ಕೂಡಲಸಂಗಮ ಸಂಗಮೇಶ್ವರ ಅದ್ಧೂರಿ ರಥೋತ್ಸವ

| Published : Apr 20 2025, 01:50 AM IST

ಸಾರಾಂಶ

ಕೂಡಲಸಂಗಮ ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಶುಕ್ರವಾರ ಸಂಜೆ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಮೂಲೆ ಮೋಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಕೂಡಲಸಂಗಮ

ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಶುಕ್ರವಾರ ಸಂಜೆ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಮೂಲೆ ಮೋಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.

ರಥೋತ್ಸವಕ್ಕೂ ಪೂರ್ವದಲ್ಲಿ ಗಂಜಿಹಾಳದಿಂದ ತಳಿರು ತೋರಣ, ನಂದಿಕೋಲು ಕುಣಿತ, ಬಾಳೆಕಂಬದ ಮೆರವಣಿಗೆ, ಬೆಳಗಲ್ಲದಿಂದ ರಥೋತ್ಸವ ಹಗ್ಗ ತರುವುದು, ಇದ್ದಲಗಿಯ ಹಿಲಾಲ, ಗುಳೆದ್ದಗುಡ್ಡದ ಹುಚ್ಚಯನ ಕಳಸ ಮುಂತಾದವುಗಳನ್ನು ಗಂಜಿಹಾಳ, ಇದ್ದಲಗಿ, ಬೆಳಗಲ್ಲ, ಕೆಂಗಲ್ಲ, ಕಜಗಲ್ಲ, ಗುಳೆದಗುಡ್ಡದ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆಯಲ್ಲಿ ತಂದರು.

ರಥೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಮಹಾದೇವ ಮುರಗಿ ಇತರರು ಇದ್ದರು. ನವೀಕರಣಗೊಂಡ ರಥ ಎಳೆಯಲು ವಿವಿಧ ಭಾಗಗಳಿಂದ ಅಪಾರ ಭಕ್ತರು ಆಗಮಿಸಿದ್ದರು.