ಚನ್ನರಾಯಪಟ್ಟಣ: ತಾಲೂಕಿನ ಕಲ್ಲೇಸೋಮನಹಳ್ಳಿ ಗ್ರಾಮದ ಯುವಕನ ಮನೆಯ ಮುಂದೆ, ತನಗೆ ಪ್ರೀತಿ ವಿಚಾರವಾಗಿ ಮೋಸವಾಗಿದೆ ಎಂದು ಆರೋಪಿಸಿ ಕಾಸರಗೋಡು ಗ್ರಾಮದ ಯುವತಿಯೊಬ್ಬಳು ಏಕಾಂಗಿ ಹಗಲಿರುಳು ಧರಣಿ ಮಾಡುತ್ತಿರುವ ಘಟನೆ ನಡೆದಿದೆ. ಕಾಸರಗೋಡು ಮೂಲದ ನಿಷಾ ಎಂಬ ಯುವತಿಯು ಪ್ರತಿಭಟನೆ ಮಾಡುತ್ತಿದ್ದು, ಕಲ್ಲೆಸೋಮನಹಳ್ಳಿ ಗ್ರಾಮದ ಸೂರ್ಯ (೨೬) ಎಂಬ ಯುವಕನೇ ಆರೋಪಿಯಾಗಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಐದು ತಿಂಗಳ ಕಾಲ ಲಿವ್- ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ೧೪ ಸೆಪ್ಟೆಂಬರ್ ೨೪ರಿಂದ ಸೂರ್ಯ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಅಕ್ಟೋಬರ್ ೨೨ರಂದು ಕಲ್ಲೇಸೋಮನಹಳ್ಳಿಗೆ ಬಂದ ಯುವತಿ, ಪ್ರಿಯಕರನ ಮನೆ ಮುಂದೆ ಧರಣಿ ಆರಂಭಿಸಿದ್ದಾರೆ. ಮಳೆ- ಚಳಿಯ ನಡುವೆಯೂ ಯುವತಿಯ ಹೋರಾಟ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. ನ್ಯಾಯಕ್ಕಾಗಿ ಯುವತಿಯ ಹೋರಾಟ ಮುಂದೇನಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ನಾಪತ್ತೆ: ಯುವತಿ ಏಕಾಂಗಿ ದಾಳಿ
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಐದು ತಿಂಗಳ ಕಾಲ ಲಿವ್- ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.