ಮದ್ದೂರಿನ ಸಂಚಾರಿ ಠಾಣೆ ಪಿಎಸ್ ಐ ಜೆ.ಇ.ಮಹೇಶ್ ದಿಢೀರ್ ವರ್ಗಾವಣೆ

| Published : Aug 30 2024, 01:08 AM IST

ಮದ್ದೂರಿನ ಸಂಚಾರಿ ಠಾಣೆ ಪಿಎಸ್ ಐ ಜೆ.ಇ.ಮಹೇಶ್ ದಿಢೀರ್ ವರ್ಗಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿಎಸ್ಐ ಮಹೇಶ್ ಸಂಚಾರಿ ಠಾಣೆ ಅಧಿಕಾರಿಯಾಗಿ ನೇಮಕಗೊಂಡ ನಂತರ ಕೇವಲ ಎರಡು ತಿಂಗಳಲ್ಲಿ ಸುಮಾರು 2 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಿಕೊಂಡು 25 ಲಕ್ಷ ರು. ದಂಡ ವಸೂಲಿ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಸಂಚಾರಿ ಠಾಣೆ ಪಿಎಸ್ಐ ಜೆ.ಇ.ಮಹೇಶ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಅಥವಾ ಸಬ್ ಇನ್ಸ್ ಪೆಕ್ಟರ್‌ಗಳ ಕಾರ್ಯನಿರ್ವಹಣೆ ಅವಧಿ ಎರಡು ವರ್ಷಗಳು ಎಂದು ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿದೆ. ಇದರ ಬೆನ್ನೆಲೆ ಮದ್ದೂರು ಸಂಚಾರಿ ಠಾಣೆಯಲ್ಲಿ ಕೇವಲ ಒಂದು ವರ್ಷ ಒಂದು ತಿಂಗಳು ಕರ್ತವ್ಯ ನಿರ್ವಹಿಸಿರುವ ಪಿಎಸ್ಐ ಮಹೇಶ್ ಅವರನ್ನು ವರ್ಗಾವಣೆ ಪ್ರಕರಣಕ್ಕೆ ಅನ್ವಯವಾಗದಿದ್ದರೂ ಸಹ ರಾಣೆಯಿಂದ ಎತ್ತಂಗಡಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಿಎಸ್ಐ ಮಹೇಶ್ ಸಂಚಾರಿ ಠಾಣೆ ಅಧಿಕಾರಿಯಾಗಿ ನೇಮಕಗೊಂಡ ನಂತರ ಕೇವಲ ಎರಡು ತಿಂಗಳಲ್ಲಿ ಸುಮಾರು 2 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಿಕೊಂಡು 25 ಲಕ್ಷ ರು. ದಂಡ ವಸೂಲಿ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು.

ಠಾಣೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಅನೇಕ ಆಟೋರಿಕ್ಷಗಳು ಸಂಚಾರ ಮಾಡುತ್ತಿದ್ದದ್ದು ಮಾತ್ರವಲ್ಲದೆ ರಾತ್ರಿ ವೇಳೆ ನಡೆಯುತ್ತಿದ್ದ ಅಪರಾಧ ಪ್ರಕರಣಗಳ ಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಮಹೇಶ್ ಅಂತಹ ಆಟೋಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವ ಜೊತೆಗೆ ಠಾಣೆಯ ನೋಂದಣಿ ಸಂಖ್ಯೆ ನೀಡಿ ನೈಜ ಆಟೋ ಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಪಾನಮತರಾಗಿ ವಾಹನ ಚಾಲನೆ. ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುತ್ತಿದ್ದ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ಅನೇಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದ ಪಿಎಸ್ಐ ಮಹೇಶ್ ಅವರನ್ನು ವರ್ಗಾವಣೆ ಮಾಡಿರುವ ಬೆನ್ನಹಿಂದೆ ಕೆಲವು ರಾಜಕಾರಣಿಗಳ ಹಸ್ತ ಕ್ಷೇಪವಿದೆ ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.