2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಮೆಕ್ಕೆಜೋಳವನ್ನು ಡಿಸ್ಪಲರಿಗಳಿಂದ ಹಾಗೂ ಕುಕ್ಕಟ ಆಹಾರ ಉತ್ಪದನಾ ಘಟಕಗಳಿಂದ ಬರುವ ಬೇಡಿಕೆಗಳಿಗೆ ಅನುಸಾರ ನೋಂದಾಯಿತ ರೈತರಿಂದ, ಬೆಳೆಯ ಗುಟ್ಟಮಟ್ಟವನ್ನು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪರಿಶೀಲಿಸಿದ ನಂತರ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
- ರೈತರಿಂದ ಪ್ರತಿ ಎಕರೆಗೆ 12 ಕ್ವಿಂ.ಗಳಂತೆ ಗರಿಷ್ಠ 50 ಕ್ವಿಂ. ಮೆಕ್ಕೆಜೋಳ ಖರೀದಿ: ಜಿ.ಎಂ.ಗಂಗಾಧರ ಸ್ವಾಮಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಮೆಕ್ಕೆಜೋಳವನ್ನು ಡಿಸ್ಪಲರಿಗಳಿಂದ ಹಾಗೂ ಕುಕ್ಕಟ ಆಹಾರ ಉತ್ಪದನಾ ಘಟಕಗಳಿಂದ ಬರುವ ಬೇಡಿಕೆಗಳಿಗೆ ಅನುಸಾರ ನೋಂದಾಯಿತ ರೈತರಿಂದ, ಬೆಳೆಯ ಗುಟ್ಟಮಟ್ಟವನ್ನು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪರಿಶೀಲಿಸಿದ ನಂತರ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.ಮೆಕ್ಕೆಜೋಳವನ್ನು ಜ.13 ರಿಂದ ಖರೀದಿಸಲು ಪ್ರಾರಂಭಿಸಲಾಗಿದೆ. ರೈತರು ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘ, ಅವರಗೆರೆ ಮೊ: 70900- 52888 ಇಲ್ಲಿ ನೋಂದಾಯಿಸಕೊಳ್ಳಬಹುದು. ಎಪಿಎಂಸಿ ಆವರಣ ದಾವಣಗೆರೆ ಇಲ್ಲಿ ಖರೀದಿಸಲಾಗುವುದು.
335 ಮೆಟ್ರಿಕ್ ಟನ್‌ಗೆ ಸೀಮಿತ:ಪ್ರಸ್ತುತ ಕುಕ್ಕಟ ಆಹಾರ ಉತ್ಪಾದನಾ ಘಟಕದ ಬೇಡಿಕೆ 335 ಮೆಟ್ರಿಕ್ ಟನ್‌ಗೆ ಸೀಮಿತಗೊಳಿಸಲಾಗಿದೆ. ಸದರಿ ಬೇಡಿಕೆ ಪೂರೈಸುವವವರೆಗೆ ಮೆಕ್ಕೆಜೋಳವನ್ನು ಖರೀದಿಸಲಾಗುತ್ತದೆ. ಮೊದಲು ಬಂದ ರೈತರಿಗೆ ಆದ್ಯತೆ ನೀಡಿ ಸದರಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು. ರೈತರಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ಗಳಂತೆ ಗರಿಷ್ಠ 50 ಕ್ವಿಂ. ಮೆಕ್ಕೆಜೋಳ ಖರೀದಿಸಲಾಗುವುದು ಎಂದಿದ್ದಾರೆ.
ನಂತರದ ಅವಧಿಯಲ್ಲಿ ಡಿಸ್ಟಲರಿಗಳಿಂದ ಹಾಗೂ ಕುಕ್ಕಟ ಆಹಾರ ಉತ್ಪಾದನಾ ಘಟಕಗಳಿಂದ ಬೇಡಿಕೆ ಬಂದಲ್ಲಿ ಅದರಂತೆ ಮೆಕ್ಕೆಜೋಳವನ್ನು ಖರೀದಿಸಲಾಗುವುದು. ರೈತರು ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ಎನ್.ಇ.ಎಂ.ಎಲ್ ತಂತ್ರಾಂಶದ ಮೂಲಕ ನೋಂದಣಿಯನ್ನು ಬಯೋಮೆಟ್ರಿಕ್ ಸಾಧನದ ಮೂಲಕ ಮಾಡಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದ್ದಾರೆ.ಫ್ರೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆ ಮುಖಾಂತರ ನೇರವಾಗಿ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಫ್ರೂಟ್ಸ್ ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಹಾಗೂ ಎಲ್ಲ ದಾಖಲೆಗಳಲ್ಲಿಯೂ ಒಂದೇ ಹೆಸರು ನಮೂದಾಗಿರುವ ಬಗ್ಗೆ ಮತ್ತು ಎನ್.ಸಿ,ಪಿ.ಐ. ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಮಾರಾಟಕ್ಕೆ ಬಂದ ಸಮಯದಲ್ಲಿ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳನ್ನು ಕಡ್ಡಾಯವಾಗಿ ನೋಂದಣಾಧಿಕಾರಿಗಳಿಗೆ ನೀಡಬೇಕು. ರೈತರು ತರುವ ಮೆಕ್ಕೆಜೋಳದ ಉತ್ಪನ್ನದಲ್ಲಿ ತೇವಾಂಶ ಶೇ.12 ಹಾಗೂ ಇತರೆ ಪದಾರ್ಥಗಳು ಶೇ.4.5 ಮಾತ್ರ ಇರಬೇಕು. ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ತಹಸೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತದ ಅಧಿಕಾರಿಗಳ ಗಮನಕ್ಕೆ ತರಬಹುದು. ಹಾಗೂ ಹೆಚ್ಚಿನ ಮಾಹಿತಿಗೆ ದೂ: 70900- 52888 ಹಾಗೂ 94498- 64439 ಸಂಪರ್ಕಿಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.- - -
-13ಕೆಡಿವಿಜಿ36: ಜಿ.ಎಂ. ಗಂಗಾಧರ ಸ್ವಾಮಿ