ಬರಹಗಾರರು ಅಧ್ಯಯನಶೀಲರಾಗಬೇಕು. ಇತರ ಬರಹಗಾರರ ಸಾಹಿತ್ಯವನ್ನು ಓದುವ ಒಳ್ಳೆಯದನ್ನು ಸ್ವೀಕರಿಸುವ ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಸಾಹಿತ್ಯ ರಚನೆಗೆ ಪ್ರೇರಣೆ ನೀಡಬೇಕು.
ಗದಗ: ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ಹೊರಹೊಮ್ಮಬೇಕು. ವಾಸ್ತವಿಕ ಬದುಕಿಗೆ ಹತ್ತಿರವಾಗುವ ಕವಿತೆಗಳು ಜನಮನ ಸೆಳೆಯಬಲ್ಲವು. ಅಂತಹ ಕವಿತೆಗಳ ರಚನೆಗೆ ಯುವ ಬರಹಗಾರರು ಮುಂದಾಗಬೇಕೆಂದು ಸಾಹಿತಿ ಶಿವಶಾಂತಾ ಬಿಸನಳ್ಳಿ ತಿಳಿಸಿದರು.ನಗರದ ಲಯನ್ಸ್ ಭವನದಲ್ಲಿ ರಾಜ್ಯ ಲೇಖಕಿಯರ ಸಂಘ ಜಿಲ್ಲಾ ಘಟಕ ಹಾಗೂ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಜಿಲ್ಲಾ ಘಟಕ, ಧಾರವಾಡದ ಚೇತನ ಫೌಂಡೇಶನ್, ಬೆಂಗಳೂರಿನ ಗಂಧದಗುಡಿ ಕನ್ನಡ ಸಂಘದಿಂದ ನಡೆದ ರಾಜ್ಯ ಮಟ್ಟದ ಕನ್ನಡ ನುಡಿ ಸಡಗರ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬರಹಗಾರರು ಅಧ್ಯಯನಶೀಲರಾಗಬೇಕು. ಇತರ ಬರಹಗಾರರ ಸಾಹಿತ್ಯವನ್ನು ಓದುವ ಒಳ್ಳೆಯದನ್ನು ಸ್ವೀಕರಿಸುವ ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಸಾಹಿತ್ಯ ರಚನೆಗೆ ಪ್ರೇರಣೆ ನೀಡಬೇಕು. ಅಂದಾಗ ಸಾಹಿತ್ಯ ಸಂವರ್ಧಿಸುವುದು. ಸ್ನೇಹ ಬಲಗೊಳ್ಳುವುದು ಎಂದರು.ಪ್ರೊ. ಪ್ರಕಾಶ ಸುಣಗಾರ ಮಾತನಾಡಿ, ಕಾವ್ಯ ಸಾಹಿತ್ಯದ ಜೀವಾಳ. ರವಿ ಕಾಣದ್ದನ್ನು ಕವಿ ಕಾಣುವನು ಎಂಬಂತೆ ಶಬ್ದ, ನುಡಿಗಳು ಅರ್ಥಪೂರ್ಣ ಎನ್ನಿಸುವಂತೆ ಕಾವ್ಯ ರಚನೆಗೆ ಯುವ ಬರಹಗಾರರು ಮುಂದಾಗಲಿ. ಜತೆಗೆ ಓದುಗರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ಭಾಷೆಯ ಬಳಕೆಯಾಗಲಿ ಎಂದರು.
ಈ ವೇಳೆ ಸಮ್ಮೇಳನದ ಸರ್ವಾಧ್ಯಕ್ಷೆ ರತ್ನಾ ಬದಿ ಮಾತನಾಡಿದರು. ಸಾಹಿತಿ ಪರ್ವಿನ್‌ಭಾನು ಬುಳ್ಳಣ್ಣವರ, ರಾಜೇಶ್ವರಿ ಹಿರೇಮಠ, ಮಂಜುನಾಥ ಭೀಮಕ್ಕಣ್ಣವರ, ಎಲ್.ಐ. ಲಕ್ಕಮ್ಮನವರ, ಸಾಹಿತಿ ಶಿವಲಿಂಗಪ್ಪ ಅಣ್ಣಿಗೇರಿ, ಶರಣಪ್ಪ ಹೊಸಂಗಡಿ, ಬಸವಣ್ಣೆವ್ವ ಹರ್ತಿ, ಜಿ.ಎನ್. ಪಾಟೀಲ, ನೇತ್ರಾ ಕುರಬರ, ಬೂದೇಶ ಮಜ್ಜಿಗುಡ್ಡ, ಸೌಜನ್ಯ ಪಾಟೀಲ, ಭಾಗ್ಯಶ್ರೀ ಹುರಕಡ್ಲಿ, ಶಿಲ್ಪಾ ಮಿಣಜಗಿ, ಕಸ್ತೂರಿ ಕಡಗದ, ರೇಖಾ ನಾಲ್ವಾಡ, ಮೇಘಾ ಬೆಳದಡಿ, ವಿಜಯಲಕ್ಷ್ಮೀ ಬಂಡಿವಾಡ, ಶಶಿಕಲಾ ಕಮತರ, ಜೆ. ಚಂದ್ರಶೇಖರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಕವನ ವಾಚಿಸಿದರು. ದೀಪ್ತಿ ಪಾಠಕ, ಪುಷ್ಪಲತಾ ಬಸವರಾಜ ಬಳ್ಳಾರಿ, ಚಂಪಾ ಪಾಟೀಲ, ಸುಮತಿ ಮುರುಗೇಶ ಗದಗಿನಮಠ, ಉಡಚಮ್ಮ ಮುದಿಯಪ್ಪ ವಾಲ್ಮೀಕಿ, ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ, ನಿರ್ಮಲಾ ಚಿತ್ತಾಮೂರ, ಶಕುಂತಲಾ ಬಂಡಿ, ರೇಖಾ ರೊಟ್ಟಿ, ಚಂದ್ರಕಲಾ ಸ್ಥಾವರಮಠ, ವಿಜಯಲಕ್ಷ್ಮೀ ಹಳ್ಳಿ, ಸಂಧ್ಯಾ ಕೋಟಿ, ಸುಶೀಲಾ ಕೋಟಿ, ವೀಣಾ ಕಾವೇರಿ, ಮೀನಾಕ್ಷಿ ಕೊರವನವರ, ಕಾವ್ಯಾ ದಂಡಿನ ಸೇರಿದಂತೆ ಸಾಹಿತಿಗಳು, ಗಣ್ಯರು ಇದ್ದರು. ಚೇತನಾ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಸ್ವಾಗತಿಸಿದರು. ಡಾ. ಜೆ. ಪ್ರೇಮಾ ನಿರೂಪಿಸಿದರು. ಸುಜಾತಾ ಪಾಟೀಲ ವಂದಿಸಿದರು.