ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಾನೂನನ್ನು ಅರ್ಥೈಸುವ ಉದ್ದೇಶದಿಂದ ಸರ್ಕಾರ ಮತ್ತು ಇಲಾಖೆ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದೆ

ಕನಕಗಿರಿ: ಮಕ್ಕಳಿಗೆ ಕಾನೂನಿನ ಅರಿವು ಅತ್ಯವಶ್ಯವಾಗಿದೆ ಎಂದು ಎಎಸ್ಐ ರಾಜು ಹಂಚಾಟೆ ಹೇಳಿದರು.

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಬಾಲ್ಯ ವಿವಾಹ, ಬಾಲ ಕಾರ್ಮಿಕ ಸೇರಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಜಾಗೃತಿ ವಹಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಾನೂನನ್ನು ಅರ್ಥೈಸುವ ಉದ್ದೇಶದಿಂದ ಸರ್ಕಾರ ಮತ್ತು ಇಲಾಖೆ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಪೊಲೀಸ್ ಠಾಣೆಯಲ್ಲಿನ ವಾಕಿ-ಟಾಕಿ, ಬಂದೂಕು, ಗಣಕಯಂತ್ರ, ಬಂಧಿಖಾನೆ, ಸಿಬ್ಬಂದಿ, ಅಧಿಕಾರಿಗಳ ಕಾರ್ಯ ವಿವರಿಸುವ ಮೂಲಕ ಕಾನೂನಿನ ಕುರಿತು ಜಾಗೃತಿ ಮೂಡಿಸಿದರು. ಪೊಲೀಸ್ ಇಲಾಖೆಯ ಸಿದ್ರಾಮಪ್ಪ ಕೊಪ್ಪಳ, ಸುವರ್ಣ, ಮುಖ್ಯಶಿಕ್ಷಕ ಪಾಮಣ್ಣ ಮಾಟೂರು, ಶಿಕ್ಷಕರಾದ ವೆಂಕಟೇಶರೆಡ್ಡಿ, ವಿಜಯಲಕ್ಷ್ಮೀ, ಪ್ರಿಯಾಂಕ ತಿರುಮಲರೆಡ್ಡಿ, ಶರಣಪ್ಪ ಸೇರಿದಂತೆ ಇತರರಿದ್ದರು.