ದೇಶದ ಸುರಕ್ಷತೆಗೆ ಮೋದಿ ಮತ್ತೆ ಪ್ರಧಾನಿ ಮಾಡಿ

| Published : Apr 25 2024, 01:04 AM IST

ದೇಶದ ಸುರಕ್ಷತೆಗೆ ಮೋದಿ ಮತ್ತೆ ಪ್ರಧಾನಿ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ರೈತರ ಆತ್ಮಹತ್ಯೆ ಗ್ಯಾರಂಟಿಗಳನ್ನು ನೀಡಿದೆ. ಆದ್ದರಿಂದ ಇಡೀ ರಾಜ್ಯ ಹಾಗೂ ದೇಶವನ್ನು ಸುರಕ್ಷಿತವಾಗಿರಲು ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ಹೊಸಕೋಟೆ: ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ರೈತರ ಆತ್ಮಹತ್ಯೆ ಗ್ಯಾರಂಟಿಗಳನ್ನು ನೀಡಿದೆ. ಆದ್ದರಿಂದ ಇಡೀ ರಾಜ್ಯ ಹಾಗೂ ದೇಶವನ್ನು ಸುರಕ್ಷಿತವಾಗಿರಲು ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ತಾಲೂಕಿನ ಬೋಧನಹೊಸಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸೇಬಿನ ಮಾಲೆಯ ಅದ್ಧೂರಿ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಚುನಾವಣಾ ಗಿಮಿಕ್ ಮಾಡುವಲ್ಲಿ ನಿಸ್ಸೀಮರು. ಸೋಲು ಸ್ಪಷ್ಟವಾಗಿ ಕಾಣುತ್ತಿರುವುದರಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಲು ಯಾವುದೇ ಸಾಧನೆ ಇಲ್ಲವಾಗಿ ಚಾರಿತ್ರ‍್ಯವಧೆ, ತೇಜೋವಧೆ ಮಾಡುತ್ತಿದ್ದಾರೆ. ಜನರು ಇವ್ಯಾವುದಕ್ಕೂ ಕಿವಿಗೊಡಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಗ್ಯಾರಂಟಿ, ರೈತರ ಆತ್ಮಹತ್ಯೆ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ಖಜಾನೆ ಖಾಲಿ ಗ್ಯಾರಂಟಿ, ಕೋಮುವಾದದ ಗ್ಯಾರಂಟಿ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಅವರ ತಂದೆಯೇ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗೆ ತುಷ್ಟೀಕರಣದ ರಾಜಕಾರಣದಿಂದ ಮತ ಪಡೆಯುವುದು ಮಾತ್ರ ಮುಖ್ಯ. ಡಾ.ಅಂಬೇಡ್ಕರ್ ಅವರ ಸಿದ್ಧಾಂತ, ಸಮ ಸಮಾಜ ನಿರ್ಮಾಣ ಅವರಿಗೆ ಮುಖ್ಯವಲ್ಲ. ಸಿಬಿಐಗೆ ಈ ಪ್ರಕರಣ ವಹಿಸಿ ಎಂದರೂ ಸಿಐಡಿಗೆ ವಹಿಸಿದ್ದು, ಇದರಿಂದ ನ್ಯಾಯ ಸಿಗುವುದಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರಿಗೆ ಅಂತ್ಯ ಸಂಸ್ಕಾರಕ್ಕೂ ಜಾಗವಿಲ್ಲದಂತೆ ಕಾಂಗ್ರೆಸ್ ಮಾಡಿತ್ತು. ಆದರೆ ಪ್ರಧಾನಿ ಮೋದಿ ಅವರ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದರು. ಬಾಬು ಜಗಜೀವನರಾಮ್ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿತ್ತು. ಈಗ ದಲಿತರ 11 ಸಾವಿರ ಕೋಟಿ ರುಪಾಯಿ ಗ್ಯಾರಂಟಿಗೆ ಬಳಸಲಾಗಿದೆ. ಕೇಂದ್ರ ಸರ್ಕಾರದ ಸಚಿವರ ಪೈಕಿ 27 ಒಬಿಸಿ, 12 ಪರಿಶಿಷ್ಟ ಜಾತಿ ಹಾಗೂ 8 ಪರಿಶಿಷ್ಟ ಪಂಗಡದವರಿದ್ದಾರೆ. ಶೇ.61 ರಷ್ಟು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರಿದ್ದಾರೆ. ಕಾಂಗ್ರೆಸ್ ನಿಂದಾಗಿ ಜಮ್ಮು-ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಇರಲಿಲ್ಲ. ದಲಿತರ ಕಾಳಜಿ ಇದ್ದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕಿತ್ತು ಎಂದರು.

ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ನೆರೆ ಮತ್ತು ಬರ ಪರಿಹಾರಕ್ಕೆ ಹಿಂದಿನ ಯುಪಿಎ ಸರ್ಕಾರ 3392 ಕೋಟಿ ನೀಡಿದ್ದರೆ, ಮೋದಿ ಸರ್ಕಾರ ಮೂರು ಪಟ್ಟು ಹೆಚ್ಚಾಗಿ 10,611 ಕೋಟಿ ನೀಡಿದೆ. ಹಿಂದಿನ ಯುಪಿಎ ಸರ್ಕಾರ 81,795 ಕೋಟಿ ತೆರಿಗೆ ಹಂಚಿದ್ದರೆ, ಮೋದಿ ಸರ್ಕಾರ ನಾಲ್ಕು ಪಟ್ಟು ಹೆಚ್ಚಾಗಿ 3 ಲಕ್ಷ ಕೋಟಿ ನೀಡಿದೆ. ಯುಪಿಎ ಅವಧಿಯಲ್ಲಿ ಅಭಿವೃದ್ಧಿಗಾಗಿ 60,779 ಕೋಟಿ ನೀಡಿದ್ದರೆ, ಮೋದಿ ಸರ್ಕಾರ ನಾಲ್ಕು ಪಟ್ಟು ಹೆಚ್ಚಾಗಿ 2.36 ಲಕ್ಷ ಕೋಟಿ ನೀಡಿದೆ. ಅನ್ನದಾತರ ಸಬಲೀಕರಣಕ್ಕಾಗಿ ಕಿಸಾನ್ ಸಮ್ಮಾನ್‌ನಲ್ಲಿ 55 ಲಕ್ಷ ರೈತರಿಗೆ 20,000 ಕೋಟಿ ನೀಡಲಾಗಿದೆ. 56 ಲಕ್ಷ ರೈತರಿಗೆ 1.33 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರ ನೀಡಲಾಗಿದೆ. 6000 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ, 6800 ಕಿ.ಮೀ. ಉದ್ದದ ಗ್ರಾಮೀಣ ರಸ್ತೆ, 7 ವಿಮಾನ ನಿಲ್ದಾಣಗಳ ನಿರ್ಮಾಣ ಹೀಗೆ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನುರೆಡ್ಡಿ, ರಾಜ್ಯ ಪರಿಷತ್ ಸದಸ್ಯೆ ಸುಜಾತ, ಬಿಜೆಪಿ ಮುಖಂಡ ತಿರುವರಂಗ ನಾರಾಯಣಸ್ವಾಮಿ, ಚಿಕ್ಕೇಗೌಡ, ನಾಗರೆಡ್ಡಿ ದುನ್ನಸಂದ್ರ, ಮುನಿರಾಜು, ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಅರುಣಾ, ಆನಂದ್ ಇದ್ದರು.

ಫೋಟೋ: 24 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಬೋಧನಹೊಸಹಳ್ಳಿಯಲ್ಲಿ ಚುನವಣಾ ಪ್ರಚಾರಕ್ಕೆ ಅಗಮಿಸಿದ ಎನ್‌ಡಿಎ ಅಭ್ಯರ್ಥಿ ಡಾ.ಸುಧಾಕರ್ ಅವರಿಗೆ ಗ್ರಾಪಂ ಸದಸ್ಯೆ ಅರುಣಾ, ಆನಂದ್ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದರು.