ಹೊಸಪೇಟೆ: ರಾಜ್ಯ ಮಟ್ಟದಲ್ಲಿ ಮಾದಾರ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಬಹಳ ಹಿಂದುಳಿದಿದೆ. ಸಮಾಜ ಅಭಿವೃದ್ಧಿ ಹೊಂದಲು ಕರ್ನಾಟಕ ಮಾದಾರ ಮಹಾಸಭೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯದ ಹಿರಿಯ ಸಚಿವರು, ಶಾಸಕರು, ಚಿಂತಕರು, ಹೋರಾಟಗಾರರು ಸೇರಿ ರಾಜ್ಯಾದ್ಯಂತ ಸಂಘಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಮಾದಾರ ಮಹಾಸಭಾ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ವಿಜಯನಗರ ಜಿಲ್ಲೆಯ ಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ಅಭಿಯಾನ ಮತ್ತು ಮಾದಿಗ ಸಮಾಜದ ಮುಖಂಡರ ಸಂಘಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಗುವುದು. ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳ, ತಾಲೂಕು ಅಧ್ಯಕ್ಷರ ಹಾಗೂ ಪದಾಧಿಕಾರಿಗಳು ನೇಮಕಾತಿ ಮಾಡಿ, ಸದಸ್ಯರನ್ನು ನೋಂದಾವಣೆ ಮಾಡಿಸಿದ ನಂತರ ಚುನಾವಣೆ ಮೂಲಕ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಜಿಲ್ಲಾದ್ಯಂತ ಸಂಚರಿಸಿ ಸದಸ್ಯತ್ವ ನೋಂದಣಿ ಮಾಡಿಸಬೇಕು.ಕರ್ನಾಟಕ ರಾಜ್ಯದಲ್ಲಿ ಮಾದಾರ ಸಮುದಾಯ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ಸಮುದಾಯದ ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಅವರು ಅವರು ಹೇಳಿದರು.
ಸ್ಥಳೀಯ ಮುಖಂಡರಾದ ಎಚ್. ಮರಿಸ್ವಾಮಿ, ದೂಡ್ಡ ಬಸಪ್ಪ, ಹಡಗಲಿ ಪುತ್ರೇಶ್, ಎಂ. ಸಿ. ವೀರಸ್ವಾಮಿ, ಹಿರಣ್ಣಯ್ಯ, ಎಚ್. ಸೋಮಶೇಖರ, ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ, ನಿಂಬಗಲ್ ರಾಮಕೃಷ್ಣ, ನಿಚ್ಚವನಳ್ಳಿ ಭೀಮಪ್ಪ, ಹುಚ್ಚಂಗೆಪ್ಪ, ಹುಲಿಕಟ್ಟೆ ಚಂದ್ರಪ್ಪ, ವಕೀಲರಾದ ದುರುಗಪ್ಪ, ಎಚ್. ಶೇಷು, ಎ. ಬಸವರಾಜ, ಕೊಟಗಿನಾಳ ಮಲ್ಲಿಕಾರ್ಜುನ, ಕರಿಯಪ್ಪ, ಬಿ. ಮಾರೆಣ್ಣ, ಗೋಪಾಲಕೃಷ್ಣ, ಜೆ. ಶಿವಕುಮಾರ, ಹೊಳಗುಂದಿ ಸ್ವಾಮಿ, ವೀರೇಶ್ ಕುಮಾರ್, ಎಚ್. ಎಸ್. ವೆಂಕಪ್ಪ, ಯರ್ರಿಸ್ವಾಮಿ, ಶ್ರೀನಿವಾಸ, ಕೋಲ್ಲಾಪುರಿ, ಸಿ.ಆರ್. ಭರತ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.