ಲೋಕಾಪುರ-ಬಾಗಲಕೋಟೆ ರಸ್ತೆಯ ಭಂಟನೂರ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದ ಲಾರಿ-ಸಿಮೆಂಟ್ ಟ್ಯಾಂಕರ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಲೋಕಾಪುರ-ಬಾಗಲಕೋಟೆ ರಸ್ತೆಯ ಭಂಟನೂರ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದ ಲಾರಿ-ಸಿಮೆಂಟ್ ಟ್ಯಾಂಕರ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮದ ಹಾಲಿ ವಸ್ತಿ ಮಿಣಜಗಿಯ ರೇವಣಸಿದ್ದ ವಿಜಯಕುಮಾರ ಕಡೆಮನಿ(೨೦), ಸುರೇಶ ಶಾಂತಪ್ಪ ಕೊಣ್ಣೂರ (೩೩), ಕೊಪ್ಪಳ ಜಿಲ್ಲೆಯ ಕಣಸಾವಿ ಗ್ರಾಮದ ಮಲ್ಲಿಕಾರ್ಜುನ ಶರಣಪ್ಪ ಗುರಿಕಾರ (೨೨) ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಮೇಶ ದುರಗಪ್ಪ ಮಾದರ ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಷ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಹಾದೇವ ಶಿರಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದರು. ಪಿಎಸ್‌ಐ ಕಾಡಪ್ಪ ಜಕ್ಕನ್ನವರ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.