ರಾಣಿಬೆನ್ನೂರು: ಇತ್ತೀಚಿಗೆ ಭೂಮಿಗೆ ರಾಸಾಯನಿಕ ಗೊಬ್ಬರ, ಔಷಧ ಹಾಗೂ ಪ್ಲಾಸ್ಟಿಕ್ ಮಿಶ್ರಣವಾಗುತ್ತಿರುವುದರಿಂದ ಭೂಮಿ ವಿಷಕಾರಿಯಾಗಿ ಬದಲಾಗುತ್ತಿದೆ ಎಂದು ನಗರದ ಆರ್‌ಟಿಇಎಸ್ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಸಿ.ಎನ್. ಪೂಜಾರ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೂಮಿಯನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ಆಧುನಿಕತೆಯ ಹೆಸರಿನಲ್ಲಿ ಕಾರ್ಖಾನೆಗಳು ಬಿಡುವ ನಾನಾ ವಿಧದ ತ್ಯಾಜ್ಯ, ನಾಶವಾಗದ ಪ್ಲಾಸ್ಟಿಕ್ ತ್ಯಾಜ್ಯದ ಮಿಶ್ರಣದಿಂದ ಭೂಮಿ ವಿಷಕಾರಿಯಾಗುತ್ತಿದೆ. ಯುವಜನತೆ ಭೂಮಿಯ ಶುದ್ಧತೆ, ಪರಿಸರ ನಿರ್ಮಾಣ ಹಾಗೂ ವಿಷಕಾರಿ ವಸ್ತುಗಳು ಭೂಮಿಗೆ ಸೇರಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಎಲ್ಲರೂ ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಪುನರ್ ಸೃಷ್ಟಿ ಮಾಡುವ ಕೆಲಸ ಮಾಡಬೇಕು ಎಂದರು. ಪ್ರಾ. ಪ್ರೊ. ನಾರಾಯಣ ನಾಯಕ ಎ.ಅಧ್ಯಕ್ಷತೆ ವಹಿಸಿದ್ದರು.ಪ್ರೊ.ಸಾಯಿಲತಾ ಮಡಿವಾಳರ, ಪ್ರೊ.ನಾಗರಾಜ ಗವಿಯಪ್ಪನವರ, ಪ್ರೊ. ಚನಬಸಪ್ಪ ಮಾಳಿ, ಪ್ರೊ.ಎಮ್‌.ಎನ್. ಸೂರಣಗಿ, ಪ್ರೊ.ಗಣೇಶ ಅಂಗಡಿ, ನಿಶಾ ಕೆ. ಹಾಗೂ ಮಹಾವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.