ಚಿಕ್ಕೋಡಿ ನೂತನ ಜಿಲ್ಲೆ ಮಾಡಬೇಕು: ಎನ್. ಎ. ಮಗದುಮ್

| Published : Feb 10 2024, 01:46 AM IST

ಸಾರಾಂಶ

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಜನ ಕಷ್ಟ ಪಡುತ್ತಿದ್ದರು. ಯಾವುದೇ ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನ ಪ್ರತಿನಿಧಿಗಳು ಸಹ ಮೌನಕ್ಕೆ ಜಾರಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿ ನೂತನ ಜಿಲ್ಲೆ ರಚನೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾ ಹೋರಾಟ ಸಮಿತಿ ಡಾ. ಎನ್. ಎ. ಮಗದುಮ್ ಆಗ್ರಹಿಸಿದರು.

ಶುಕ್ರವಾರ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಜನ ಕಷ್ಟ ಪಡುತ್ತಿದ್ದರು. ಯಾವುದೇ ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನ ಪ್ರತಿನಿಧಿಗಳು ಸಹ ಮೌನಕ್ಕೆ ಜಾರಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಇಂದು ಜಿಲ್ಲೆಯ ಕುರಿತು ವರದಿಗಳನ್ನ ಕೇಳುತ್ತಿದೆ. ಸರ್ಕಾರದ ಬಳಿ ಜಿಲ್ಲೆಯ ಮಾಹಿತಿ ಇಲ್ವಾ? ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ. ಮಾಹಿತಿ ಇದೆ. ಆದರೂ ವರದಿ ಕೇಳಿ, ಸಮಿತಿ ರಚಿಸಿ, ನಮ್ಮನ್ನ ಕೆರಳಿಸುವ ಕೆಲಸ ಆಗುತ್ತಿದೆ. ಇದೆಲ್ಲ ಬಿಟ್ಟು ಸರ್ಕಾರ ಕೂಡಲೇ ಜಿಲ್ಲೆ ರಚನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಗೌರವಾಧ್ಯಕ್ಷ ಸಂಜಯ ಪಾಟೀಲ, ಉಪಾಧ್ಯಕ್ಷ ಸತೀಶ ಚಿಂಗಳೆ, ಹೋರಾಟಗಾರರಾದ ಅಮೂಲ ನಾವಿ, ರಾಖೇಶ ಮಗದುಮ್, ಮಹೇಶ ಕಾಂಬಳೆ, ರಫೀಕ್ ಪಠಾಣ, ಹಸೀನಾ ಪಟೇಲ, ಮಂಗಲ ವಾಗಳೆ ಪರುಷರಾಮ ದಾವನೆ, ಹಸನ ಕಲೇಗಾರ ಹಾಗೂ ಕಾರ್ಯಕರ್ತರು ಇದ್ದರು.