ಮೀಸಲು ವ್ಯವಸ್ಥೆಯಿಂದ ಶೋಷಿತರಿಗೆ ಸ್ವಾಭಿಮಾನ: ಉದಯ್‌ ಶೆಟ್ಟಿ ಮುನಿಯಾಲು

| Published : Nov 11 2025, 03:00 AM IST

ಸಾರಾಂಶ

ಬ್ಲಾಕ್ ಕಾಂಗ್ರೆಸ್ ಕಾರ್ಕಳ, ನಗರ ಕಾಂಗ್ರೆಸ್ ಸಮಿತಿ ಮತ್ತು ನಗರ ಪರಿಶಿಷ್ಟ ಜಾತಿ ಘಟಕದ ಆಶ್ರಯದಲ್ಲಿ ಕಾರ್ಕಳ ಗಾಂಧಿ ಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಸಭಾಂಗಣದಲ್ಲಿ ನಡೆದ ‘ದಲಿತ ಶಕ್ತಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಕಳ ಕಾಂಗ್ರೆಸ್ ಆಶ್ರಯದಲ್ಲಿ ದಲಿತ ಶಕ್ತಿ ಸಮಾವೇಶ

ಕಾರ್ಕಳ: ಸಂವಿಧಾನ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಸಿಗುವಂತಾಗಲು ಕಾಂಗ್ರೆಸ್ ಪಕ್ಷ ಮೀಸಲಾತಿ ಜಾರಿಗೊಳಿಸಿತು. ಅದರ ಪರಿಣಾಮವಾಗಿ ಇಂದು ದಲಿತರು, ಹಿಂದುಳಿದ ವರ್ಗದವರು, ಶೋಷಿತರು ವರ್ಗಗಳು ಸ್ವಾಭಿಮಾನದ ಜೀವನ ನಡೆಸುವಂತಾಯಿತು ಎಂದು ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಹೇಳಿದ್ದಾರೆ.ಬ್ಲಾಕ್ ಕಾಂಗ್ರೆಸ್ ಕಾರ್ಕಳ, ನಗರ ಕಾಂಗ್ರೆಸ್ ಸಮಿತಿ ಮತ್ತು ನಗರ ಪರಿಶಿಷ್ಟ ಜಾತಿ ಘಟಕದ ಆಶ್ರಯದಲ್ಲಿ ಕಾರ್ಕಳ ಗಾಂಧಿ ಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಸಭಾಂಗಣದಲ್ಲಿ ನಡೆದ ‘ದಲಿತ ಶಕ್ತಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಸ್ಪರ್ಶ- ಅಸ್ಪರ್ಶ ಮುಂತಾದ ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಯಿತು, ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ದಲಿತರು ಎನ್ನಲು ಹೆಮ್ಮೆಯಾಗುತ್ತದೆ, ಇದು ಕಾಂಗ್ರೆಸ್ ಪಕ್ಷವು ಶೋಷಿತ ವರ್ಗಗಳಿಗೆ ನೀಡುವ ಗೌರವವಾಗಿದೆ ಎಂದರು.

ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಮಾತನಾಡಿ, ನಾವಿಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಭಾರತದ ಸಂವಿಧಾನವೇ ಕಾರಣ, ಅಂಬೇಡ್ಕರ್ ರಚಿತ ಸಂವಿಧಾನವು ದೇಶದ ಪ್ರತಿಯೊಬ್ಬನ ನಾಗರಿಕನಿಗೂ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯ ನೀಡಿದೆ ಎಂದರು.

ಖ್ಯಾತ ವೈದ್ಯ, ಹಿರಿಯ ಕಾಂಗ್ರೆಸಿಗ, ದಲಿತ ಮುಖಂಡರೂ ಆದ ಡಾ. ಪ್ರೇಮದಾಸ್ ಮಾತನಾಡಿ ದಲಿತ ಸಮುದಾಯಕ್ಕೆ ಕಾಂಗ್ರೆಸ್ ನೀಡಿದಷ್ಟು ಸಹಕಾರವನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ ಎಂದರು. ಕರ್ನಾಟಕ ‌ಸರ್ಕಾರದಿಂದ ನಾಮನಿರ್ದೇಶನಗೊಂಡ ರಮೇಶ್ ಪತ್ತೊಂಜಿಕಟ್ಟೆ, ಶೋಭಾ ರಾಣೆ ಮತ್ತು ಮಂಜು ತೆಳ್ಳಾರು ರಸ್ತೆ ಅವರನ್ನು ಅಭಿನಂದಿಸಲಾಯಿತು.

ಉಡುಪಿ ಜಿಲ್ಲಾ ಸಮಿತಿ ಉಪಾದ್ಯಕ್ಷ ಸುಧಾಕರ ಕೋಟ್ಯಾನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅದ್ಯಕ್ಷ ರಾಜೇಂದ್ರ‌ ದೇವಾಡಿಗ, ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಮಿತಿ ಸದಸ್ಯೆ ಪ್ರತಿಮಾ ರಾಣೆ, ದಲಿತ ಮುಖಂಡರಾದ ಅಣ್ಣಪ್ಪ ನಕ್ರೆ, ಬ್ಲಾಕ್ ಮೀನುಗಾರರ ಘಟಕದ ಅದ್ಯಕ್ಷ ಮುರಳಿ ರಾಣೆ, ಹೆಬ್ರಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅದ್ಯಕ್ಷ ರಾಘವ ಕುಕ್ಕುಜೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮೇಶ್ ಬಜಕಳ, ಸೇವಾದಳದ ಅಬ್ದುಲ್ ಸಾಣೂರು ಇದ್ದರು.

ಮೇಘನಾ ಪ್ರಾರ್ಥನೆ ಹಾಡಿದರು. ಕಾರ್ಕಳ ಬ್ಲಾಕ್ ಪರಿಶಿಷ್ಟ ಜಾತಿ ಘಟಕಗಳ ಅದ್ಯಕ್ಷ ದೇವದಾಸ್ ಅತಿಥಿಗಳನ್ನು ಸ್ವಾಗತಿಸಿದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು. ಸುಧಾಕರ ದಾನಶಾಲೆ ವಂದಿಸಿದರು.