ಸಾರಾಂಶ
ವಿಶ್ವಕರ್ಮರು ದೇಶದ ಪ್ರಗತಿ ಮತ್ತು ಸಮಾಜದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ವಿಶ್ವಕರ್ಮರು ದೇಶದ ಪ್ರಗತಿ ಮತ್ತು ಸಮಾಜದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಹೇಳಿದರು.ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಶ್ವಕರ್ಮರು ದೇಶದಲ್ಲಿರುವ ಎಲ್ಲ ದೇವಸ್ಥಾನಗಳ ಮೂರ್ತಿಗಳನ್ನು ಸೃಷ್ಟಿಸಿದ ಶಿಲ್ಪಿಗಳಾಗಿದ್ದಾರೆ. ಅವರು ನಿಸ್ವಾರ್ಥ ಮನೋಭಾವದ ತ್ಯಾಗ ಮೂರ್ತಿಗಳು. ಅಂತಹ ಕಲೆಯನ್ನು ಉಳಿಸಿ, ಬೆಳೆಸುವಂತಹ ಕಾರ್ಯ ಎಲ್ಲರೂ ಮಾಡಬೇಕು. ವಿಶ್ವಕರ್ಮ ಸಮಾಜದಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆಯಿದ್ದು, ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ಮಾತನಾಡಿ, ವಿಶ್ವಕರ್ಮ ಸಮಾಜದವರು ಬೇಡವಾದ ಕಲ್ಲು ಮತ್ತು ಕಟ್ಟಿಗೆಯಲ್ಲಿ ಸುಂದರವಾದ ಮೂರ್ತಿ, ವಿಗ್ರಹಗಳನ್ನು ಕೆತ್ತನೆ ಮಾಡುವ ಮೂಲಕ ಅದಕ್ಕೆ ಜೀವ ಕಳೆ ತುಂಬಿ ಪೂಜಿಸುವಂತೆ ಮಾಡುವ ಶಕ್ತಿ ಹೊಂದಿದ್ದಾರೆ. ಅವರು ಚಿಕ್ಕ ಸಮಾಜದವರಾಗಿದ್ದರೂ ಸಹಿತ ಅವರ ಹೃದಯ ವೈಶಾಲ್ಯತೆಯಿಂದ ದೊಡ್ಡವರಾಗಿದ್ದಾರೆ ಎಂದರು.ಪ್ರೌಢಶಾಲಾ ಶಿಕ್ಷಕ ರಾಮಚಂದ್ರಪ್ಪ ಬಡಿಗೇರ ವಿಶ್ವಕರ್ಮರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡಿದರು.
ಮೆರವಣಿಗೆ:ವಿಶ್ವಕರ್ಮ ಜಯಂತ್ಯುತ್ಸವದ ಅಂಗವಾಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಿಂದ ಪ್ರಮುಖ ಬೀದಿಗಳ ಮಾರ್ಗವಾಗಿ ಕಾಳಿಕಾದೇವಿಯ ದೇವಸ್ಥಾನದವರೆಗೆ ಭಗವಾನ್ ವಿಶ್ವಕರ್ಮ ಅವರ ಮೂರ್ತಿಯನ್ನು ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.ಕಾರ್ಯಕ್ರಮದ ಸಾನಿಧ್ಯವನ್ನು ಎ.ತಿರ್ಥೇಂದ್ರ ಮಹಾಸ್ವಾಮಿಗಳು, ನಾಗಮೂರ್ತೇಂದ್ರ ಮಹಾಸ್ವಾಮಿಗಳು, ದಿವಾಕರ ಮಹಾಸ್ವಾಮಿಗಳು ವಹಿಸಿದ್ದರು. ಈ ಸಂದರ್ಭ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಬಡಿಗೇರ, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರಪ್ಪ ಬಡಿಗೇರ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ತಾಲೂಕಾಧ್ಯಕ್ಷ ಶರಣಪ್ಪ ಬಡಿಗೇರ, ಮುಖಂಡರಾದ ಮಾನಪ್ಪ ಕಮ್ಮಾರ, ನೀಲಕಂಠಪ್ಪ ಬಡಿಗೇರ, ಕೃಷ್ಣಪ್ಪ ಪತ್ತಾರ, ಉಮ್ಮಣ್ಣ ಬಡಿಗೇರ, ಕೆ.ಆರ್. ಕಮ್ಮಾರ, ನಟರಾಜ ಸೋನಾರ, ಅನಿಲ ಕಮ್ಮಾರ, ಬಸವರಾಜ ಬಡಿಗೇರ, ಬಾಲಾಜಿ ಬಡಿಗೇರ, ದೇವರಾಯ ಬಡಿಗೇರ, ಶಿವಕುಮಾರ ಬಡಿಗೇರ, ಶ್ರೀಶೈಲ ಬಡಿಗೇರ, ಅಯ್ಯಪ್ಪ ಬಡಿಗೇರ, ಕಾಳೇಶ ಬಡಿಗೇರ, ಮಹಾಂತೇಶ ಬಡಿಗೇರ, ಮೌನೇಶ ದೇವರಗುಡಿ, ಮಹೇಶ ಬಡಿಗೇರ, ಜಯಣ್ಣ ಬಡಿಗೇರ ಸೇರಿದಂತೆ ಮತ್ತಿತರರಿದ್ದರು.