆಯರಿಗಾಗಿ ‘ಬ್ಲೌಸ್ ಹೊಲಿಗೆ’ ಕುರಿತು ಆರು ವಾರಗಳ ‘ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ’ವನ್ನು (ESDP) ಆಯೋಜಿಸುತ್ತಿದ್ದು, 2026 ರ ನ. 2 ರಂದು ಪ್ರಾರಂಭವಾಗಲಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
