ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತುಹಾಕಬೇಕು ಎಂದು ಬಿಜೆಪಿ- ಜೆಡಿಎಸ್ ಕುತಂತ್ರ ನಡೆಸುತ್ತಿವೆ ಎಂದು ಆರೋಪಿಸಿ ದಸಂಸ ಪದಾಧಿಕಾರಿಗಳು ನಗರದ ಪುರಭವನ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟಿಸಿದರು.ಜನರಿಂದ ಆಯ್ಕೆಯಾದ ರಾಜ್ಯ ಕಾಂಗ್ರೆಸ್ ಬಹುಮತದ ಸರ್ಕಾರವನ್ನು ಅಸ್ತಿರಗೊಳಿಸುವ ಹುನ್ನಾರ ಇದಾಗಿದೆ. ರಾಜ್ಯದ ಎಲ್ಲಾ ಕಾಲದಲ್ಲಿ ದ್ವೇಷದ ರಾಜಕಾರಣವನ್ನೇ ಮಾಡುತ್ತ ಉಸಿರಾಡುತ್ತಿರುವ ಬಿಜೆಪಿ- ಜೆಡಿಎಸ್ ನಾಯಕರು ರಾಜಭವನ ಮತ್ತು ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಟಿ.ಜೆ. ಅಬ್ರಾಹಂ ಅವರು ನೀಡಿರುವ ದೂರಿನ ಆಧಾರ೦ ಮೇಲೆ ನೊಟೀಸ್ ನೀಡಿದ್ದಾರೆ. ಸಂಪುಟ ಸಭೆಯಲ್ಲಿಯೂ ನೊಟೀಸ್ ನೀಡಿರುವುದು ಕಾನೂನು ರೀತಿ ಇಲ್ಲ ಎಂದು ತಿರಸ್ಕರಿಸಿತ್ತು. ಇದನ್ನೂ ಮಾನ್ಯ ಮಾಡಿಲ್ಲ. ಅಲ್ಲದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ಮೇಲಿನ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅವರು ಟೀಕಿಸಿದರು.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಬಂದ ಕೂಡಲೇ ಕ್ರಮ ಕೈಗೊಂಡಿರುವುದು ಯಾವ ನ್ಯಾಯ? ರಾಜ್ಯಪಾಲರ ಭವನ ಕೇಂದ್ರ ಬಿಜೆಪಿಯ ಅಡ್ಡ ಆಗಿದೆ ಎಂದು ಅವರು ಕಿಡಿಕಾರಿದರು.