ಮಾದಿಗ, ವಾಲ್ಮೀಕಿ ಸಮಾಜದ್ದು ತಾಯಿ, ಮಗನ ಸಂಬಂಧ: ಸಚಿವ ಕೆ.ಎಚ್ ಮುನಿಯಪ್ಪ

| Published : Feb 10 2024, 01:46 AM IST / Updated: Feb 10 2024, 03:33 PM IST

ಮಾದಿಗ, ವಾಲ್ಮೀಕಿ ಸಮಾಜದ್ದು ತಾಯಿ, ಮಗನ ಸಂಬಂಧ: ಸಚಿವ ಕೆ.ಎಚ್ ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಿಗ ಹಾಗೂ ವಾಲ್ಮೀಕಿ ಸಮುದಾಯಗಳದ್ದು ತಾಯಿ ಮಕ್ಕಳ ಸಂಬಂಧ. ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ನಾವು ರಾಮ ರಹೀಮ್ ಒಂದೇ ಎಂದು ಜೀವನ ನಡೆಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ಮಾದಿಗ ಹಾಗೂ ವಾಲ್ಮೀಕಿ ಸಮುದಾಯಗಳದ್ದು ತಾಯಿ ಮಕ್ಕಳ ಸಂಬಂಧ. ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ನಾವು ರಾಮ ರಹೀಮ್ ಒಂದೇ ಎಂದು ಜೀವನ ನಡೆಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಬಿಜೆಪಿಯವರು ಎಷ್ಟು ಜನ ವಾಲ್ಮೀಕಿ ರಾಮಾಯಣ ಪಠನೆ ಮಾಡುತ್ತಾರೆ. ನಾನು ವರ್ಷಕ್ಕೆ ಎರಡು ಬಾರಿ ವಾಲ್ಮೀಕಿ ರಾಮಾಯಣ ಪಠನೆ ಮಾಡುತ್ತೇನೆ ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ದೇಶದಲ್ಲಿ ವರ್ಣಾಶ್ರಮ ಪದ್ಧತಿ ಇದೆ. ಸಮಾನತೆ ಪ್ರತಿಪಾದನೆ ಮಾಡಿದ್ದರೂ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ. ಆಂಧ್ರ ಪ್ರದೇಶ, ಪಂಜಾಬ್ ನಲ್ಲಿ ಹೆಚ್ಚಿನ ಸಂಖ್ಯೆಯಲಿದೆ ಎಂದರು.

ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಬೇಕು. ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಿಸಬೇಕು. ಈ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವಜನ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಬಿ.ಶಿವಪ್ಪ, ಮಾಜಿ ಸಚಿವ ಆನಂದ್ ಸಿಂಗ್, ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ, ಶಾಸಕರಾದ ಬಸವನಗೌಡ ದದ್ದಲ್, ಬಸವನಗೌಡ ತುರುವಿನಾಳ್, ರಘಮೂರ್ತಿ, ಎನ್.ವೈ ಗೋಪಾಲಕೃಷ್ಣ, ಆರ್.ರಾಜೇಂದ್ರ, ಇ.ತುಕಾರಾಂ, ಎನ್.ಟಿ ಶ್ರೀನಿವಾಸ್, ಗಂಗಾಧರ್ ನಾಯಕ, ಲತಾ ಮಲ್ಲಿಕಾರ್ಜುನ್, ಕೆ.ಎಸ್.ಬಸವಂತಪ್ಪ, ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್, ಎಸ್.ರಾಮಪ್ಪ ಸೇರಿ ಮತ್ತಿತರರಿದ್ದರು.

ಸರ್ಕಾರಗಳು ಸಬ್ಸಿಡಿ ದರದಲ್ಲಿ ಪರಿಶಿಷ್ಟರಿಗೆ ಕೃಷಿ ಭೂಮಿ ಕೊಡಬೇಕು. ಸರ್ಕಾರ ಎಸ್ಸಿ-ಎಸ್ಟಿಗೆ ನೀಡುವ ಅನುದಾದಲ್ಲಿ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಿದಾಗ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಜೊತೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಯಾದಗ ಈ ಸಮುದಾಯಕ್ಕೆ ಆಸರೆಯಾಗಲಿದೆ. ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ