ಸಾರಾಂಶ
ಯುಗಪುರುಷ ಪತ್ರಿಕೆಯ ೭೮ನೇ ‘ದಸರಾ- ದೀಪಾವಳಿ ವಿಶೇಷಾಂಕ’ವನ್ನು ಶ್ರೀ ಕ್ಷೇತ್ರ ಕಟೀಲಿನಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಬಿಡುಗಡೆಗೊಳಿಸಿದರು.
ಮೂಲ್ಕಿ: ಕಿನ್ನಿಗೋಳಿಯಿಂದ ಪ್ರಕಟಗೊಳ್ಳುವ ಕರ್ನಾಟಕ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಕಿನ್ನಿಗೋಳಿಯ ಯುಗಪುರುಷ ಪತ್ರಿಕೆಯ ೭೮ನೇ ‘ದಸರಾ- ದೀಪಾವಳಿ ವಿಶೇಷಾಂಕ’ವನ್ನು ಶ್ರೀ ಕ್ಷೇತ್ರ ಕಟೀಲಿನಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಬಿಡುಗಡೆಗೊಳಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ತನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಯಾದವ ದೇವಾಡಿಗ, ಈಶ್ವರ ಕಟೀಲ್, ಕಸ್ತೂರಿ ಪಂಜ, ಆದರ್ಶ್ ಶೆಟ್ಟಿ, ಗುರುರಾಜ್ ಉಪಸ್ಥಿತರಿದ್ದರು.