ಸಾರಾಂಶ
ಹಗರಿಬೊಮ್ಮನಹಳ್ಳಿ: ಬಸವತತ್ವ ಕೇಳುವವರು, ಹೇಳುವವರು ಅಧಿಕರು. ಆದರೆ, ಪಾಲಿಸುವ ವಿರಳರಲ್ಲಿ ಅಕ್ಕಿ ಕೊಟ್ರಪ್ಪನವರು ಪ್ರಥಮರು. ದೇಹದಾನದ ಮೂಲಕವೂ ಸಾವಿನ ನಂತರವೂ ಸಾರ್ಥಕತೆ ಪಡೆದ ಮೇರುಚೇತನ ಎಂದು ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಬಸವಪಥ ಮತ್ತು ವೀರಶೈವ ಲಿಂಗಾಯತ ಮಹಾಸಭಾದಿಂದ ನಡೆದ ದಾನಿ ದಿ.ಅಕ್ಕಿ ಕೊಟ್ರಪ್ಪ ಅವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವರು ದೈವವನ್ನು ಪೂಜೆ, ಪುನಸ್ಕಾರ, ಹವನ ಹೋಮಗಳಲ್ಲಿ ಕಂಡರೆ ಅಕ್ಕಿ ಕೊಟ್ರಪ್ಪ ಅವರು ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ ಕ್ಷೇತ್ರಗಳಿಗೆ ದಾನ ಮಾಡುವ ಮೂಲಕ ದೈವತ್ವವನ್ನು ಕಂಡವರು ಎಂದರು.ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ದಾನದಲ್ಲೆ ದೈವತ್ವ ಕಂಡ ದಾನಿ ದಿ.ಅಕ್ಕಿ ಕೊಟ್ರಪ್ಪ ಅವರ ಆಶಯದಂತೆ ತಂಬ್ರಹಳ್ಳಿಯಲ್ಲಿ ಪದವಿ ಕಾಲೇಜು ಸ್ಥಾಪನೆ ಮತ್ತು ೨ನೇ ಹಂತದ ಏತ ನೀರಾವರಿ ಯೋಜನೆಯನ್ನು ಸರಕಾರ ಮತ್ತು ಜನಪ್ರತಿನಿಧಿಗಳು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಶೈಕ್ಷಣಿಕ ಚಿಂತನೆ:ವೀರಶೈವ ಲಿಂಗಾಯ ಪಂಚಮಸಾಲಿ ಸಮಾಜದ ರಾಜ್ಯಗೌರವಾಧ್ಯಕ್ಷ ಬಾವಿಬೆಟ್ಟಪ್ಪ ಮಾತನಾಡಿ, ಅಕ್ಕಿ ಕೊಟ್ರಪ್ಪ ಅವರ ಕಾಲೇಜು ಸ್ಥಾಪನೆ ಕನಸನ್ನು ವೀ.ವೀ.ಸಂಘದೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು. ಕಾಲೇಜು ಸ್ಥಾಪಿಸುವುದಾದರೆ ೨೦ಲಕ್ಷರೂ.ನೀಡುವ ಔಧಾರ್ಯ ಕೊಟ್ರಪ್ಪ ಅವರ ಶೈಕ್ಷಣಿಕ ಪ್ರಗತಿಯ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.
ಮೌನ ಸಾಧನೆಯ ಹಾದಿ:ಸಾಹಿತಿಗಳಾದ ರಾಮನಮಲಿ, ಮೇಟಿ ಕೊಟ್ರಪ್ಪ, ಜಿ.ಪಂ.ಮಾಜಿ ಸದಸ್ಯ ಎಚ್.ಬಿ.ನಾಗನಗೌಡ, ಜಿ.ಪಂ.ಸಿಇಒ ಆಪ್ತ ಸಹಾಯಕ ಸುಣಗಾರ ಮಂಜುನಾಥ ಇವರು ಅಕ್ಕಿ ಕೊಟ್ರಪ್ಪ ಅವರು ಕಲಾವಿದರಾಗಿ, ರಾಜಕಾರಣಿಯಾಗಿ, ಧರ್ಮಸೇವಕನಾಗಿ, ಬಸವತತ್ವಾನುಯಾಗಿ ನಡೆದು ಬಂದ ಮೌನ ಸಾಧನೆಯ ಹಾದಿ ಪರಿಚಯಿಸಿದರು.
ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಮಠದ ಶಿವಮಹಾಂತ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಹನಸಿ ಶಂಕರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.ವೀ.ವೀ.ಸಂಘದ ಮಾಜಿ ನಿರ್ದೇಶಕ ಅಕ್ಕಿ ಶಿವಕುಮಾರ, ಬಸವಪಥದ ಸಂಚಿಶಿವಕುಮಾರ, ಸತೀಶ್ ಪಾಟೀಲ್, ಸೊನ್ನದ ಗುರುಬಸವರಾಜ, ಎಸ್.ವಿಶ್ವನಾಥ, ಅಮೃತ್‌ಪ್ರಿಂರ‍್ಸ್ನ ಮಂಜುನಾಥ, ಐಗೋಳ ಚಿದಾನಂದ, ವೈ.ಮಲ್ಲಿಕಾರ್ಜುನ, ಅಕ್ಕಿ ಪ್ರಸನ್ನಕುಮಾರ, ದೇವಿಪ್ರಸಾದ, ವೀರೇಶ್ ಇದ್ದರು. ಪಟ್ಟಣಶೆಟ್ಟಿ ಸುರೇಶ್ ಪ್ರಾಸ್ತಾವಿಕ ಮಾತನಾಡಿದರು. ಚಿಂತಕ ಕೊಟ್ರೇಶ್ ಸಕ್ರಹಳ್ಳಿ ನಿರ್ವಹಿಸಿದರು. ಗಾಯಕರಾದ ಶಾರದಾ, ಸಂಗೀತಾ, ಗುರು ಹಿರೇಮಠ ಇವರ ಗಾಯನ ನಮನ ಗಮನಸೆಳೆಯಿತು. ನೆರೆದಿದ್ದ ಅಪಾರ ಜನಸ್ತೋಮ ಅಕ್ಕಿ ಕೊಟ್ರಪ್ಪ ಅವರ ಮೇಲಿನ ಅಭಿಮಾನ ಸಾಗರಕ್ಕೆ ಸಾಕ್ಷಿಯಂತಿತ್ತು.
ಮಹತ್ವದ ಸಂಕಲ್ಪ:ಗ್ರಾಮದಲ್ಲಿ ಅಕ್ಕಿ ಕೊಟ್ರಪ್ಪ ಅವರ ಪುತ್ಥಳಿ ನಿರ್ಮಾಣ, ಪದವಿ ಕಾಲೇಜು ಸ್ಥಾಪನೆ, ನಂದಿಪುರ ಮಠದಿಂದ ಪುಸ್ತಕ ಸಮಗ್ರ ಜೀವನದ ಪುಸ್ತಕ ಬಿಡುಗಡೆ, ದಾನದ ಪರಂಪರೆಯನ್ನು ಮಕ್ಕಳು ಮುಂದುವರಿಸುವ ಸಂಕಲ್ಪ, ತ್ರೆöÊಮಾಸಿಕವಾಗಿ ಸಾಹಿತ್ಯಿಕ, ಧಾರ್ಮಿಕ, ಶೈಕ್ಷಣಿಕ ಸೇವೆ ಮತ್ತು ಕಾರ್ಯಕ್ರಮದ ಮೂಲಕ ಕೊಟ್ರಪ್ಪ ಅವರ ಆದರ್ಶಪಾಲನೆ ಕುರಿತಂತೆ ನಿರ್ಣಯ ಕೈಗೊಳ್ಳಲಾಯಿತು.