ಪರ್ಯಾಯ ಮಹೋತ್ಸವಕ್ಕೆ 50 ಲಕ್ಷ ರು.ವೆಚ್ಚದ ದೀಪಾಲಂಕಾರ: ಯಶ್ಪಾಲ್ ಸುವರ್ಣ

| Published : Jul 02 2025, 12:20 AM IST

ಪರ್ಯಾಯ ಮಹೋತ್ಸವಕ್ಕೆ 50 ಲಕ್ಷ ರು.ವೆಚ್ಚದ ದೀಪಾಲಂಕಾರ: ಯಶ್ಪಾಲ್ ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವವನ್ನು ನಾಡಹಬ್ಬ ದಸರಾ ಮಾದರಿಯಲ್ಲಿ ಸಂಭ್ರಮಾಚರಣೆ ನಡೆಸುವ ಉದ್ದೇಶದಿಂದ ಈ ಬಾರಿಯ ಪರ್ಯಾಯ ಮಹೋತ್ಸವದಿಂದ ಉಡುಪಿಯ ನಗರ ಸಭೆ ವತಿಯಿಂದ ರು. 50 ಲಕ್ಷ ವೆಚ್ಚದಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಅನುದಾನ ಮೀಸಲಿಡಲಾಗುವುದು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವವನ್ನು ನಾಡಹಬ್ಬ ದಸರಾ ಮಾದರಿಯಲ್ಲಿ ಸಂಭ್ರಮಾಚರಣೆ ನಡೆಸುವ ಉದ್ದೇಶದಿಂದ ಈ ಬಾರಿಯ ಪರ್ಯಾಯ ಮಹೋತ್ಸವದಿಂದ ಉಡುಪಿಯ ನಗರ ಸಭೆ ವತಿಯಿಂದ ರು. 50 ಲಕ್ಷ ವೆಚ್ಚದಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಅನುದಾನ ಮೀಸಲಿಡಿಸುವ ಮೂಲಕ ಪರ್ಯಾಯ ಉತ್ಸವಕ್ಕೆ ವಿಶೇಷ ಮೆರುಗು ನೀಡಲಾಗುವುದು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ವಿದ್ಯುತ್ ದೀಪಾಲಂಕಾರ ನಡೆಸುವ ಮಾದರಿಯಲ್ಲೇ ಈ ಬಾರಿಯಿಂದ ಮುಂದಿನ ಎಲ್ಲಾ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಭೆಯಿಂದಲೇ ಅನುದಾನ ಮೀಸಲಿಡಲು ನಿರ್ಣಯ ಮಾಡಲಾಗಿದೆ.

ವಿಶ್ವಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ದೇಶ ವಿದೇಶದಿಂದ ಆಗಮಿಸುವ ಸಾವಿರಾರು ಭಕ್ತಾದಿಗಳು ಉಡುಪಿಗೆ ಭೇಟಿ ನೀಡುವ ಹಿನ್ನೆಲೆ ನಗರ ಅಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು‌,‌ ಈಗಾಗಲೇ ಪರ್ಯಾಯ ಪೂರ್ವಭಾವಿಯಾಗಿ ಉಡುಪಿ ನಗರದ ರಸ್ತೆ, ಚರಂಡಿ, ಸ್ವಚ್ಚತೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 25 ಕೋಟಿ ರು. ವಿಶೇಷ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಹಾಗೂ ತುರ್ತು ಕಾಮಗಾರಿಗ ಉಡುಪಿ ನಗರಸಭೆ ವತಿಯಿಂದ 5 ಕೋಟಿ ರು. ಮೀಸಲಿರಿಸುವಂತೆ ಮನವಿ ಮಾಡಿರುವುದಾಗಿ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.