ಸಾರಾಂಶ
ಮಾನವ ಮಾರಾಟ ಮತ್ತು ಕಳ್ಳ ಸಾಗಾಟ ವಿರುದ್ದ ಬೀದಿ ನಾಟಕ ಹಾಗೂ ಬೈಕ್ ರ‍್ಯಾಲಿ ಮೂಲಕ ಜನ ಜಾಗ್ರತಿ ಕಾರ್ಯಕ್ರಮ ಭಾನುವಾರ ಪುತ್ತೂರು ನಗರದಲ್ಲಿ ನಡೆಯಿತು.
ಪುತ್ತೂರು: ಮಾನವ ಮಾರಾಟ ಮತ್ತು ಕಳ್ಳ ಸಾಗಾಟ ವಿರುದ್ದ ಬೀದಿ ನಾಟಕ ಹಾಗೂ ಬೈಕ್ ರ‍್ಯಾಲಿ ಮೂಲಕ ಜನ ಜಾಗ್ರತಿ ಕಾರ್ಯಕ್ರಮ ಭಾನುವಾರ ಪುತ್ತೂರು ನಗರದಲ್ಲಿ ನಡೆಯಿತು.
ಮಂಗಳೂರಿನ ಪಡಿ ಸ್ವಯಂ ಸೇವಾ ಸಂಸ್ಥೆ ಮತ್ತು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಸಹಕಾರದಲ್ಲಿ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ವಿವಿಧ ಇಲಾಖೆ ಮತ್ತು ಪುತ್ತೂರಿನ ಸಂಘ ಸಂಸ್ಥೆಗಳ ಮೂಲಕ ಓಯಸ್ಸಿಸ್ ಬೆಂಗಳೂರು ಇವರಿಂದ ನಡೆಯುವ ಮಾನವ ಮಾರಾಟ ಮತ್ತು ಕಳ್ಳ ಸಾಗಾಣಿಕೆ ವಿರುದ್ಧ ಜನಜಾಗೃತಿ ಬೀದಿ ನಾಟಕವು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಹಾಗೂ ಇತರ ಕಡೆಗಳಲ್ಲಿ ನಡೆಯಿತು.ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಬೂಮಾ ರೆಡ್ದಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿದರು. ಸುಮಾರು ೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಬೀದಿ ನಾಟಕದಲ್ಲಿ ಪಾಲ್ಗೊಂಡರು. ವಿದೇಶಿಗರೂ ಸೇರಿದಂತೆ ಹಲವಾರು ಮಂದಿ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ನಿರ್ವಹಿಸಿದರು.
ಪುತ್ತೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿ ಸೋಜ, ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ದಿ, ಮಹಿಳಾ ಠಾಣೆಯ ಎಸ್.ಐ ಸುನೀಲ್ ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಹಾಸ ರೈ.ಬಿ, ಪ್ರೇಮಿ ಪೆರ್ನಾಂಡಿಸ್, ಲೋಕೇಶ್ ಹೆಗ್ಡೆ, ನಯನ ರೈ, ಉಲ್ಲಾಸ್ ಪೈ, ಶಾಹಿರಾ ಬಾನು, ತಾರನಾಥ ಗೌಡ, ಶಶೀದರ ಸೀಟಿಗುಡ್ದೆ, ಕಸ್ತೂರಿ ಬೊಳ್ವಾರ್, ರಝಾಕ್ ಬಪ್ಪಳಿಗೆ ಮತ್ತಿತರರು ಇದ್ದರು.ಸಂಪನ್ಮೂಲ ಕೇಂದ್ರದ ನಿಕಟ ಪೂರ್ವ ಅದ್ಯಕ್ಷೆ ನ್ಯಾಯಾವಾದಿ ಹರಿಣಾಕ್ಷಿ ಶೆಟ್ಟಿ ನಿರೂಪಿಸಿದರು, ಸಂಪನ್ಮೂಲ ಕೇಂದ್ರದ ಅದ್ಯಕ್ಷ ರಫೀಕ್ ದರ್ಬೆ ಸ್ವಾಗತಿಸಿದರು, ಕಾರ್ಯದರ್ಶಿ ಸುಂಮಂಗಳಾ ಶೆಣೈ ವಂದಿಸಿದರು.
;Resize=(128,128))
;Resize=(128,128))
;Resize=(128,128))