ರಾಣಿಬೆನ್ನೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ವಾಸವಾಗಿರುವವರಿಗೆ ಭೂಮಿಯ ಮಾಲಿಕತ್ವದ ಹಕ್ಕು ನೀಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಶುಕ್ರವಾರ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ವೆಂಕಟಾಪುರ, ಕೂನಬೇವು, ಹುಲಿಹಳ್ಳಿ ಗ್ರಾಮಗಳಲ್ಲಿ ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಯೋಜನೆಯಡಿ ಫಲಾನುಭವಿಗಳಿಗೆ ಭೂಮಿಯ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಂದಾಯ ಸಚಿವ ಕೃಷ್ಣ ಬೈರೆಗೌಡ ಆಶಯದಂತೆ ನಮ್ಮ ಸರ್ಕಾರ ನಿಮ್ಮನ್ನು ಮಾಲೀಕರಾಗಿ ಮಾಡಿದೆ. ಈ ಹಿಂದೆ ಇಂದಿರಗಾಂಧಿ ಹಾಗೂ ದೇವರಾಜು ಅರಸು ಅವರು ಉಳುವನನೇ ಭೂಮಿಯ ಒಡೆಯನ್ನಾಗಿ ಮಾಡಿದ್ದರು. ಅದೇ ರೀತಿ ನಮ್ಮ ಸರ್ಕಾರ ವಾಸವಾಗಿರುವವರಿಗೆ ಭೂಮಿಯ ಮಾಲಿಕತ್ವ ನೀಡಿದೆ. ಇದರಿಂದ ಮನೆ ಮಾಲಿಕರು ಬ್ಯಾಂಕಿನಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದರು. ಆಡಳಿತಾಧಿಕಾರಿ ಪುಷ್ಪಲತಾ, ಮಾಲತೇಶ ಮಾಸಣಗಿ, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ, ಅಜೇಯ, ಪಿಡಿಒಗಳಾದ ಅಶೋಕ ಪೂಜಾರ, ರಾಜೀವ ಪಾಟೀಲ, ಕಾರ್ಯದರ್ಶಿ ಶಾಂತಪ್ಪ, ಹೇಮಂತ ಎಸ್.ಕೆ., ರೂಪ್ಲಪ್ಪ ಹಂಚಿಮನಿ, ರುದ್ರಪ್ಪ ಕಿವುಡಣ್ಣನವರ, ಎಚ್.ಎಮ್. ನಾಯಕ, ಮೈಲಾರಪ್ಪ ನೆಗಳೂರ, ಶಿವಪ್ಪ, ಕುಬೇರಪ್ಪ ಮಾಸಣಗಿ ಬಸವರಾಜ ಸವಣೂರ, ಚನ್ನವೀರಗೌಡ, ಮಾಲತೇಶ ಮಾಸಣಗಿ, ಮೈಲಾರಪ್ಪ ಮಾಳಗುಡ್ಡಪ್ಪನವರ, ರಮೇಶ ಚಟ್ನಿ,ತಮ್ಮಣ್ಣ ಬಡಪ್ಪನವರ, ರುದ್ರಗೌಡ ಪಾಟೀಲ, ಬಿರೇಶ ಬೇಲೂರು, ಮಲ್ಲಿಕಾರ್ಜುನ ಗಾಣಗೇರ, ಶಿವಪ್ಪ, ಕುಬೇರಪ್ಪ ಮಾಸಣಗಿ, ವಿರುಪಾಕ್ಷಪ್ಪ ಬಣಕಾರ, ರಾಜೀವ ಪಾಟೀಲ ಮತ್ತಿತರರಿದ್ದರು.