ರಾಮನಗರ: ಹೈಕಮಾಂಡ್‌ಗೆ ಉಡುಗೊರೆ ಕೊಡಲು ಡಿ.ಕೆ.ಶಿವಕುಮಾರ್ ರೈತರ ಭೂಮಿ ಕಬಳಿಕೆ ಮಾಡುತ್ತಿದಾರೆ. ಡಿಕೆಶಿ ಹೈಕಮಾಂಡ್‌ಗೆ ಕಮಿಟ್ ಆಗಿದ್ದಾರೆ, ಅದಕ್ಕಾಗಿ ರೈತರ ಹಿತ ಬಲಿ ಕೊಡುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ತಾಲೂಕಿನ ಬೈರಮಂಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದರೂ ಉತ್ತರ ಕೊಡುತ್ತಿಲ್ಲ. ಎರಡು ತಿಂಗಳು ಯೋಜನೆಗೆ ಬ್ರೇಕ್ ಅಂತ ಹೇಳಿಯೂ ಮತ್ತೆ ನೋಟಿಫಿಕೇಷನ್ ಮಾಡೋದು, ಚೆಕ್ ಕೊಡೊದು ಮಾಡುತ್ತಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ನಾವು ಚರ್ಚೆ ಮಾಡುತ್ತೇವೆ. ಸರ್ಕಾರ ಈ ಉದ್ಧಟತನ ಮುಂದುವರೆಸಿದರೆ ಬಿಡದಿ ರೈತರ ಹೋರಾಟದಲ್ಲೇ ಅಧಿಕಾರ ಕಳೆದುಕೊಳ್ಳುತ್ತೀರಿ,ಕೂಡಲೇ ಸರ್ಕಾರ ಭೂಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸರ್ಕಾರಿ ಜಮೀನುಗಳೇ ಉಳಿಯುತ್ತಿಲ್ಲ. ಎಲ್ಲವನ್ನೂ ರಾಜಕಾರಣಿಗಳು ಕಬಳಿಕೆ ಮಾಡುತ್ತಿದ್ದಾರೆ. ಫಲವತ್ತಾದ ಕೃಷಿ ಭೂಮಿ ಉಳಿಸುವ ಕೆಲಸವನ್ನೂ ಸರ್ಕಾರ ಮಾಡ್ತಿಲ್ಲ. ಜನ ದಂಗೆ ಎದ್ದರೆ ಯಾರಿಗೂ ಉಳಿಗಾಲ ಇಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡೋಣ.ಸದನದಲ್ಲಿ ಎಷ್ಟು ಜನ ರೈತರ ಪರವಾಗಿದ್ದಾರೆ ಅಂತ ಪ್ರಶ್ನೆ ಮಾಡ್ತೀನಿ. ಎಲ್ಲರ ಬಣ್ಣ ಅಲ್ಲೇ ಬಯಲಾಗಲಿ ಎಂದರು.
ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ, ಧರಣಿ ಎಲ್ಲಾ ಮುಗಿದಿದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು, ಸದನದಲ್ಲಿ ರೆಕಾರ್ಡ್ ಆಗಬೇಕು. ಈ ಧರಣಿಗಳಿಂದ ರೈತರಿಗೆ ಉಪಯೋಗ ಇಲ್ಲ. ರೈತರೇ ಪೊರಕೆ ಹಿಡದು ಹೋರಾಟ ಮಾಡ್ತಿದ್ದಾರೆ. ನೀವು ಅಧಿವೇಶನದಲ್ಲಿ ಇದನ್ನ ಚರ್ಚೆ ಮಾಡಿ. ಯಾರ್‍ಯಾರದು ಬಣ್ಣ ಬಯಲು ಮಾಡ್ತಿರೋ ಮಾಡಿ. ಸುಮ್ಮನೆ ಅವರ ವಿರುದ್ಧ ನೀವು, ನಿಮ್ಮ ವಿರುದ್ಧ ಅವರು ಮಾತಮಾಡೋದು ಬೇಡ. ಮೈಸೂರು ಪಾದಯಾತ್ರೆ ಮಾಡಿದ್ರಲ್ಲ ಏನಾಯ್ತು ಎಂದು
ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲೇ ಯೋಜನೆಗೆ ಭಿನ್ನಾಭಿಪ್ರಾಯ ಇದೆ. ಶಾಸಕರು ಸ್ಥಳಕ್ಕೆ ಬಂದಿಲ್ಲ. ಸಿಎಂ ಪ್ರತಿಷ್ಠೆಯಾಗಿ ಇದನ್ನ ತೆಗೆದುಕೊಂಡಿದ್ದಾರೆ. ಅವರ ಒಣ ಪ್ರತಿಷ್ಠೆಗೆ ರೈತರು ಬಲಿ ಆಗತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಡಿಕೆಶಿ ಅವರ ಅಜ್ಜಯ್ಯ ಹೇಳವರೆ ಸಿಎಂಗೆ ಬಹಳ ಹುಷಾರಾಗಿರಬೇಕು ಅಂತ. ಡಿಕೆಶಿ ಇಲ್ಲೇ ಬಿಡಿದಿಲ್ಲೇ ಬೀಳ್ತಿದ್ದಾರೆ, ಇನ್ನೂ ಬೆಂಗಳೂರಿಗೆ ಎಲ್ಲಿ ಹೋಗ್ತಾರೆ. ಸಿಎಂ ಯಾರೋ ಒಬ್ಬರು, ಇಬ್ಬರು ಶಾಸಕರನ್ನ ಬ್ಲಾಕ್ ಮೇಲ್ ಮಾಡಬಹುದು. ಎಲ್ಲಾ ಶಾಸಕರನ್ನ ಬ್ಲಾಕ್ ಮೇಲ್‌ಮಾಡಲು ಆಗಲ್ಲ. ಗುಂಡೂರಾವ್ ಸರ್ಕಾರ ಯಾವರೀತಿ ಹೋಯ್ತು, ಅದೇ ರೀತಿ ನಿಮ್ಮ ಸರ್ಕಾರ ಹೋಗುತ್ತೆ ಎಂದು ವಾಗ್ದಾಳಿ ನಡೆಸಿದರು.
=========================ಪ್ಯಾಕೇಜ್
ರೈತರ ವಿರುದ್ಧ ಸವಾಲು ಹಾಕಿದವರು ಮಣ್ಣುಮುಕ್ಕಿದ್ದಾರೆ: ಯತ್ನಾಳ್ಕನ್ನಡಪ್ರಭವಾರ್ತೆ ರಾಮನಗರ: ರೈತರ ವಿರುದ್ಧ ಸವಾಲು ಹಾಕಿದವರು ದೇಶದಲ್ಲಿ ಮಣ್ಣುಮುಕ್ಕಿದ್ದಾರೆ. ದೇವೇಗೌಡರು ಹೋರಾಟಕ್ಕೆ ಬರುತ್ತೇನೆ ಅಂದಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಈಗ ಎರಡು ತಿಂಗಳು ಸಮಿತಿ ರಚನೆ ಮಾಡುತ್ತೇವೆ ಎಂದಿದೆ. ಶೀಘ್ರದಲ್ಲೇ ಅಧಿವೇಶನ ಪ್ರಾರಂಭ ಆಗಲಿದೆ. ಕೃಷಿ ಭೂಮಿಯಲ್ಲಿ ಟೌನ್ ಶಿಪ್ ಮಾಡೋದು ಬೇಡ.
ಇದನ್ನ ಕೈಬಿಡಲಿಲ್ಲ ಅಂದರೆ ಅಧಿವೇಶನ ನಡೆಯದ ಹಾಗೆ ನೋಡಿಕೊಳ್ಳುತ್ತೇವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.ಬಿಡದಿ ಟೌನ್ ಶಿಪ್ ಜೆಎಂಸಿ ಸರ್ವೇಗೆ ಅಡ್ಡಿಪಡಿಸಿದ ರೈತರ ಮೇಲೆ ಎಫ್‌ಐಆರ್ ಹಿನ್ನೆಲೆಯಲ್ಲಿ ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ ಅವರು ಪ್ರತಿಭಟನಾನಿರತ ರೈತರ ಜೊತೆ ಸಭೆ ನಡೆಸಿ ಎಫ್‌ಐಆರ್ ದಾಖಲಾದ ರೈತರಿಗೆ ಧೈರ್ಯ ತುಂಬಿ ಮಾತನಾಡಿದರು.
ಬಿಡದಿ ಭಾಗದ ರೈತರ ಅಭೂತಪೂರ್ವ ಸಂಘಟನೆ ಮಾಡಿಕೊಂಡು ಹೋರಾಟ ಮಾಡುತ್ತಿದ್ದು,ನಿಮ್ಮ ಹೋರಾಟ ಇಡೀ ದೇಶಕ್ಕೆ ತಲುಪಿದೆ. ಇಲ್ಲಿ ಸಣ್ಣಸಣ್ಣ ರೈತರು ಕೃಷಿಯಿಂದ ಜೀವನ ಕಟ್ಟಿಕೊಂಡಿದ್ದಾರೆ. ಅನುಮತಿ ಇಲ್ಲದೇ ಸರ್ವೇ ಮಾಡಲು ಬಂದವರಿಗೆ ಪೊರಕೆ ಸೇವೆ ಮಾಡಿದ್ದೀರಿ. ದೇವೇಗೌಡರು ಹೋರಾಟಕ್ಕೆ ಬರ್ತೀನಿ ಅಂದಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ.
ಈಗ ಎರಡು ತಿಂಗಳು ಸಮಿತಿ ರಚನೆ ಮಾಡ್ತೀವಿ ಅಂದಿದೆ ಎಂದರು.ಶೀಘ್ರದಲ್ಲೇ ಅಧಿವೇಶನ ಪ್ರಾರಂಭ ಆಗಲಿದೆ. ಈಗಾಗಲೇ ಆರ್.ಅಶೋಕ್ ಇದನ್ನ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಸ್ಥಳೀಯ ಶಾಸಕರು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು.
ಟೌನ್ ಶಿಪ್ ಮಾಡಬೇಕು ಅಂದರೆ ಬರಡು ಭೂಮಿಯಲ್ಲಿ ಮಾಡಿ. ಕೃಷಿ ಭೂಮಿಯಲ್ಲಿ ಟೌನ್ ಶಿಪ್ ಮಾಡೋದು ಬೇಡ. ಇದನ್ನ ಕೈಬಿಡಲಿಲ್ಲ ಅಂದ್ರೆ ಅಧಿವೇಶನ ನಡೆಯದ ಹಾಗೆ ನೋಡಿಕೊಳ್ತೀವಿ. ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.ಕೆಲವರು ನಂದು ಬಿಚ್ಚಿಡ್ತೀನಿ, ನಿಂದು ಬಿಚ್ಚಿಡ್ತೀನಿ ಅಂತಾರೆ. ಅದೇನು ಬಿಚ್ಚಿಡ್ತಾರೋ ನೋಡೊಣ. ಮೊನ್ನೆ ರೈತರ ಶಕ್ತಿ ಪ್ರದರ್ಶನ ಮಾಡಿದ್ದೀರಿ. ನಿಮ್ಮ ಶಕ್ತಿ ದೆಹಲಿಗೆ ತಲುಪಿದೆ ಅದಕ್ಕೆ ಇಲ್ಲಿಯ ಕೆಲನಾಯಕರಿಗೆ ದೆಹಲಿಯವರು ಉಗಿದವರೆ, ಅದಕ್ಕೆ ಕೆಲವರು ಓಡಿಬಂದು ಗ್ರಾಮ ವಾಸ್ತವ್ಯ ಮಾಡುತ್ತೇವೆ ಅಂತಾರೆ ಎಂದರು.
ಕೂಡಲೇ ಈ ಯೋಜನೆ ಕೈಬಿಡಬೇಕು. ಇದನ್ನ ಕೈಬಿಡದಿದ್ರೆ ಅಧಿವೇಶನ ನಡೆಸಲು ಬಿಡಲ್ಲ.ನಿಮ್ಮ ಪರವಾಗಿ ಹೋರಾಟ ಮಾಡ್ತೀವಿ. ಜನರ ಹೋರಾಟದ ವಿರುದ್ಧ ಯಾವ ಸರ್ಕಾರವೂ ನಿಲ್ಲಲ್ಲ ಎಂದರು. ಪೊಟೋ೧೭ಸಿಪಿಟಿ೬: ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರೈತರೊಂದಿಗಿನ ಸಭೆಯಲ್ಲಿ ಮಾತನಾಡಿದರು.ಪೊಟೋ೧೭ಸಿಪಿಟಿ೭: ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.