ಸೋತವರು ಮತ್ತೆ ಗೆಲ್ಲುತ್ತಾರೆ: ಉಡುಪಿ ವಿಶ್ವನಾಥ ಶೆಣೈ

| Published : Nov 11 2025, 03:00 AM IST

ಸಾರಾಂಶ

ರಾಜ್ಯ ಅರಣ್ಯ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಪತ್ರಿಕೆ ವತಿಯಿಂದ ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹಯೋಗದಲ್ಲಿ ಉಡುಪಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ - 2025 ಭಾನುವಾರ ನೆರವೇರಿತು.

ಕನ್ನಡಪ್ರಭದಿಂದ ಅರಣ್ಯ, ವನ್ಯಜೀವಿಗಳ ರಕ್ಷಣೆಯ ಜಾಗೃತಿ ಶ್ಲಾಘನೀಯ: ರವಿರಾಜ್ ಎಚ್.ಪಿ.

ಉಡುಪಿ: ಯಾವುದೇ ಸ್ಪರ್ಧೆಯಲ್ಲಿ ಸೋತವರು ಹೆದರಬೇಕಾಗಿಲ್ಲ, ಒಮ್ಮೆ ಸೋತವರೇ ಮತ್ತೆ ಗೆದ್ದಿದ್ದಾರೆ, ಗೆದ್ದವರು ಸುಮ್ಮನಿರಬಹುದು, ಆದರೆ ಸೋತವರು ಸುಮ್ಮನೆ ಕುಳಿತುಕೊಳ್ಳಬಾರದು, ಪುನಃ ಪ್ರಯತ್ನ ಮಾಡಬೇಕು, ಅನುಭವ ಪಡೆದುಕೊಳ್ಳಬೇಕು, ಆಗ ಗೆಲ್ಲುವುದು ಸುಲಭವಾಗುತ್ತದೆ ಎಂದು ಹಿರಿಯ ಸಾಂಸ್ಕೃತಿಕ, ಸಾಮಾಜಿಕ ಸೇವಕ ಉಡುಪಿ ವಿಶ್ವನಾಥ ಶೆಣೈ ಎಳೆಯ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.ರಾಜ್ಯ ಅರಣ್ಯ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಪತ್ರಿಕೆ ವತಿಯಿಂದ ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ - 2025ರ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.ಅಭ್ಯಾಗತರಾಗಿದ್ದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿ, ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್ ವಾಹಿನಿಗಳು ಈ ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿದ್ದು ಮಾತ್ರವಲ್ಲದೆ, ಅರಣ್ಯ - ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.ತಾಳ್ಮೆಯ ಪಾಠ-ತಾರಾ ಆಚಾರ್ಯ: ಉಡುಪಿ ಲಯನ್ಸ್ ಕ್ಲಬ್ ಲಕ್ಷ್ಯ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ಚಿತ್ರಕಲೆಯು ಮಕ್ಕಳಿಗೆ ಏಕಾಗ್ರತೆ, ತಾಳ್ಮೆ ಹಾಗೂ ಸಂಯಮದ ಪಾಠ ಕಲಿಸುವುದರ ಜೊತೆಗೆ, ಮನಸ್ಸಿಗೆ ಸದಾ ಪ್ರಸನ್ನತೆಯಿಂದ ಇರಿಸಿಕೊಳ್ಳಲು ಸಹಕಾರಿಯಾಗಿದೆ. ಮೊಬೈಲ್‌ಗಳಲ್ಲಿ ಕಳೆದು ಹೋಗುತ್ತಿರುವ ಮಕ್ಕಳಲ್ಲಿ ಕನ್ನಡ ಪ್ರಭ ಚಿತ್ರಕಲಾ ಸ್ಪರ್ಧೆಯ ಮೂಲಕ ಅವರನ್ನು ಹೊರಜಗತ್ತನ್ನು ನೋಡುವ, ಭಾವನೆಗಳನ್ನು ಉತ್ತೇಜಿಸುವ ಕೆಲಸ ಮಾಡಿದೆ. ಈ ಪುಟ್ಟ ಮಕ್ಕಳು ತಮ್ಮ ಮನಸ್ಸಿನ ಭಾವಗಳಿಗೆ ಬಣ್ಣ ತುಂಬಿ, ಅದನ್ನು ಚಿತ್ರದ ರೂಪದಲ್ಲಿ ಹಾಳೆಯಲ್ಲಿ ಬಿಚ್ಚಿಡುವುದನ್ನು ನೋಡುವುದೇ ಒಂದು ಚಂದ ಎಂದರು. ಮಲಬಾಲ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಪುರಂದರ ತಿಂಗಳಾಯ ಶುಭ ಹಾರೈಸಿದರು. ಕನ್ನಡಪ್ರಭದ ಉಡುಪಿ ಜಿಲ್ಲಾ ವರದಿಗಾರ ಸುಭಾಸಚಂದ್ರ ಎಸ್. ವಾಗ್ಳೆ ಸ್ವಾಗತಿಸಿ, ವಂದಿಸಿದರು. ಏಷಿಯಾನೆಟ್ ಸುವರ್ಣ ನ್ಯೂಸ್‌ನ ಉಡುಪಿ ಜಿಲ್ಲಾ ಪ್ರತಿನಿಧಿ ಶಶಿಧರ ಮಾಸ್ತಿಬೈಲು, ಹರೀಶ್ ಕುಂದರ್, ಕನ್ನಡಪ್ರಭದ ತಾಲೂಕು ವರದಿಗಾರರಾದ ರಾಮ್ ಅಜೆಕಾರ್, ಶ್ರೀಕಾಂತ್ ಹೆಮ್ಮಾಡಿ, ಮಾರುಕಟ್ಟೆ ವಿಭಾಗದ ಅಕ್ಷಯ್ ಮತ್ತು ಮಂಗಳೂರು ಕಚೇರಿಯ ಸಹಾಯಕ ವ್ಯವಸ್ಥಾಪಕ ದೀಕ್ಷಿತ್ ಕುಲಾಲ್‌ ಕಾರ್ಯಕ್ರಮ ಸಂಯೋಜಿಸಿದರು. ಚಿತ್ರಕಲಾ ಶಿಕ್ಷಕರಾದ ಜ್ಞಾನೇಶ್ ಆಚಾರ್ಯ ಮತ್ತು ನವೀನ್ ತೀರ್ಪುಗಾರರಾಗಿ ಸಹಕರಿಸಿದರು.

ಮಕ್ಕಳ ಕೈಯಿಂದಲೇ ಉದ್ಘಾಟನೆ:

ಸ್ಪರ್ಧೆಯನ್ನು ಚಿಣ್ಣರ ಕೈಯಿಂದಲೇ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್‌ ಕ್ಲಬ್ ಲಕ್ಷ್ಯ ಅಧ್ಯಕ್ಷೆ ತಾರಾ ಯು. ಆಚಾರ್ಯ, ಮಾಜಿ ಅಧ್ಯಕ್ಷ ರಮೇಶ್‌ ಕೆ. ಶೆಟ್ಟಿ. ಮಾಜಿ ಖಜಾಂಚಿ ಸತೀಶ್ ರಾವ್ ಉಪಸ್ಥಿತರಿದ್ದರು, ಜ್ಯೋತಿ ದೇವಾಡಿಗ ಪ್ರಾರ್ಥನೆ ಮಾಡಿದರು.ತಾಲೂಕು ಮಟ್ಟದ ಸ್ಪರ್ಧೆಗಳ ಫಲಿತಾಂಶ: ಕುಂದಾಪುರ ತಾಲೂಕು: ಪ್ರಥಮ - ದೃತಿ ಸಂತೋಷ್ ಪೂಜಾರಿ (ಲಿಟ್ಲ್‌ ರಾಕ್ ಇಂಡಿಯನ್ ಸ್ಕೂಲ್), ದ್ವಿತೀಯ - ನಿಧೀಶ್ ಜೆ. ನಾಯ್ಕ್ (ಜಿ. ಎಂ. ವಿದ್ಯಾನಿಕೇತನ ಸ್ಕೂಲ್), ತೃತೀಯ - ಯಕ್ಷತ್ ಶೆಟ್ಟಿ (ವಿಶ್ವವಿನಾಯಕ ಇಂ.ಮೀ.ಸ್ಕೂಲ್), ಸಮಾಧಾನಕರ - ತೇಜಸ್ ಪಿ. ಶೆಟ್ಟಿ (ಜಿ.ಎಂ.ವಿದ್ಯಾನಿಕೇತನ), ಕುಶಿ ಪಿ. ಶೆಟ್ಟಿ (ಸ.ಹಿ. ಪ್ರಾ. ಶಾಲೆ, ಕರ್ಕುಂಜೆ), ಸಮರ್ಥ ಎಸ್. (ಸ.ಹಿ. ಪ್ರಾ. ಶಾಲೆ, ರಟ್ಟಾಡಿ).

ಕಾರ್ಕಳ ತಾಲೂಕು: ಪ್ರಥಮ - ಸಾನಿಧ್ಯಾ ಆಚಾರ್ಯ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ದ್ವಿತೀಯ - ವಂಶಿತ್ ಆಚಾರ್ಯ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ್), ತೃತೀಯ - ಪ್ರವೀತ್ ವಿ. (ಅಮೃತ ಭಾರತಿ ಶಾಲೆ ಹೆಬ್ರಿ), ಸಮಾಧಾನಕರ - ತ್ರಿಶಾ ಆಚಾರ್ಯ (ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಬ್ರಿ), ವಾಸವಿ ಪುತ್ರನ್ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ವಿದಿತ್ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ್).

ಉಡುಪಿ ತಾಲೂಕು: 4 - 5 ನೇ ತರಗತಿ ವಿಭಾಗದಲ್ಲಿ ಪ್ರಥಮ - ಪಾವನಿ ಜಿ, ರಾವ್ (ಅನಂತೇಶ್ವರ ಪ್ರಾ.ಶಾಲೆ, ಉಡುಪಿ), ದ್ವಿತೀಯ - ದಿಶಾ ಡಿ. ಪೂಜಾರಿ (ಲಾರ್ಡ್ಸ್ ಇಂ.ಸ್ಕೂಲ್ ನಿಟ್ಟೂರು), ತೃತೀಯ - ತೇಜಸ್ವಿ ವಿ. ರಾವ್ (ಮುಕುಂದ ಕೃಪಾ ಶಾಲೆ ಉಡುಪಿ) ಸಮಾಧಾನಕರ - ಆಕ್ರಿಶ್ ಕೆ. ರಾವ್ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ), ನಿಹಾರಿಕಾ ಸಿ. ದೇವಾಡಿಗ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ), ಲಾವಿ ಎಸ್. (ಶ್ರೀ ನಾರಾಯಣ ಗುರು ಸ್ಕೂಲ್ ಮಲ್ಪೆ)6 - 7 ನೇ ತರಗತಿ ವಿಭಾಗ: ಪ್ರಥಮ - ಕನಿಷ್ಕ (ವಿದ್ಯೋದಯ ಸ್ಕೂಲ್ ಉಡುಪಿ) ದ್ವಿತೀಯ - ಹರ್ಷಿತಾ ಪ್ರಭು ( ವಿದ್ಯೋದಯ ಸ್ಕೂಲ್‌, ಉಡುಪಿ), ತೃತೀಯ - ಕೀರ್ತನಾ ನಾಯಕ್ (ಪರ್ಕಳ ಹೈಸ್ಕೂಲ್ ಪರ್ಕಳ), ಸಮಾಧಾನಕರ - ಮನಸ್ವಿ ನಾಯಕ್ (ಕ್ರೈಸ್ಟ್‌ ಸ್ಕೂಲ್ ಮಣಿಪಾಲ), ಅನ್ವಿ ಎ. ಯು. (ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಒಳಕಾಡು), ಪ್ರಣೀತ್ (ವಿದ್ಯೋದಯ ಸ್ಕೂಲ್‌, ಉಡುಪಿ)8 - 10ನೇ ತರಗತಿ ವಿಭಾಗ: ಪ್ರಥಮ - ಸಿಂಚನಾ ಮೆಂಡನ್ (ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ), ದ್ವಿತೀಯ - ಪ್ರೃಥ್ವಿರಾಜ್ (ವಿದ್ಯೋದಯ ಸ್ಕೂಲ್ ಉಡುಪಿ), ತೃತೀಯ - ಇಶಾಂತ್ ಎಸ್. ಆಚಾರ್ಯ (ಆನಂತೇಶ್ವರ ಸ್ಕೂಲ್ ಉಡುಪಿ), ಸಮಾಧಾನಕರ - ಪ್ರೇರಿತ್ ಯು. (ಇಎಂಎಚ್ ಸ್ಕೂಲ್ ಕುಂಜಿಬೆಟ್ಟು), ಪ್ರಣೀತ್ ಪೂಜಾರಿ(ಎಸ್.ವಿ.ಎಸ್. ಹೈಸ್ಕೂಲ್ ಕಿದಿಯೂರು), ಅವನಿ ಎಂ. ಮೇಸ್ತಾ (ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ಉಡುಪಿ)ಜಿಲ್ಲಾ ಮಟ್ಟದ ಫಲಿತಾಂಶ:

4 - 5 ನೇ ತರಗತಿ ವಿಭಾಗ: ಪ್ರಥಮ - ಪಾವನಿ ಜಿ, ರಾವ್ (ಅನಂತೇಶ್ವರ ಪ್ರಾ.ಶಾಲೆ, ಉಡುಪಿ), ದ್ವಿತೀಯ - ಪ್ರವೀತ್ ವಿ. (ಅಮೃತ ಭಾರತಿ ಶಾಲೆ ಹೆಬ್ರಿ), ತೃತೀಯ - ದಿಶಾ ಡಿ. ಪೂಜಾರಿ (ಲಾರ್ಡ್ಸ್ ಇಂ.ಸ್ಕೂಲ್ ನಿಟ್ಟೂರು), ಸಮಾಧಾನಕರ - ಆಕ್ರಿಶ್ ಕೆ. ರಾವ್ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ), ತೇಜಸ್ವಿ ವಿ. ರಾವ್ (ಮುಕುಂದ ಕೃಪಾ ಶಾಲೆ ಉಡುಪಿ), ನಿಹಾರಿಕಾ ಸಿ. ದೇವಾಡಿಗ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ)6 - 7 ನೇ ತರಗತಿ ವಿಭಾಗ: ಪ್ರಥಮ - ಕನಿಷ್ಕ (ವಿದ್ಯೋದಯ ಸ್ಕೂಲ್ ಉಡುಪಿ), ದ್ವಿತೀಯ - ನಿಧೀಶ್ ಜೆ. ನಾಯ್ಕ್ (ಜಿ. ಎಂ. ವಿದ್ಯಾನಿಕೇತನ ಸ್ಕೂಲ್), ತೃತೀಯ - ಹರ್ಷಿತಾ ಪ್ರಭು ( ವಿದ್ಯೋದಯ ಸ್ಕೂಲ್‌, ಉಡುಪಿ), ಸಮಾಧಾನಕರ - ಕೀರ್ತನಾ ನಾಯಕ್ (ಪರ್ಕಳ ಹೈಸ್ಕೂಲ್ ಪರ್ಕಳ), ಮನಸ್ವಿ ನಾಯಕ್ (ಕ್ರೈಸ್ಟ್‌ ಸ್ಕೂಲ್ ಮಣಿಪಾಲ), ಅನ್ವಿ ಎ. ಯು. (ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಒಳಕಾಡು).

8 - 10ನೇ ತರಗತಿ ವಿಭಾಗ: ಪ್ರಥಮ - ದೃತಿ ಸಂತೋಷ್ ಪೂಜಾರಿ (ಲಿಟ್ಲ್‌ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ), ದ್ವಿತೀಯ - ಸಾನಿಧ್ಯಾ ಆಚಾರ್ಯ (ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ), ತೃತೀಯ - ವಂಶಿತ್ ಆಚಾರ್ಯ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ್), ಸಮಾಧಾನಕರ - ಸಿಂಚನಾ ಮೆಂಡನ್ (ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ), ಯಕ್ಷತ್ ಶೆಟ್ಟಿ (ವಿಶ್ವವಿನಾಯಕ ಇಂ.ಮೀ.ಸ್ಕೂಲ್), ಪ್ರೃಥ್ವಿರಾಜ್ (ವಿದ್ಯೋದಯ ಸ್ಕೂಲ್ ಉಡುಪಿ)................................ಸಾಧಕ ಮಕ್ಕಳಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಲಕ್ಷ್ಯ ಉಡುಪಿ ವತಿಯಿಂದ ಯೋಗದಲ್ಲಿ 10 ವಿಶ್ವದಾಖಲೈಗೈದ ತನುಶ್ರೀ ಪಿತ್ರೋಡಿ, ಸಿನಿಮಾ, ನಾಟಕ, ನೃತ್ಯಗಳಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿರುವ ವೈಷ್ಣವಿ ವಿಶ್ವನಾಥ್ ಅವರನ್ನು ಗೌರವಿಸಲಾಯಿತು.