ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬು ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಕೂತಂಡ ತಂಡ ಮೀದೆರಿರ ವಿರುದ್ಧ 4-0 ಅಂತರದ ಜಯ ಸಾಧಿಸಿತು.
ಬಲ್ಲಚಂಡ ಕರವಂಡ ವಿರುದ್ಧ 2-0 ಅಂತರದ ಗೆಲವು ಸಾಧಿಸಿದರೆ ಬಾಚನದಂಡ ತಂಡ ಕಳ್ಳಿಚಂಡ ವಿರುದ್ಧ ಪರಾಭವಗೊಂಡಿತು. ಕಳ್ಳಿಚಂಡ 4- 0 ಅಂತರದಿಂದ ಬಾಚನದಂಡ ತಂಡದ ವಿರುದ್ಧ ಗೆಲವು ಸಾಧಿಸಿತು.ಅಲ್ಲಂಡ ಮತ್ತು ಬೇಪಡಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆದು ಬಳಿಕ ಟೈ ಬ್ರೇಕರ್ ನಲ್ಲಿ ಬೇಪಡಿಯಂಡ 4-3 ಅಂತರದಿಂದ ಗೆಲವು ಸಾಧಿಸಿದರೆ ನಂಬುಡಮಾಡ ಮೇಚಂಡ ವಿರುದ್ಧ 2-1 ಅಂತರದ ಗೆಲವು ಸಾಧಿಸಿತು.
ಚೀಯಕಪೂವಂಡ ಜಮ್ಮಡ ವಿರುದ್ಧ 2-1 ಅಂತರದ ಗೆಲವು ಸಾಧಿಸಿತು. ಚಿಂದಮಾಡ ತಂಡಕ್ಕೆ ಮುಂಡಂಡ ತಂಡದ ವಿರುದ್ಧ 4-1 ಅಂತರದ ಜಯ ಲಭಿಸಿತು. ಮನೆಯಪಂಡ ತಂಡವು ಮಾಣಿಪಂಡ ವಿರುದ್ಧ 1- 0 ಅಂತರದ ಜಯ ಸಾಧಿಸಿದರೆ ಮಾಪಣಮಾಡ ತಂಡವು ಮಾಲೇಟಿರ(ಕುಂದ) ತಂಡದ ವಿರುದ್ಧ 4-0 ಅಂತರದ ಗೆಲವು ಸಾಧಿಸಿತು. ಚೆರುಮಂದಂಡ ಮುಕ್ಕಾಟಿರ(ಕಡಗದಾಳು) ತಂಡದ ವಿರುದ್ಧ 2-0 ಅಂತರದ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.ಮೇರಿಯಂಡ ಅಜ್ಜಿನಂಡ ವಿರುದ್ಧ 3-0 ಅಂತರದಿಂದ ಗೆಲವು ಸಾಧಿಸಿತು.
ಮೂಕಂಡ ಕುಪ್ಪಂಡ (ನಾಂಗಾಲ) ವಿರುದ್ಧ ಟೈ ಬ್ರೇಕರ್ ನಲ್ಲಿ 5-3 ಅಂತರದ ಗೆಲವು ಸಾಧಿಸಿದರೆ ಪಟ್ಟಡ ಪಟ್ಟಮಾಡ ವಿರುದ್ಧ ಟೈ ಬ್ರೇಕರ್ ನಲ್ಲಿ 3-0 ಅಂತರದ ಗೆಲವು ಸಾಧಿಸಿತು.ಶುಕ್ರವಾರದ ಕೊನೆಯ ಪಂದ್ಯಾಟದ ಸಂದರ್ಭ ಮಳೆಯಿಂದಾಗಿ ಆಟವಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಾಂಡಂಡ ಮತ್ತು ಚಂಗುಲಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವನ್ನು ಭಾನುವಾರ ಬೆಳಗ್ಗೆ 10ಕ್ಕೆ ನಡೆಸಲಾಗುವುದು ಎಂದು ಟೂರ್ನಮೆಂಟ್ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ ತಿಳಿಸಿದರು.
.................
ಇಂದಿನ ಪಂದ್ಯಗಳುಮೈದಾನ ಒಂದು
8.30ಕ್ಕೆ: ಕಲಿಯಂಡ-ಮಾದಂಡ9.30ಕ್ಕೆ: ಮಂಡೇಪಂಡ-ಅಪ್ಪಡೇರಂಡ
10.30ಕ್ಕೆ: ಕೊಕ್ಕಂಡ-ಕಡಿಯಮಾಡ11.30ಕ್ಕೆ: ಬಾದುಮಂಡ-ಮುಕ್ಕಾಟಿರ (ಹರಿಹರ)
1ಕ್ಕೆ: ಅಜ್ಜಮಾಡ-ನಾಗಂಡ2ಕ್ಕೆ: ಅಯ್ಯಂಡ-ಕಂಬೇಯಂಡ
3ಕ್ಕೆ: ಮಂದನೆರವಂಡ-ಮುರುವಂಡ................
ಮೈದಾನ 29ಕ್ಕೆ: ಕರ್ತಮಾಡ-ಮೊಣ್ಣಂಡ
10ಕ್ಕೆ: ಅರೆಯಡ-ಅಮ್ಮಂಡ11ಕ್ಕೆ: ಬೊಳ್ಳೇಪಂಡ-ಕರೋಟಿರ
1ಕ್ಕೆ: ಪೆಮ್ಮಂಡ-ಮೂಕಳೇರ2ಕ್ಕೆ: ಅಪ್ಪಚೆಟ್ಟೋಳಂಡ-ಮಚ್ಚಾರಂಡ
3ಕ್ಕೆ: ನೆಲ್ಲಮಕ್ಕಡ –ದಾಸಂಡ