ಕಲ್ಯಾಣ ಕರ್ನಾಟಕದ ವಿಕಾಸ ಯಾತ್ರೆಗೆ ಅದ್ಧೂರಿ ಸ್ವಾಗತ

| Published : Aug 30 2024, 01:08 AM IST

ಕಲ್ಯಾಣ ಕರ್ನಾಟಕದ ವಿಕಾಸ ಯಾತ್ರೆಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಗೆ ೫೦ ವರ್ಷ ಪೂರೈಸಿದ ಹಿನ್ನೆಲೆ ಪಟ್ಟಣಕ್ಕೆ ಕಲ್ಯಾಣ ಕರ್ನಾಟಕದ ವಿಕಾಸ ಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಗೆ ೫೦ ವರ್ಷ ಪೂರೈಸಿದ ಹಿನ್ನೆಲೆ ಪಟ್ಟಣಕ್ಕೆ ಕಲ್ಯಾಣ ಕರ್ನಾಟಕದ ವಿಕಾಸ ಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಸಂಸ್ಥೆಯ ಅಧ್ಯಕ್ಷ ಸದಾಶಿವ ಸ್ವಾಮಿಗಳು ಮಾತನಾಡಿ, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ೫೦ ವರ್ಷಗಳು ಪೂರೈಸಿವೆ. ಈ ಸುಸಂದರ್ಭದಲ್ಲಿ ೨೦೨೫ರ ಜನೇವರಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಜ.೨೯ರಿಂದ ಫೆ.೬ರ ವರೆಗೆ

ಈ ಉತ್ಸವ ನಡೆಯಲಿದೆ. ಕೃಷಿ, ಜ್ಞಾನ, ವಿಜ್ಞಾನ, ಕಲಾ, ಮಕ್ಕಳ, ಉದ್ಯಮಿ, ಸುಜನ್ಯ, ಸಾಂಸ್ಕೃತಿಕ, ಯೋಗ ತರಬೇತಿ ಕಾರ್ಯಕ್ರಮಗಳು ೨೪೦ ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ೫ ಸಾವಿರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಗಣ್ಯರು,

೫ ಸಾವಿರಾರು ಕಲಾವಿದರು ಸೇರಿದಂತೆ ಕಾರ್ಯಕ್ರಮದಲ್ಲಿ ೩೦ ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಡಾ. ಚೆನ್ನಮಲ್ಲ ಸ್ವಾಮಿಗಳು ಯಾತ್ರೆಗೆ ಚಾಲನೆ ನೀಡಿದರು.

ಸೋಮನಾಳದ ರುದ್ರಮುನಿಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಮುಖರಾದ ಡಾ. ಬಸವರಾಜ ಹಿರೇಮಠ, ಗಂಗಾಧರಸ್ವಾಮಿ, ಅನಿಲ ಬಿಜ್ಜಳ, ರವಿ ಪಾಟೀಲ್, ಕಂಠಿರಂಗಪ್ಪ ನಾಯಕ,

ವಾಗೀಶ ಹಿರೇಮಠ, ಬಸಲಿಂಗಯ್ಯಸ್ವಾಮಿ, ಪೃಥ್ವಿ ಮ್ಯಾಗೇರಿ, ಶಿವು ಮ್ಯಾಗೇರಿ, ಪ್ರಕಾಶ ಹಾದಿಮನಿ, ಶರಣಪ್ಪ ಸಜ್ಜನ್, ಪಂಪಯ್ಯಸ್ವಾಮಿ, ಶೇಖರಯ್ಯಸ್ವಾಮಿ ಗಂಗಾಧರಮಠ ಇತರರಿದ್ದರು. ಸಂಸ್ಥೆಯ ತಾಲೂಕು ಸಂಚಾಲಕ ಮಲ್ಕೇಶ ಕೋಟೆ ನಿರೂಪಿಸಿ, ವಂದಿಸಿದರು.

ರಾಯಣ್ಣ ಜಯಂತಿ-ಅದ್ಧೂರಿ ಮೆರವಣಿಗೆ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ೨೨೮ನೇ ಜಯಂತಿ ಅಂಗವಾಗಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಾಲುಮತ ಸಮಾಜದಿಂದ ರಾಯಣ್ಣನ ಭಾವಚಿತ್ರ ಮೆರವಣಿಗೆ ಕನಕಗಿರಿ ಪಟ್ಟಣದಲ್ಲಿ ಗುರುವಾರ ಅದ್ಧೂರಿಯಾಗಿ ನಡೆಯಿತು.

ಮೆಲುಗಡೆ ಅಗಸಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಕನಕದಾಸ ವೃತ್ತದಿಂದ ರಾಜಬೀದಿಯ ಮೂಲಕ ಆರಂಭವಾದ ಮೆರವಣಿಗೆ ರಾಯಣ್ಣ ವೃತ್ತದವರೆಗೆ ನಡೆಯಿತು. ಮಹಿಳೆಯರು ಕಳಸದೊಂದಿಗೆ ಶೋಭೆ ತಂದರು. ಯುವಕರು ಡಿಜೆ ಸೌಂಡ್‌ಗೆ ಕುಣಿದು ಸಂಭ್ರಮಿಸಿದರು.

ಬಸಾಪಟ್ಟಣದ ಸಿದ್ದರಾಮಯ್ಯ ಗುರುವಿನ್, ಪ್ರಮುಖರಾದ ದೇವಪ್ಪ ತೋಳದ, ಸಿದ್ದಪ್ಪ ನಿರ್ಲೂಟಿ, ನಾಗಪ್ಪ ಹುಗ್ಗಿ, ರುದ್ರೇಶ ಡ್ಯಾಗಿ, ಸಣ್ಣ ಕನಕಪ್ಪ ವಾಗೇಶ ಹಿರೇಮಠ, ಬಸವರಾಜ ಸಮಗಂಡಿ, ಗಂಗಾಧರ ಚೌಡ್ಕಿ, ಬೀರಪ್ಪ ಹನುಮನಾಳ, ಪರಸಪ್ಪ ಚೌಡ್ಕಿ, ನಾಗರಾಜ ವಿಠಲಾಪುರ, ಕಲಮಸ್ತೆಪ್ಪ, ಶಿವುಕುಮಾರ ಚಿನ್ನೂರು, ಕಿರಣ್ ಚೌಡ್ಕಿ, ಸಣ್ಣೆಪ್ಪ ಸಿಂಗಾಪುರ, ಹೂವಪ್ಪ ಚೌಡ್ಕಿ ಸೇರಿದಂತೆ ಹಾಲುಮತ ಸಮಾಜದ ಹಿರಿಯರು, ಯುವಕರು ಇದ್ದರು.