ಬೈಕ್ ಅಪಘಾತದಲ್ಲಿ ಸವಾರನ ದೇಹದಿಂದ ಬೇರ್ಪಟ್ಟ ಕಾಲು!

| Published : May 25 2024, 01:33 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲನೆ ಮಾಡುತ್ತಿದ್ದ ಸವಾರನ ಎಡಗಾಲು ತುಂಡಾಗಿ, ದೇಹದಿಂದಲೇ ಬೇರ್ಪಟ್ಟ ಅತ್ಯಂತ ದಾರುಣ ಘಟನೆ ತಾಲೂಕಿನ ಆನಗೋಡು ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

- ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲನೆ ಮಾಡುತ್ತಿದ್ದ ಸವಾರನ ಎಡಗಾಲು ತುಂಡಾಗಿ, ದೇಹದಿಂದಲೇ ಬೇರ್ಪಟ್ಟ ಅತ್ಯಂತ ದಾರುಣ ಘಟನೆ ತಾಲೂಕಿನ ಆನಗೋಡು ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ತಾಲೂಕಿನ ಕೋಲ್ಕುಂಟೆ ಗ್ರಾಮದ ಬಸವರಾಜ ಬೈಕ್ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡ ದುರ್ದೈವಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನಗೋಡು ಬಳಿ ಬಸವರಾಜ ಬೈಕ್‌ನಲ್ಲಿ ಅತಿ ವೇಗವಾಗಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಹೆದ್ದಾರಿ ಪಕ್ಕದ ಕಬ್ಬಿಣದ ಡಿವೈಡರ್‌ಗಳಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿವೈಡರ್‌ಗೆ ಬೈಕ್‌ ಗುದ್ದಿದ ರಭಸಕ್ಕೆ ಬೈಕ್‌ ಚಾಲನೆ ಮಾಡುತ್ತಿದ್ದ ಬಸವರಾಜ ಅವರ ಕಾಲು ಸಹ ಕಬ್ಬಿಣದ ಕೆಳಗೆ ಸಿಲುಕಿದೆ. ಈ ವೇಳೆ ಚಾಲನೆಯಲ್ಲಿದ್ದ ಬೈಕ್‌ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಎಡಗಾಲು ದೇಹದಿಂದ ಬೇರ್ಪಟ್ಟಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸ್ಥಳೀಯರು, ಗ್ರಾಮಸ್ಥರು, ದಾರಿಹೋಕರು ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-24ಕೆಡಿವಿಜಿ11, 12: ದಾವಣಗೆರೆ ತಾಲೂಕು ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತವಾಗಿರುವುದು.

-24ಕೆಡಿವಿಜಿ13: ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಅಪಘಾತವಾದ ಸ್ಥಳ.

-24ಕೆಡಿವಿಜಿ14, 15: ಕೋಲ್ಕುಂಟೆ ಗ್ರಾಮದ ಬೈಕ್ ಸವಾರ ಬಸವರಾಜನ ಎಡಗಾಲು ದೇಹದಿಂದ ಬೇರ್ಪಟ್ಟು ಬಿದ್ದಿರುವುದು.