ಸಾರಾಂಶ
ಕೇಂದ್ರ ಸರ್ಕಾರದ ಯೋಜನೆಗಳ ವಸುದೈವ ಕುಟುಂಬಕಂ ಪುಸ್ತಕ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆಗಳ ಪುಸ್ತಕ ಹೊರ ತರಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಸಲಹೆ ಮಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಸರ್ಕಾರದ ಯೋಜನೆಗಳ ವಸುದೈವ ಕುಟುಂಬಕಂ ಪುಸ್ತಕ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆಗಳ ಪುಸ್ತಕ ಹೊರ ತರಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಸಲಹೆ ಮಾಡಿದರು.ಪುಣೆಯ ವಿಧಾನ ಭವನದಲ್ಲಿ ಪ್ರಾದೇಶಿಕ ಆಯುಕ್ತ ಡಾ.ಚಂದ್ರಕಾಂತ ಪುಂಡಲೀಕವಾರ್ ಅವರೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಯೋಜನೆಗಳ ಕೃತಿ ಹೊರ ತಂದರೆ ಅರ್ಹರಿಗೆ ವಿವಿಧ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ತಾವು ಹೊರ ತಂದಿರುವ ವಸುದೈವ ಕುಟುಂಬಕಂ ಪುಸ್ತಕವು ಕೇಂದ್ರ ಸರ್ಕಾರದ ಯೋಜನೆಗಳ ಸಮಗ್ರ ಮಾಹಿತಿ ಒಳಗೊಂಡಿದೆ. ಕ್ಯೂ ಆರ್ ಕೋಡ್ ಇರುವ ಕಾರಣ ಸ್ಕ್ಯಾನ್ ಮಾಡಿದರೆ ಸಾಕು ಪುಸ್ತಕ ತೆರೆದುಕೊಳ್ಳುತ್ತದೆ. ಪುಸ್ತಕಕ್ಕೆ ರಾಜ್ಯಪಾಲರು, ಗಣ್ಯರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.ಸರ್ಕಾರದ ಯೋಜನೆ ಅಥವಾ ದಾನಿಗಳ ನೆರವಿನಿಂದ ರಾಜ್ಯ ಸರ್ಕಾರದ ಯೋಜನೆಗಳ ಪುಸ್ತಕ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ಡಾ. ಚಂದ್ರಕಾಂತ ಪುಂಡಲೀಕವಾರ್ ತಿಳಿಸಿದರು.
ಇದೇ ವೇಳೆ ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ವಿಧಾನ ಭವನದ ಆವರಣದಲ್ಲಿ ಬಿಲ್ವಪತ್ರಿ ಸಸಿ ನೆಡಲಾಯಿತು.ಪ್ರಮುಖರಾದ ಯಲ್ಲಪ್ಪ ಬೆಂಡಗೇರಿ, ಚಂದ್ರಕಾಂತ ಚೆನ್ನಳ್ಳಿ, ಮಹೇಶ ಸ್ವಾಮಿ ಇದ್ದರು.