ಸಾರಾಂಶ
ಧಾರವಾಡ:
ಶಿವರಾತ್ರಿ ನಿಮಿತ್ತ ಇತ್ತೀಚೆಗೆ ಇಲ್ಲಿಯ ಕರ್ನಾಟಕ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 24 ಗಂಟೆಗಳ ನಿರಂತರ ಸಂಗೀತದ ಗಾನಯೋಗಿ ಸ್ವರ ಉತ್ಸವ ಯಶಸ್ವಿಯಾಯಿತು.ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಕುಮಾರ ಶಿವಯೋಗಿ, ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದೇಶಕಂಡ ಶ್ರೇಷ್ಠ ಗಾಯಕರು, ವಾದಕರು ಗಾನಯೋಗಿ ಸ್ವರ ಉತ್ಸವದಲ್ಲಿ ಪಾಲ್ಗೊಂಡು ಸಂಗೀತ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನೀಯ. ಪಂ. ಸೋಮನಾಥ ಮರಡೂರ ಅವರ ಕಲ್ಪನೆಯಂತೆ ಧಾರವಾಡದ ನೆಲದಲ್ಲಿ ಪಂ. ಪಂಚಾಕ್ಷರ ಗವಾಯಿಗಳ ಮತ್ತು ಪಂ. ಪುಟ್ಟರಾಜ ಗವಾಯಿಗಳ ಸ್ಮರಣೆಯಲ್ಲಿ ದೀನ-ದಲಿತ, ಬಡ ಮಕ್ಕಳ ಸಂಗೀತ ಕಲಿಕೆಗಾಗಿ ಸಂಗೀತ ಗ್ರಾಮ ನಿರ್ಮಾಣ ಮಾಡುವ ಸಂಕಲ್ಪ ಈಡೇರಿಸುವಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರದಿಂದ ಒದಗಿಸಿ, ಆಶ್ರಮ ನಿರ್ಮಿಸಲು ಇಲ್ಲಿನ ರಾಜಕಾರಣಿಗಳು ಇಚ್ಛಾಸಕ್ತಿ ವಹಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪಂ. ಸೋಮನಾಥ ಮರಡೂರ ಅವರು 80 ವಸಂತ ಪೂರ್ಣಗೊಳಿಸಿದ್ದಕ್ಕೆ ಅವರನ್ನು ಸನ್ಮಾನಿಸಲಾಯಿತು.ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಮಾತನಾಡಿ, ವಿಶಿಷ್ಟ ಹಿಂದೂಸ್ತಾನಿ ಕಾರ್ಯಕ್ರಮಗಳಿಗೆ ಎಲ್ಲರ ನೆರವು-ಸಹಕಾರ ಅಗತ್ಯ. ಆಗ ಮಾತ್ರ ಕಲೆ, ಪರಂಪರೆ ಉಳಿಯಲು ಸಾಧ್ಯ ಎಂದರು.ಮುಂಬೈನ ಪಂ. ರಾಕೇಶ್ ಚೌರಾಸಿಯಾ ಅವರ ಕೊಳಲು ವಾದನ, ಪದ್ಮಶ್ರೀ ಪಂ. ವಿಜಯ ಘಾಟೆಯವರ ತಾಲದಿಂಡಿ ವಿಶೇಷ ಕಾರ್ಯಕ್ರಮ, ಮೈಸೂರಿನ ವಿದ್ವಾನ್ ನಾಗರಾಜ, ವಿದ್ವಾನ್ ಡಾ. ಮಂಜುನಾಥ ಅವರ ಕರ್ನಾಟಕಿ ಶೈಲಿಯ ದ್ವಂದ್ವ ಪಿಟಿಲು ವಾದನ, ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ, ಬೆಂಗಳೂರಿನ ಪಂ. ವಿನಾಯಕ ತೊರವಿ, ಪಂ. ಸೋಮನಾಥ ಮರಡೂರ, ಉಸ್ತಾದ್ ಫಯಾಜಖಾನ್, ಡಾ. ಮೃತ್ಯುಂಜಯ ಅಗಡಿ, ಸದಾಶಿವ ಐಹೊಳೆ, ಡಾ. ಜಯದೇವಿ ಜಂಗಮಶೆಟ್ಟಿ, ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು, ದೆಹಲಿಯ ಡಾ. ಅವಿನಾಶಕುಮಾರ, ಹುಬ್ಬಳ್ಳಿ ಕೃಷ್ಣೇಂದ್ರ ವಾಡೇಕರ ಅವರ ಗಾಯನ, ಉಸ್ತಾದ್ ಶಫೀಕ್‌ಖಾನ್ ಅವರ ಸಿತಾರ ವಾದನ ಹಾಗೂ ಡಾ. ರವಿಕಿರಣ ನಾಕೋಡ ಅವರ ತಬಲಾ ಸೋಲೋ ಪ್ರಸ್ತುತ ಪಡಿಸಿದರು.ವಾದ್ಯ ಸಹಕಾರದಲ್ಲಿ ಪಂ. ರಘುನಾಥ ನಾಕೋಡ, ಬೆಂಗಳೂರಿನ ಪಂ. ರವೀಂದ್ರ ಯಾವಗಲ್, ಪಂ. ರಾಜೇಂದ್ರ ನಾಕೋಡ, ಬೆಳಗಾವಿಯ ಡಾ. ಸುಧಾಂಶು ಕುಲಕರ್ಣಿ, ಉಸ್ತಾದ ನಿಸಾರ ಅಹಮದ್, ಗುರುಪ್ರಸಾದ ಹೆಗಡೆ, ಡಾ. ಉದಯ ಕುಲಕರ್ಣಿ, ಸತೀಶ ಕೊಳ್ಳಿ, ಸತೀಶ ಭಟ್ಟ ಹೆಗ್ಗಾರ, ಡಾ. ಶ್ರೀಹರಿ ದಿಗ್ಗಾಂವಿ, ಬಸವರಾಜ ಹಿರೇಮಠ, ಪ್ರಸಾದ ಮಡಿವಾಳರ ಸಂಗತ ನೀಡಿದರು.
ಆರತಿ ದೇವಶಿಖಾಮನಿ ಮತ್ತು ರವಿ ಕುಲಕರ್ಣಿ ನಿರೂಪಿಸಿದರು. ಕುಮಾರ ಮರಡೂರ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.;Resize=(128,128))
;Resize=(128,128))