ಕುಷ್ಟಗಿ-ಹುಬ್ಬಳ್ಳಿ ಶೀಘ್ರ ರೈಲು ಸಂಚಾರ: ಶಾಸಕ ದೊಡ್ಡನಗೌಡ ಪಾಟೀಲ

| Published : Apr 30 2025, 12:33 AM IST

ಕುಷ್ಟಗಿ-ಹುಬ್ಬಳ್ಳಿ ಶೀಘ್ರ ರೈಲು ಸಂಚಾರ: ಶಾಸಕ ದೊಡ್ಡನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ-ವಾಡಿ ರೈಲು ಮಾರ್ಗವು ಈಗ ಕುಷ್ಟಗಿ ವರೆಗೆ ಮುಗಿದಿದ್ದು ವಾಡಿ ವರೆಗೂ ಮುಗಿದರೆ ಬಹುದೊಡ್ಡ ರೈಲ್ವೆ ಮಾರ್ಗವಾಗುತ್ತದೆ. ವ್ಯಾಪಾರ-ವಹಿವಾಟುಗೆ ಅನೂಕೂಲಕರವಾಗಲಿದೆ.

ಕುಷ್ಟಗಿ:

ಮೇ 10 ಅಥವಾ 11ರಂದು ಪಟ್ಟಣದ ರೈಲು ನಿಲ್ದಾಣ ಉದ್ಘಾಟಿಸುವ ಮೂಲಕ ಅಧಿಕೃತವಾಗಿ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಓಡಾಟ ಪ್ರಾರಂಭವಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ನಿರ್ಮಿಸಿರುವ (ಗದಗ-ವಾಡಿ) ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳ ಬೇಡಿಕೆಯಾಗಿದ್ದ ರೈಲು ಸಂಚಾರ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ಈ ಭಾಗದ ಜನತೆಗೆ ಸಂತಸದ ವಿಷಯವಾಗಿದೆ ಎಂದರು. ರೈಲು ನಿಲ್ದಾಣ ಹಾಗೂ ರೈಲು ಸಂಚಾರಕ್ಕೆ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಪಿ.ಸಿ. ಗದ್ದಿನಗೌಡರ ಸೇರಿದಂತೆ ಶಾಸಕರು ಹಾಗೂ ಸಂಸದರು ಸೇರಿದಂತೆ ಜನ ಪ್ರತಿನಿಧಿಗಳು ಕಾರ್ಯಕ್ರದಲ್ಲಿ ಭಾಗವಹಿಸಲಿದ್ದು ಈ ಒಂದು ಕಾರ್ಯಕ್ರಮಕ್ಕೆ 5000 ಜನ ಸೇರುವ ನಿರೀಕ್ಷೆ ಇದೆ ಎಂದರು.

ಗದಗ-ವಾಡಿ ರೈಲು ಮಾರ್ಗವು ಈಗ ಕುಷ್ಟಗಿ ವರೆಗೆ ಮುಗಿದಿದ್ದು ವಾಡಿ ವರೆಗೂ ಮುಗಿದರೆ ಬಹುದೊಡ್ಡ ರೈಲ್ವೆ ಮಾರ್ಗವಾಗುತ್ತದೆ. ವ್ಯಾಪಾರ-ವಹಿವಾಟುಗೆ ಅನೂಕೂಲಕರವಾಗಲಿದೆ ಎಂದ ಅವರು, ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಅವರಿಗೆ ಹೊಸ ರೈಲು ಮಾರ್ಗ ಆರಂಭಿಸಲು ಮನವಿ ಕೊಡಲಾಗುವುದು ಎಂದರು.

ರೈಲು ನಿಲ್ದಾಣ ಹಾಗೂ ರೈಲು ಸಂಚಾರಕ್ಕೆ ಚಾಲನೆ ನೀಡುವ ಪೂರ್ವದಲ್ಲಿ ಬಾಕಿ ಇದ್ದ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಿಕೊಡಬೇಕು ಎಂದು ಎಇಇ ಅಶೋಕ ಮುದಗೌಡರ ಅವರಿಗೆ ಶಾಸಕರು ಸೂಚಿಸಿದರು.

ಈ ವೇಳೆ ರೈಲ್ವೆ ಎಇಇ ಅಶೋಕ ಮುದಗೌಡರ, ಇತರೆ ಅಧಿಕಾರಿಗಳು, ಮುಖಂಡರಾದ ಉಮೇಶ ಯಾದವ, ಅಶೋಕ ಬಳೂಟಗಿ, ನಟರಾಜ ಸೋನಾರ, ನರಸಿಂಹ ಕಾರಟಗಿ, ವಾದಿರಾಜ, ಶುಖಮುನಿ ಕೊರಡಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.