ಸಾರಾಂಶ
ಮಂತ್ರಾಕ್ಷತೆ, ಆಮಂತ್ರಣ ಮನೆಮನೆಗೆ ತಲುಪಿಸುವ ಮೂಲಕ ಅಭಿಯಾನ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ, ಶ್ರೀರಾಮ ಮಂದಿರದ ಪೋಟೋಗಳನ್ನು ಇಂದು ಅಂಬೇಡ್ಕರ ಕಾಲೋನಿಯಲ್ಲಿ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಮೂಲಕ ಅಭಿಯಾನ ನಡೆಸಿದರು.ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದ್ದು, ಅಂದು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಶ್ರೀರಾಮ ಪೂಜೆ ನೆರವೇರಿಸಿ, ಸಂಜೆ ಮನೆಯ ಆವರಣದಲ್ಲಿ ದೀಪಗಳಿಂದ ಅಲಂಕರಿಸಬೇಕು ಎಂದು ಪೂಜಾರ ಅವರು ಮನವಿ ಮಾಡಿ ಕೊಂಡರು.
ಅಭಿಯಾನಕ್ಕೂ ಮುನ್ನ ಶ್ರೀಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಷತೆ ಹಾಗೂ ಆಮಂತ್ರಣ ಪತ್ರಿಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಕಾಲೋನಿಯಲ್ಲಿ ನಿವಾಸಿಗಳು ಸಂಭ್ರಮದಿಂದ ಸ್ವಾಗತಿಸಿದರು.ಸಂಜು ಡಿಗ್ಗಿ, ನೀತಿನ ಮಿರಜಕರ, ರಾಜು ನಾಯಕ, ಮಾಧವ ಮೇಲ್ನಾಡ, ರಾಮ ಗೌಳಿ, ಸುನೀಲ ಗೀರಡೆ, ರಾಜು ಮಿರ ಜಕರ, ವಿನೋದ ಮಿರಜಕರ, ಅಪ್ಪು ಕೊಪ್ಪದ, ಪವನ ಮಹೇಂದ್ರಕರ, ಮಂಜುನಾಥ ಮಿರಜಕರ, ಬಾಬು ರಾಮದುರ್ಗ, ಈರಣ್ಣ ಲಿಂಗ ದಳ್ಳಿ, ಮುತ್ತು ಅಂಬಗೇರ, ಶ್ರೀಧರ ಅಂಬಿಗೇರ ಸೇರಿದಂತೆ ಅನೇ ಕರು ಉಪಸ್ಥಿತರಿದ್ದರು.