ಸಾರಾಂಶ
- ಅಂಬೇಡ್ಕರ್ ಸೇವಾ ಸಮಿತಿ ನೇತೃತ್ವದಲ್ಲಿ ಹೋರಾಟ: ಜಿಲ್ಲಾಧ್ಯಕ್ಷ
- - -- ಅಕ್ರಮ ಸಕ್ರಮದಡಿ 94ಸಿ ಅರ್ಜಿ ಸಲ್ಲಿಸಿದ್ದರೂ ವಜಾ ಖಂಡನೀಯ
- ಕೆಲ ಸವರ್ಣೀಯರು ದೌರ್ಜನ್ಯ ನಡೆಸಿದ್ದರೂ ಯಾವುದೇ ದೂರು, ಕ್ರಮವಿಲ್ಲ- ಅದೇ ಸ್ಥಳದಲ್ಲಿ ಹಕ್ಕುಪತ್ರ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ
- - -ಹೊನ್ನಾಳಿ: ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಸರ್ವೇ ನಂ.96 -3 ರಲ್ಲಿರುವ 1.20 ಗುಂಟೆ ಜಮೀನಿನಲ್ಲಿ ದಲಿತರು ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತಿದ್ದ ಸುಮಾರು 26 ನಿವೇಶನರಹಿತರು, ನಿವೇಶನಗಳನ್ನು ಸಕ್ರಮ ಮಾಡಿಕೊಡುವಂತೆ ಸರ್ಕಾರಕ್ಕೆ 94ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸಕ್ರಮ ಮಾಡಿಕೊಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ವಿರುದ್ಧ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್ ನೇತೃತ್ವದಲ್ಲಿ ಶೀಘ್ರದಲ್ಲಿಯೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷ ಎ.ಕೆ.ಕುಮಾರ್ ತಿಳಿಸಿದ್ದಾರೆ.
ಹತ್ತಾರು ವರ್ಷಗಳಿಂದ ನಿವೇಶನರಹಿತರು ಗುಡಿಸಲುಗಳಲ್ಲಿಯೇ ಬದುಕುತ್ತಿದ್ದಾರೆ. ಆದರೆ ಅಲ್ಲಿನ ಕೆಲವು ದಲಿತ ವಿರೋಧಿಗಳ ರಾಜಕೀಯ ನಡೆಯಿಂದ ಅವರನ್ನು ಅಲ್ಲಿಂದ ತೆರವುಗೊಳಿಸಿ, ಅವರ ಮೇಲೆ ಅಕ್ರಮ ಭೂ ಕಾಯ್ದೆ ಕಾನೂನು ಅಡಿಯಲ್ಲಿ ಕಂದಾಯ ಇಲಾಖೆಯವರು ದೂರು ದಾಖಲಿಸಿದ್ದಾರೆ. ಅಕ್ರಮ ಸಕ್ರಮದ 94ಸಿ ಅರ್ಜಿಯನ್ನು ಸಹ ವಜಾಗೊಳಿಸಿದ್ದಾರೆ. ಗುಡಿಸಲುಗಳಿಗೆ ದಲಿತ ವಿರೋಧಿಗಳು ಬೆಂಕಿ ಹಾಕಿದ್ದಾರೆ. ಕೆಲವು ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.ದಲಿತರ ಮೇಲೆ ದೌರ್ಜನ್ಯ ನಡೆಸಿದ ಸವರ್ಣೀಯರ ಮೇಲೆ ಯಾವುದೇ ದೂರುಗಳು ದಾಖಲಿಸಿಲ್ಲ. ಒಕ್ಕಲೆಬ್ಬಿಸಿರುವ ಗುಡಿಸಲು ನಿವಾಸಿಗಳಿಗೆ ಅದೇ ಸ್ಥಳದಲ್ಲಿ ಹಕ್ಕುಪತ್ರ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಎ.ಕೆ. ಕುಮಾರ್ ತಿಳಿಸಿದ್ದಾರೆ.
- - -(ಸಾಂದರ್ಭಿಕ ಚಿತ್ರ)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))