ಸಾರಾಂಶ
ಚನ್ನಗಿರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಾಪಾರ- ವ್ಯವಹಾರಗಳನ್ನು ಮಾಡುವುದು ತಂಬ ಕಷ್ಟವಾಗಿದೆ. ವ್ಯಾಪಾರದ ಜೊತೆಗೆ ಒಬ್ಬರಿಗೊಬ್ಬರು ಸಹಕಾರ ಮನೋಭಾವನೆಗಳಿಂದ ನಿಮ್ಮ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಜೀವಿಸಲು ಸಾಧ್ಯ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು. ಪಟ್ಟಣದ ರುಕ್ಕುಮಯಿ ಕಲ್ಯಾಣ ಮಂಟಪದಲ್ಲಿ ತಾಲೂಕು ಶಾಮಿಯಾನ, ಸೌಂಡ್ಸ್ ಅಂಡ್ ಡೆಕೊರೇಷನ್ ಮತ್ತು ದೀಪಾಲಂಕಾರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಾವು ಮಾಡುವ ವ್ಯವಹಾರಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಮುಖ್ಯವಾಗಿದೆ. ತಾಲೂಕಿನಲ್ಲಿರುವ 190 ಶಾಮಿಯಾನದ ಅಂಗಡಿಯವರು ಸೇರಿ ಸಂಘ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಶಾಮಿಯಾನ ಮಾಲೀಕರು ಸಂಘಟಿತರಾಗಿರುವುದು ಸಂತೋಷದ ವಿಷಯ. ನೀವು ಮಾಡುವ ವ್ಯಾಪಾರದಲ್ಲಿ ಪರಸ್ಪರ ಸ್ಪರ್ಧೆ ಮಾಡದೇ ಒಗ್ಗಟ್ಟಾಗಿರಬೇಕು ಎಂದರು.ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಶಾಮಿಯಾನ ಸೌಂಡ್ಸ್ ಅಂಡ್ ಡೆಕೋರೇಷನ್ ಮತ್ತು ದೀಪಾಲಂಕಾರ ಸಂಘ ಅಧ್ಯಕ್ಷ ಸಿ.ಬಿ.ಜಗದೀಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಎನ್.ಜೆ. ನಾಗರಾಜ್, ಸಿ.ಎಚ್. ಶ್ರೀನಿವಾಸ್, ಲಕ್ಷ್ಮಣ್, ಆಂಜನೇಯ, ವೀರೇಶ್, ಕೆ.ಪಿ.ಎಂ. ಹಾಲಸ್ವಾಮಿ, ನಲ್ಲೂರು ಕುಮಾರ್, ವೆಂಕಟೇಶ್, ಅಪ್ರೋಜ್ ಹಾಜರಿದ್ದರು.- - -
-6ಕೆಸಿಎನ್‌ಜಿ3.ಜೆಪಿಜಿ:ಸಂಘವನ್ನು ಶಾಸಕ ಬಸವರಾಜು ವಿ. ಶಿವಗಂಗಾ ಉದ್ಘಾಟಿಸಿದರು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತಿತರರು ಇದ್ದರು.