ಸಾರಾಂಶ
ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಅನೇಕ ಸಮಸ್ಯೆಗಳ ನಿವಾರಣೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಮಂಗಳವಾರ ಸಮೀಪದ ದೊಡ್ಡೂರ ಗ್ರಾಮದಲ್ಲಿ ನೂತನ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸ್ಥಳೀಯ ಸಂಸ್ಥೆಗಳು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡ ಕಾಣಿಕೆ ನೀಡುತ್ತಿವೆ. ಗ್ರಾಮ ಸ್ವರಾಜ್ಯ ಕಲ್ಪನೆಯು ಸಾಮಾಜಿಕ ನ್ಯಾಯ ಮತ್ತು ಸರ್ವರ ಸಬಲೀಕರಣ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಗ್ರಾಮ ಪಂಚಾಯಿತಿಗಳು ಗ್ರಾಮೀಣ ಪ್ರದೇಶಗಳ ರಸ್ತೆ, ಚರಂಡಿ, ಶಿಕ್ಷಣ, ಬೀದಿದೀಪ ಸುಧಾರಣೆ ಸೇರಿದಂತೆ ಅಭಿವೃದ್ಧಿಪರ ಕಾರ್ಯಗಳಿಗೆ ಕೈಜೋಡಿಸುವ ಮೂಲಕ ಬಡಜನತೆಯ ಸಂಕಷ್ಟ ನೀಗಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದರು.ಶಾಸಕರ ಅನುದಾನ, ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸುಮಾರು ₹60 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಗ್ರಾಪಂ ಕಟ್ಟಡ ಕಾಮಗಾರಿ ಮಾಡಿರುವುದು ಉತ್ತಮ ಕಾರ್ಯ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾದಲ್ಲಿ ದೇಶದ ಪ್ರಗತಿ ಸಾಧ್ಯ. ಗ್ರಾಮೀಣ ಭಾಗದ ಜನರ ಕಷ್ಟಗಳ ನಿವಾರಣೆ ಮಾಡುವಲ್ಲಿ ಮುಂದೆ ಬರಬೇಕು ಎಂದರು.ಕರ್ನಾಟಕ ರಾಜ್ಯ ಗ್ರಾಪಂ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಈಳಗೇರ, ಉಪಾಧ್ಯಕ್ಷೆ ಸುಶೀಲಾ ಲಮಾಣಿ, ಸುನೀಲ ಮಹಾಂತಶೆಟ್ಟರ, ನಾಗರಾಜ ಮಡಿವಾಳರ, ತಾಪಂ ಇಒ ಕೃಷ್ಣಪ್ಪ ಧರ್ಮರ, ಜಿಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡರ, ಸಹಾಯಕ ಎಂಜಿನಿಯರ್ ಮಲ್ಲಿಕಾರ್ಜುನ ಪಾಟೀಲ, ಗ್ರಾಪಂ ಸದಸ್ಯ ಫಕ್ಕೀರಗೌಡ ಭರಮಗೌಡರ, ನೀಲವ್ವ ಕಟಗಿ, ನಿಂಗಪ್ಪ ಬಂಕಾಪುರ, ಜಯಮ್ಮ ಮಣ್ಣಮ್ಮನವರ, ದೇವಕ್ಕ ಭಜಕ್ಕನವರ, ಅಮರಪ್ಪ ಗುಡಗುಂಟಿ, ದೇವಣ್ಣ ತೋಟದ, ಸಾಕವ್ವ ಲಮಾಣಿ, ನಾನಪ್ಪ ಲಮಾಣಿ, ಮಧುಮಾಲತಿ ಈಳಗೇರ, ಮಹಾಂತೇಶ ಲಮಾಣಿ, ಸಕ್ರಪ್ಪ ಲಮಾಣಿ, ಇಂದ್ರವ್ವ ಲಮಾಣಿ, ಲಕ್ಷ್ಮೀ ಅಂಗಡಿ ಹಾಗೂ ಶಂಕ್ರಣ್ಣ ಶೀರನಹಳ್ಳಿ, ಜಿ.ಆರ್. ಕೊಪ್ಪದ, ಮಂಜುನಾಥ ಮಾದರ, ಟೋಪಣ್ಣ ಲಮಾಣಿ, ದೇವೆಂದ್ರಪ್ಪ ತೋಟದ, ಫಕ್ಕೀರಪ್ಪ ಭಜಕ್ಕನವರ, ಕೆ.ಎನ್. ಪಾಟೀಲ, ದುಂಡಪ್ಪ ಬಾಗಲದ, ಬಿಎಸ್. ಈಳಗೇರ, ಎಸ್.ಎಫ್. ಹಳ್ಯಾಳ ಇದ್ದರು. ನಾಗರಾಜ ಹಡಪದ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))