ಕೊಪ್ಪ: ಕಾಡನೆ ಹಾವಳಿಗೆ ಬೆಳೆ ನಾಶ, ಗ್ರಾಮಸ್ಥರಲ್ಲಿ ಆತಂಕ

| Published : Jul 25 2025, 12:30 AM IST

ಸಾರಾಂಶ

ಕೊಪ್ಪ, ತಾಲ್ಲೂಕಿನ ಮರಿತೊಟ್ಟಲು ಗ್ರಾಪಂ ವ್ಯಾಪ್ತಿಯ ತನೂಡಿ ಗ್ರಾಮದ ತೋಟದಕೊಪ್ಪ ಎಂಬಲ್ಲಿ ಕಾಡಾನೆಗಳು ಸೋಮವಾರ ರಾತ್ರಿ ವೇಳೆಯಲ್ಲಿ ತೋಟ, ಗದ್ದೆಗಳಿಗೆ ನುಗ್ಗಿ ಬಾಳೆ, ಅಡಕೆ, ಕಾಫಿ ಬೆಳೆಗಳಿಗೆ ಹಾನಿ ಮಾಡಿವೆ. ಮಂಗಳವಾರ ಮತ್ತು ಬುಧವಾರ ರಾತ್ರಿ ಅಂದಗಾರು ಸುತ್ತಮುತ್ತ ಪ್ರದೇಶಗಳಲ್ಲಿ ಆನೆ ದಾಳಿ ಮುಂದುವರಿದಿದೆ ಬುಧವಾರ ರಾತ್ರಿ ನಾರ್ವೆ ಘಾಟಿಯ ಎನ್.ಕೆ. ರಸ್ತೆಯ ಬಳಿಯ ರಾಧಕೃಷ್ಣ ಎನ್ನುವವರ ತೊಟಕ್ಕೆ ಬಂದ ಕಾಡನೆ ತೆಂಗಿನ ಗಿಡ, ಬಾಳೆಗಿಡಗಳನ್ನು ನಾಶಪಡಿಸಿದೆ. ಕೊಪ್ಪದ ಕೃಷಿಕ ಜಯಂತ್ ಪೂಜಾರಿ, ಉಮೇಶ್, ಕೇಶವ್ ಗೌಡ, ಹರೀಶ, ದಾಮೋದರ್ ಶೆಟ್ಟಿ, ನಸೀರ್ ಎಂಬುವರ ತೋಟಗಳಿಗೆ ಕಾಡಾನೆ ಹಾನಿ ಮಾಡಿವೆ. ತೋಟದಲ್ಲಿ ಆನೆ ಲದ್ದಿ, ಕಾಲಿನ ಪಾದದ ಗುರುತು ಮೂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಡಾನೆ ದಾಳಿ ಮಾಡಿದ ತೋಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲ್ಲೂಕಿನ ಮರಿತೊಟ್ಟಲು ಗ್ರಾಪಂ ವ್ಯಾಪ್ತಿಯ ತನೂಡಿ ಗ್ರಾಮದ ತೋಟದಕೊಪ್ಪ ಎಂಬಲ್ಲಿ ಕಾಡಾನೆಗಳು ಸೋಮವಾರ ರಾತ್ರಿ ವೇಳೆಯಲ್ಲಿ ತೋಟ, ಗದ್ದೆಗಳಿಗೆ ನುಗ್ಗಿ ಬಾಳೆ, ಅಡಕೆ, ಕಾಫಿ ಬೆಳೆಗಳಿಗೆ ಹಾನಿ ಮಾಡಿವೆ. ಮಂಗಳವಾರ ಮತ್ತು ಬುಧವಾರ ರಾತ್ರಿ ಅಂದಗಾರು ಸುತ್ತಮುತ್ತ ಪ್ರದೇಶಗಳಲ್ಲಿ ಆನೆ ದಾಳಿ ಮುಂದುವರಿದಿದೆ ಬುಧವಾರ ರಾತ್ರಿ ನಾರ್ವೆ ಘಾಟಿಯ ಎನ್.ಕೆ. ರಸ್ತೆಯ ಬಳಿಯ ರಾಧಕೃಷ್ಣ ಎನ್ನುವವರ ತೊಟಕ್ಕೆ ಬಂದ ಕಾಡನೆ ತೆಂಗಿನ ಗಿಡ, ಬಾಳೆಗಿಡಗಳನ್ನು ನಾಶಪಡಿಸಿದೆ. ಕೊಪ್ಪದ ಕೃಷಿಕ ಜಯಂತ್ ಪೂಜಾರಿ, ಉಮೇಶ್, ಕೇಶವ್ ಗೌಡ, ಹರೀಶ, ದಾಮೋದರ್ ಶೆಟ್ಟಿ, ನಸೀರ್ ಎಂಬುವರ ತೋಟಗಳಿಗೆ ಕಾಡಾನೆ ಹಾನಿ ಮಾಡಿವೆ. ತೋಟದಲ್ಲಿ ಆನೆ ಲದ್ದಿ, ಕಾಲಿನ ಪಾದದ ಗುರುತು ಮೂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬುಧವಾರ ಅಂದಗಾರು ಬಳಿ ಕಾವಲಿದ್ದ ಅರಣ್ಯಸಿಬ್ಬಂದಿ ಆನೆ ಓಡಿಸಲು ಕಾರ್ಯಾಚರಣೆ ಕೈಗೊಂಡಾಗ ಎನ್.ಕೆ. ರಸ್ತೆ ಬಳಿ ಆನೆ ಹೋಗಿದ್ದು ನರಸೀಪುರ, ಕುಂಚೂರು ಭಾಗದ ಜನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಜಾಗೃತಿ ಮೂಡಿಸಿದೆ. ಬನ್ನೂರಿನಲ್ಲಿ ದಾವಣಗೆರೆ ಮೂಲದ ಕಾರ್ಮಿಕ ಮಹಿಳೆ ಆನೆ ದಾಳಿಗೆ ಬಲಿಯಾಗಿರುವುದು ವಿಷಾದನೀಯ ಮೃತರ ಕುಟುಂಬಕ್ಕೆ ಪರಿಹಾರಕ್ಕೆ ಕ್ರಮವಹಿಸಲಾಗುವುದು.

-- ಬಾಕ್ಸ್--

ಕ್ಷೇತ್ರದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ ಭದ್ರಾ ಅರಣ್ಯ, ಎನ್,ಆರ್ ಪುರದ ಮುತ್ತೋಡಿ ವೈಲ್ಡ್‌ ಲೈಪ್, ಮತ್ತು ಇತ್ತೀಚೆಗೆ ಚಿಕ್ಕಮಗಳೂರಿನ ಕಣತಿ ಸೇರಿದಂತೆ 3 ಭಾಗಗಳಿಂದಲೂ ಆನೆಗಳು ಬರುತ್ತಿವೆ. ಇವುಗಳನ್ನು ತಡೆಗಟ್ಟಲು ಭದ್ರಾ ಮತ್ತು ಮುತ್ತೊಡಿ ಬಾರ್ಡರ್‌ಗಳಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡ ಬೇಕೆನ್ನುವುದು ಬಹುವರ್ಷಗಳ ಬೇಡಿಕೆ. ಸ್ವಲ್ಪ ಭಾಗ ಬ್ಯಾರಿಕೆಡ್ ಅಳವಡಿಸಿದ್ದು ಈ ಯೋಜನೆ ಪೂರ್ಣ ಹಣ ಬಿಡುಗಡೆ ಮಾಡಿ ಬ್ಯಾರಿಕೆಡ್ ಅಳವಡಿಕೆ ಪೂರ್ಣಗೊಳಿಸಿದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆನೆಗಳ ಹಾವಳಿ ಮತ್ತು ಬ್ಯಾರಿಕೆಡ್ ನಿರ್ಮಾಣದ ಬಗ್ಗೆ ಸರ್ಕಾರದೊಂದಿಗೆ, ಸಾರ್ವಜನಿಕ ವಸತಿ, ಜಮೀನುಗಳ ಕಡೆ ಬರುವ ಕಾಡಾನೆಗಳನ್ನು ಒಡಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅರಣ್ಯ ಸಿಬ್ಬಂದಿ ಆನೆ ಬಂದಿರುವ ಕಡೆ ಕಾವಲು ಹಾಕುವಂತೆ ತಿಳಿಸಿದ್ದು ಇದಕ್ಕೆ ಸ್ಪಂದಿಸಿದ ಇಲಾಖೆ ಮಂಗಳವಾರ ರಾತ್ರಿ ಯಿಂದಲೆ ಮರಿತೊಟ್ಲು ಗ್ರಾಪಂ ವ್ಯಾಪ್ತಿಯ ಆನೆ ಬಂದ ಪ್ರದೇಶಗಳಲ್ಲಿ ಕಾವಲಿಗಾಗಿ ಸಿಬ್ಬಂದಿಯನ್ನು ಕಳುಹಿಸಿ ಆನೆ ಓಡಿಸಲು ಕ್ರಮ ವಹಿಸಿದೆ. ಆರಣ್ಯ ಇಲಾಖೆ ವಾಹನದಲ್ಲಿ ಪ್ರಚಾರ ಮಾಡಿ ಜನ ಜಾಗೃತಿ ಮೂಡಿಸಿದೆ ಕಾಡಾನೆ ಕಂಡುಬಂದಲ್ಲಿ ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸಿ ಅನಾಹುತಕ್ಕೆ ಎಡೆಮಾಡಿಕೊಡದೆ ಕೂಡಲೆ ಅರಣ್ಯ ಇಲಾಖೆಗೆ ತಿಳಸಿ ಕ್ರಮವಹಿಸಲು ಸಹಕರಿಸಿ.- ಟಿ.ಡಿ ರಾಜೇಗೌಡ, ಶಾಸಕರು ಶೃಂಗೇರಿ ವಿಧಾನ ಸಭಾ ಕ್ಷೇತ್ರ