ಸಾರಾಂಶ
- ಪಾಲಿಕೆ ವ್ಯಾಪ್ತಿಯಲ್ಲಿ ಸಿಕ್ಕಸಿಕ್ಕಲ್ಲಿ ಕಸ ಸುರಿದರೆ ಕಠಿಣ ಕ್ರಮ ಜರುಗಿಸಿ: ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಗ್ರೇಟರ್ ಬೆಂಗಳೂರು ಅಥಾರಿಟಿಯವರು ಬೀದಿಗೆ ಕಸ ಎಸೆಯುವವರ ಮನೆ ಮುಂದೆ ಮರಳಿ ಕಸ ಹಾಕುವ, ₹1 ಸಾವಿರ ದಂಡ ವಿಧಿಸುವ, 2ನೇ ಸಲ ಕಸ ಹಾಕಿದರೆ ₹2 ಸಾವಿರ ದಂಡ ವಿಧಿಸುವ ಮೂಲಕ ಸಿಕ್ಕಸಿಕ್ಕಲ್ಲಿ ಕಸ ಎಸೆಯುವವರ ವಿರುದ್ಧ ವಿನೂತನ ಪ್ರಯತ್ನ ಮಾಡಿರುವುದು ಶ್ಲಾಘನೀಯ. ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲೂ ಅಂತಹ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ ತಿಳಿಸಿದ್ದಾರೆ.ದಾವಣಗೆರೆಯಲ್ಲೂ ಈ ಮಾದರಿಯ ಪ್ರಾಯೋಗಿಕ ವಿಧಾನ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಜಿಲ್ಲಾ ಕೇಂದ್ರದಲ್ಲಿ ಬೀದಿಬದಿ, ಮಾರುಕಟ್ಟೆ, ನಿರ್ಜನ ಪ್ರದೇಶ, ಖಾಲಿ ನಿವೇಶನ, ಊರ ಹೊರಗಿನ ಪ್ರದೇಶದಲ್ಲಿ ಕಂಡಕಂಡಲ್ಲಿ ಕಸ ಎಸೆಯುವವರ ಹಾವಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಸ ಎಸೆಯುವವರ ಬಾಯಿಂದ ಸಹಜವಾಗಿ ಬರುವ ಮಾತೆಂದರೆ ತಮ್ಮ ಮನೆ ಬಳಿ ಕಸದ ಗಾಡಿ ಬಂದಿಲ್ಲವೆಂದು. ನಾವು ಹೇಗೆ ಕಸ ಮನೆಯಲ್ಲಿ ಇಟ್ಟುಕೊಳ್ಳಬೇಕು, ದುರ್ವಾಸನೆ ಬರುತ್ತದೆಂಬ ಸಿದ್ಧ ಉತ್ತರ ನೀಡುತ್ತಾರೆ. ಪಾಲಿಕೆ ಪರಿಸರ, ಆರೋಗ್ಯ ಅಧಿಕಾರಿಗಳೂ ನಾಗರಿಕರ ಇಂತಹ ಸಮಸ್ಯೆ ಪರಿಹರಿಸಬೇಕು. ಸಾಕಷ್ಟು ಕಸ ಸಂಗ್ರಹದ ವಾಹನಗಳಿದ್ದರೂ ಸಮಯಕ್ಕೆ ಸರಿಯಾಗಿ ಪ್ರತಿದಿನ ಗಾಡಿ ಬರುತ್ತಿಲ್ಲವೆಂಬ ಜನಸಾಮಾನ್ಯರ ಕೂಗಿಗೆ ಅಧಿಕಾರಿಗಳೂ ಸ್ಪಂದಿಸಲಿ ಎಂದಿದ್ದಾರೆ.ಪಾಲಿಕೆ ಅಧಿಕಾರಿಗಳು ಕಸದ ಗಾಡಿ ವಾಹನ ಚಾಲಕರು ಕರ್ತವ್ಯಕ್ಕೆ ಬಂದಿಲ್ಲವೆಂಬ ಸಬೂಬು ಹೇಳುವುದು ಸರಿಯಲ್ಲ. ಹೆಚ್ಚುವರಿ ಚಾಲಕರನ್ನು ಇಟ್ಟುಕೊಂಡು, ಯಾವ ವಾರ್ಡ್‌ಗೆ ಒಂದು ದಿನ ಚಾಲಕರು ರಜೆ ಮಾಡುತ್ತಾರೋ, ಅಂತಹ ವಾರ್ಡ್‌ಗೆ ಬದಲಿ ಚಾಲಕರನ್ನು ಕಳಿಸುವ ಪ್ರಯತ್ನ ಮಾಡಬಹುದು. ಗಾಡಿ ದುರಸ್ತಿಗೆ ಹೋದರೆ ಪರ್ಯಾಯ ಕಸದ ಗಾಡಿ ವ್ಯವಸ್ಥೆ ಮಾಡಬೇಕು. ಆದರೆ, ತಿಂಗಳುಗಟ್ಟಲೇ ಒಂದೇ ವಾರ್ಡ್‌ನ ಕಸದ ಗಾಡಿ ದುರಸ್ತಿಪಡಿಸಲು ಸಾಧ್ಯವಿಲ್ಲವೆಂದರೆ ಏನರ್ಥ? ರಿಪೇರಿ ಮಾಡಿದ ಗ್ಯಾರೇಜ್‌ನವರ ಬಿಲ್ ಸರಿಯಾಗಿ ಮಂಜೂರಾಗಿಲ್ಲವೆಂದರೆ ಅದು ಪಾಲಿಕೆ ಆಡಳಿತ ವೈಫಲ್ಯ ಎಂದು ತಿಳಿಸಿದ್ದಾರೆ.
ನಿತ್ಯ ಕಸದ ಗಾಡಿ ಬಂದರೂ ಅದಕ್ಕೆ ಕಸ ಹಾಕದೇ, ಸಿಕ್ಕಸಿಕ್ಕಲ್ಲಿ ಕಸ ಎಸೆಯುವ ರೋಗವೂ ಕೆಲವರಲ್ಲಿದೆ. ಬಹುತೇಕ ಬಡಾವಣೆಗಳಲ್ಲಿ ರಾತ್ರಿ 9-10ರ ನಂತರ ವಾಕಿಂಗ್ ನೆಪದಲ್ಲಿ ಕಸದ ಪಟ್ಟಣಗಳ ಎಸೆಯುವವ ಬುದ್ಧಿವಂತರೂ ಇದ್ದಾರೆ. ಅಂತಹವರು ಖಾಲಿ ನಿವೇಶನ, ರಸ್ತೆ ಬದಿ, ಯಾರದೋ ಮನೆ, ಅಂಗಡಿ, ಕಟ್ಟಡದ ಮುಂದೆ ಕಸ ಹಾಕುವುದು, ಚಿಕ್ಕಪುಟ್ಟ ಚರಂಡಿ, ರಾಜ ಕಾಲುವೆ, ರಸ್ತೆ, ವೃತ್ತಗಳಲ್ಲಿ ಕಸ ಸುರಿಯುತ್ತಾರೆ. ಅಂತಹವರ ವಿರುದ್ಧವೂ ಪಾಲಿಕೆ ಅಧಿಕಾರಿಗಳು ಸ್ವಚ್ಛತೆ ಕಾಪಾಡಲು ದಿಟ್ಟ ಕ್ರಮ ಕೈಗೊಳ್ಳಲಿ. ಪಾಲಿಕೆಗೆ ಸ್ವಚ್ಛತೆಗೆ ಪ್ರಶಸ್ತಿ ಪಡೆದಿದ್ದು, ನೂರಾರು ಪೌರ ಕಾರ್ಮಿಕರ ಪರಿಶ್ರಮವೂ ಸಾರ್ಥಕವಾಗುತ್ತದೆ. ಆಗ ಮಾತ್ರ ಸ್ವಚ್ಛ ದಾವಣಗೆರೆ ಕಲ್ಪನೆ ಸಾಕಾರಗೊಳ್ಳಬಹುದು.- - -
(ಬಾಕ್ಸ್) * ಕಠಿಣ ಕ್ರಮ ಕೈಗೊಳ್ಳದೇ ಕಸ ಸಮಸ್ಯೆ ಬಗೆಹರಿಯಲ್ಲ ಭಗೀರಥ ವೃತದಿಂದ ಹೋಗುವ ಎಸ್ಎಸ್ ಆಸ್ಪತ್ರೆ ರಸ್ತೆ ಮತ್ತು ಎಸ್ಎಸ್ ಆಸ್ಪತ್ರೆಯಿಂದ ಪಿ.ಬಿ. ರಸ್ತೆಯಲ್ಲಿ ಹೋಗುವ- ಬರುವ ಜನರು ತಮ್ಮ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕಸ ಒಯ್ದು, ಹೆದ್ದಾರಿ, ಸರ್ವೀಸ್ ರಸ್ತೆ ಬದಿ ಎಸೆಯುವ ದೃಶ್ಯ ಪ್ರತಿದಿನ ಕಾಣುತ್ತದೆ. ಅದೇ ರೀತಿ ಎಲ್ಲ ಪ್ರಮುಖ ರಸ್ತೆಗಳಲ್ಲೂ ಪ್ರತಿಷ್ಟಿತ ಬಡಾವಣೆಗಳಲ್ಲಿ ಇಂತಹದ್ದೇ ಕೆಲಸ ಮಾಡುತ್ತಾರೆ. ಇವರೆಲ್ಲಾ ವಿದ್ಯಾವಂತ ಅನಾಗರಿಕರು. ಇಂತಹವರಿಗೆ ಬುದ್ಧಿ ಹೇಳುವವರು ಯಾರು? ಪಾಲಿಕೆ ಅಧಿಕಾರಿಗಳು ರಸ್ತೆಗೆ ಕಸ ಎಸೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದೇ ಕಸದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹಿರಿಯ ವಕೀಲರೂ ಆಗಿರುವ ಎ.ವೈ.ಪ್ರಕಾಶ ತಿಳಿಸಿದ್ದಾರೆ.- - -
-30ಕೆಡಿವಿಜಿ6: ಎ.ವೈ.ಪ್ರಕಾಶ;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))