ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪು
ಕುಸ್ತಿ ಕಲೆಯನ್ನು ಜಾತ್ರೆಗಳು ಮಾತ್ರ ಉಳಿಸಿ ಬೆಳೆಸುತ್ತಿವೆ. ಇದಕ್ಕೆ ಆಧುನಿಕ ಸ್ಪರ್ಶ ಕೊಟ್ಟು ಯುವಕರು ಕುಸ್ತಿ ಕಡೆ ವಾಲುವಂತೆ ಸರ್ಕಾರ ಪ್ರತಿ ಊರಿಗೊಂದು ಸುಸಜ್ಜಿತ ಗರಡಿ ನಿರ್ಮಿಸುವ ವ್ಯವಸ್ಥೆ ಮಾಡಿ, ಈ ಪುರಾತನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಕುಸ್ತಿ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕುಸ್ತಿ ಆಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಅರೋಗ್ಯದಿಂದ ಇರಲು ಸಾಧ್ಯ. ಆಟ ಆಡುವುದರಿಂದ ಕೆಟ್ಟ ಹವ್ಯಾಸಗಳಿಂದ ದೂರ ಉಳಿಯಬಹುದು. ತಾವು ಚಿಕ್ಕವರಿದ್ದಾಗ ಗರಡಿಮನೆಗೆ ಹೋದ ಪ್ರಸಂಗವನ್ನು ಸ್ಮರಿಸಿಕೊಂಡರು
ನಂತರ ಮಾತನಾಡಿದ ನಗರದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಭಾರತದಲ್ಲಿ ಕುಸ್ತಿ ಅತ್ಯಂತ ಪುರಾತನವಾದುದ್ದು, ನಮ್ಮ ದೇಶದ ಎರಡು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಕಾವ್ಯಗಳಲ್ಲಿ ಕುಸ್ತಿ ಪಟುಗಳ ಶ್ಲಾಘನೀಯವಾದ ಸಾಹಸ ಕಾರ್ಯಗಳಿಂದ ತುಂಬಿವೆ. ಕುಸ್ತಿ ನಶಿಸಿ ಹೋಗುತ್ತಿರುವುದು ಮಹಾ ದುರಂತ. ಮುಂದಿನ ದಿನಮಾನಗಳಲ್ಲಿ ಕುಸ್ತಿಯನ್ನು ಚಿತ್ರಗಳಲ್ಲಿ ತೋರಿಸುವ ಕಾಲ ಬರಬಹುದು ಎಂದರು.ಜ್ಞಾನೇಶ್ವರ ಜಮದಾಡೆ ಗೆಲುವು:
ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ತವಾಗಿ ಶುಕ್ರವಾರ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ನಡೆದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಮಹಾನ್ ಭಾರತ ಕೇಸರಿ ಜ್ಞಾನೇಶ್ವರ ಜಮದಾಡೆ ಗೆಲುವು ಸಾಧಿಸಿ ಬಹುಮಾನ ತಮ್ಮದಾಗಿಸಿಕೊಂಡರು.ಮಧ್ಯಪ್ರದೇಶ ಕೇಸರಿ ಹರಿಯಾಣದ ದೀಪಕಕುಮಾರ ಅವರೊಂದಿಗೆ ತೀವ್ರ ಸೆಣಸಾಟ ನಡೆಸಿದ ಪೈಲ್ವಾನ್ ಜ್ಞಾನೇಶ್ವರ ಜಮದಾಡೆ ಕುಸ್ತಿ ನಿಕಾಲಿ ಮಾಡಿ ಸಂಭ್ರಮಿಸಿದರು. ತೀವ್ರ ಕುತುಹಲ ಕೆರಳಿಸಿದ ಮತ್ತೊಂದು ಕುಸ್ತಿಯಲ್ಲಿ ಮಧ್ಯಪ್ರದೇಶದ ಅಮೀತ ಕುಮಾರ ಅವರನ್ನು ನೇಪಾಳದ ತೇವತಾಪ ಸೋಲಿಸಿದರು. ಪಂಜಾಬ ಕೇಸರಿ ಜೋಗಿಂದರ ಅವರನ್ನು ದಾವಣಗೇರೆ ಡಬಲ್ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ, ಪುಣೆಯ ಆದಿತ್ಯ ಪಾಟೀಲ ಅವರನ್ನು ಉಪಕರ್ನಾಟಕ ಕೇಸರಿ ಶಿವಾನಂದ ನಿರ್ವಾನಟ್ಟಿ ಹಾಗೂ ಹರಿಯಾಣದ ಲುಸನ್ ಭಾಗವತ ಅವರನ್ನು ಕರ್ನಾಟಕ ಕೇಸರಿ ನಾಗರಾಜ ಬಸಿಡೋಣಿ ಸೋಲಿಸಿದರು.
ಈ ವೇಳೆ ಮಲ್ಲಪ್ಪ ಮೇತ್ರಿ, ಯಾಕೂಬ ಹಣಗಂಡಿ, ಮಹಾಂತೇಶ ಬಾಡಗಿ, ಪ್ರಜ್ವಲ್ ಚಿಮ್ಮಡ, ಪಾರ್ಥ ಕಂಗ್ರಾಳಿ, ಮುಬಾರಕ ಇಂಗಳಿ ಗಜಾನನ ಹಣಗಂಡಿ, ರಾಮಚಂದ್ರ ದುಮ್ಮಕ್ಕನಾಳ, ಅಮಿತ ಪಾಟೀಲ, ಬಾಳು ಸಿಂದಿಕುರಬೇಟ ಸೇರಿ 50 ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳು ನಡೆದವು. ಒಂದರಿಂದ ನಾಲ್ಕನೇ ನಂಬರಿನ ಕುಸ್ತಿಗಳು ಸಂಜೆ ನಡೆದವು.ಮುಖಂಡರಾದ ಅಶೋಕಗೌಡ ಪಾಟೀಲ, ಸಿದ್ದು ಕೊಣ್ಣೂರ, ರವಿಗೌಡ ಪಾಟೀಲ, ಬಲವಂತಗೌಡ ಪಾಟೀಲ, ಶೇಖರ ಅಂಗಡಿ, ಮುದಕಪ್ಪ ಮಾಳಿ, ಶಿವಾನಂದ ಅಂಗಡಿ, ಮಹಾಲಿಂಗಪ್ಪ ಜಕ್ಕಣ್ಣವರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣಗೌಡ ಪಾಟೀಲ, ಸುನೀಲಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಬುರುಡ, ಸುನೀಲಗೌಡ ಪಾಟೀಲ, ಸಂದೀಪ ಕನಕರಡ್ಡಿ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ ಮುದಕಪ್ಪ ಮಾಳಿ, ಶಂಕರಗೌಡ ಪಾಟೀಲ ಅರವಿಂದ ಮಾಲಬಸರಿ,ಆನಂದ ಹಟ್ಟಿ ಶಶಿ ನಕಾತಿ , ಬಂದು ಪಕಾಲೀ, ಪ್ರಭು ತಂಬೂರಿ, ಚನ್ನು ದೇಸಾಯಿ, ಭೀಮಶಿ ಸಸಾಲಟ್ಟಿ, ದುಂಡಪ್ಪ ಜಾಧವ, ಚಿದಾನಂದ ಧರ್ಮಟ್ಟಿ, ಡಾ.ಎ.ಆರ್.ಬೆಳಗಲಿ, ಬಸನಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ,ಅಪ್ಪಾಶಿ ಕಾರಜೋಳ, ಪ್ರಕಾಶ ಅರಳಿಕಟ್ಟಿ, ಈರಪ್ಪ ದಿನ್ನಿಮನಿ, ರಮೇಶ ಕೆಸರಗೊಪ್ಪ, ಶಿವಲಿಂಗ ಘಂಟಿ, ಅಶೋಕಗೌಡ ಪಾಟೀಲ, ಮಹಾಲಿಂಗ ಕೌಜಲಗಿ,ಅಬ್ದುಲ್ ಬಾಗವಾನ, ಸಜ್ಜನಸಾಬ ಪೆಂಡಾರಿ, ಮಹಾಲಿಂಗ ಸನದಿ,ಚನ್ನಯ್ಯ ಚಟ್ಟಿಮಠ ಮಹಾದೇವ ಮಾರಾಪುರ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಇತರರು ಇದ್ದರು.
---ಬಾಕ್ಸ್
ಕುಸ್ತಿಯಲ್ಲಿ 46 ಜೋಡಿ ಭಾಗಿಬೆಳಗಾವಿಯ ಕ್ರೀಡಾ ಶಾಲೆಯ ಪ್ರೀತಿ ಚಿಕ್ಕೋಡಿ ಹಾಗೂ ಮಹಾಲಿಂಗಪುರದ ಮುಸ್ಮಾನ ನಧಾಪ ಅವರ ಮಧ್ಯೆ ಏಕೈಕ ಮಹಿಳಾ ಕುಸ್ತಿ ಪಂದ್ಯ ನಿಕಾಲಿಯಾಗದೇ ಸಮಬಲ ಫಲಿತಾಂಶ ಘೋಷಿಸಲಾಯಿತು.
ರಾಜ್ಯ ಅಂತಾರಾಜ್ಯ ಮಟ್ಟದ ಖ್ಯಾತ ಕುಸ್ತಿ ಪಟುಗಳು ಆಗಮಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿದರು. ಅಖಾಡದಲ್ಲಿ ಕುಸ್ತಿ ಪಟುಗಳು ತೋಡೆ ತಟ್ಟಿ ಶೆಡ್ಡು ಹೊಡೆದು ಒಬ್ಬರಿಗೊಬ್ಬರು ಸೆಣಸಾಡಿ ಪ್ರೇಕ್ಷಕರನ್ನು ರಂಜಿಸಿದರು. ನಡುನಡುವೆ ಪ್ರೇಕ್ಷಕರು ಕೇಕೇ ಚಪ್ಪಾಳೆ ಹೊಡೆದು ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಒಟ್ಟು 46 ಜೋಡಿಗಳು ಭಾಗವಹಿಸಿದವು.