ಹೊಸಪೇಟೆ: ಮಾನಸಿಕ ಒತ್ತಡದಲ್ಲಿ ಜೀವನ ಸಾಗಿಸುತ್ತಿರುವುದರಿಂದ ನೆಮ್ಮದಿಗಾಗಿ ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳ ವಾತಾವರಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೊಬೈಲ್‌ಗಳಿಂದ ದೂರ ಇರಬೇಕು ಎಂದು ಉಪನ್ಯಾಸಕಿ ಸೌಮ್ಯ ಹೇಳಿದರು.ಇಲ್ಲಿನ ಸಂಕ್ಲಾಪುರದ ಸರಸ್ವತಿ ಮಹಿಳಾ ಸಂಘ ಮತ್ತು ವಾಯ್ಸನ್ ಡ್ಯಾನ್ಸ್ ಸ್ಟುಡಿಯೋ ಸಹಯೋಗದಲ್ಲಿ ನೂತನ ನೃತ್ಯ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲ ಪಾಲಕರ ಸೇರಿದಂತೆ ವಿದ್ಯಾರ್ಥಿಗಳು ಅಂಕಗಳತ್ತ ಓಡುತ್ತಿದ್ದಾರೆ. ಇನ್ನು ಕೆಲವರು ಮತ್ತು ವಿದ್ಯಾರ್ಥಿಗಳು ಮೊಬೈಲ್‌ಗಳ ಪ್ರಪಂಚದಲ್ಲಿ ಮುಳುಗುತ್ತಿದ್ದಾರೆ. ಇದು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ. ಇದನ್ನು ತಡೆಯಲು ಮಕ್ಕಳು ನೃತ್ಯ ಸಂಗೀತ ಮತ್ತು ಸಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವಂತೆ ಮಾಡುವ ಮೂಲಕ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಹೇಳಿದರು.ಪತ್ರಕರ್ತ ಅನಂತ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ನಿರ್ಮಿಸಬೇಕು ಎಂದರು.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಮೆಂಟರ್ ಮಲ್ಲೇಶ್ ಮಾತನಾಡಿ, ಪ್ರತಿ ಮಗು ಶಿಕ್ಷಣದ ಜತೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.ಸ್ಥಳೀಯ ಮುಖಂಡ ಹುಲಗಪ್ಪ, ನಿವೃತ್ತ ಶಿಕ್ಷಕ ಪಾಂಡುರಂಗ ರಾವ್ ನಿಕ್ಕಂ, ಸರಸ್ವತಿ ಮಹಿಳಾ ಸಂಘದ ಅಧ್ಯಕ್ಷ ರಾಜೇಶ್ವರಿ ಇದ್ದರು. ಸರಸ್ವತಿ ಮಹಿಳಾ ಸಂಘದ ಸದಸ್ಯರು ಕಾರ್ಯಕರ್ತರು, ಸಂಕ್ಲಾಪುರ ಭಾಗದ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೊಸಪೇಟೆ ನಗರದ ಸರಸ್ವತಿ ಮಹಿಳಾ ಸಂಘ ಮತ್ತು ವಾಯ್ಸನ್ ಡ್ಯಾನ್ಸ್ ಸ್ಟುಡಿಯೋ ಸಹಯೋಗದಲ್ಲಿ ನೂತನ ನೃತ್ಯ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸಕಿ ಸೌಮ್ಯ ಮಾತನಾಡಿದರು.