ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಿವಾನಂದ ಮಲ್ಲನಗೌಡ್ರ, ಉಪಾಧ್ಯಕ್ಷರಾಗಿ ವೀರಯ್ಯಸ್ವಾಮಿ ಚೌಕಿಮಠ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಡಗಿ:ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಿವಾನಂದ ಮಲ್ಲನಗೌಡ್ರ, ಉಪಾಧ್ಯಕ್ಷರಾಗಿ ವೀರಯ್ಯಸ್ವಾಮಿ ಚೌಕಿಮಠ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಕಾನಿಪ ಸಂಘ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ಕಳೆದ ತಿಂಗಳು ಜಿಲ್ಲಾ ಘಟಕದ ಕಾನಿಪ ಚುನಾವಣೆ ಜರುಗಿದ ಬಳಿಕ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಲಾಗಿತ್ತು. ಇದರಂತೆ ಡಿ. 6ರಂದು ಬ್ಯಾಡಗಿ ಘಟಕದ ಕಾನಿಪ ಪತ್ರಕರ್ತರ ಚುನಾವಣೆ ನಿಗದಿಯಾಗಿತ್ತು. ನೂತನ ಪದಾಧಿಕಾರಿಗಳ ಆಯ್ಕೆಗೊಳಿಸಲು ರಾಜ್ಯ ಘಟಕದ ಕಾನಿಪ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ನೇತೃತ್ವದಲ್ಲಿ ಸಭೆ ಜರುಗಿತು, ಎಲ್ಲ ಸ್ಥಾನಗಳಿಗೂ ಒಂದೇ ಹೆಸರು ಸೂಚಿಸಿದ ಪರಿಣಾಮ ಅವಿರೋಧ ಆಯ್ಕೆ ಜರುಗಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಕಾನಿಪ ರಾಜ್ಯ ಘಟಕದ ಕಾರ್ಯದರ್ಶಿ ನಿಂಗಪ್ಪಚಾವಡಿ, ಕಾರ್ಯನಿರತ ಪತ್ರಕರ್ತರ ಸಂಘ, ರಾಜ್ಯದಲ್ಲಿನ ಪತ್ರಕರ್ತರು ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿನ ಬಹುತೇಕ ಪತ್ರಕರ್ತರು ಯಾವುದೇ ಜೀವನ ಭದ್ರತೆಯಿಲ್ಲದೇ ಸಂಕಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಸಮಾಜದಲ್ಲಿನ ಅಂಕು ಡೊಂಕು ಸರ್ಕಾರ ಹಾಗೂ ಜನ ಪ್ರತಿನಿಧಿಗಳನ್ನು ಎಚ್ಚರಿಸುವ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯತ್ಯಾಸವಾದಲ್ಲಿ ಬರಹ ಮೂಲಕ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಕಾನಿಪ ಸಂಘದ ಮನವಿ ಮೇರೆಗೆ ರಾಜ್ಯ ಸರ್ಕಾರ ಗ್ರಾಮಿಣ ಪರ್ತಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಸೌಲಭ್ಯ ಕಲ್ಪಿಸಿದ್ದು, ಕೆಲವೊಂದು ತಾಂತ್ರಿಕ ತೊಂದರೆಗಳಿದ್ದು, ಅವುಗಳನ್ನು ಸರಿಪಡಿಸಿ ವಿತರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಪತ್ರಕರ್ತರು, ಪತ್ರಿಕಾ ವಿತರಕರಿಗೂ ಸರ್ಕಾರದ ಕೆಲ ಸೌಲತ್ತುಗಳನ್ನು ಜಾರಿಗೊಳಿಸಬೇಕಿದೆ, ಮುಂದಿನ ದಿನಗಳಲ್ಲಿ ಸರ್ಕಾರ ಮಾದ್ಯಮ ಕ್ಷೇತ್ರದಲ್ಲಿರುವ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆಯಿದ್ದು, ಸದಸ್ಯರು ಸಂಘದ ನಿಯಮಾವಳಿಯಂತೆ, ಸಾಮಾಜಿಕ ಧೋರಣೆಗಳಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು, ಪತ್ರಿಕಾ ಮೌಲ್ಯಗಳಿಗೆ ಧಕ್ಕೆ ಬಾರದಂತೆ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ನೂತನ ಘಟಕದ ಪದಾಧಿಕಾರಿಗಳು: ಶಿವಾನಂದ ಮಲ್ಲನಗೌಡ್ರ (ಅಧ್ಯಕ್ಷ), ವೀರಯ್ಯಸ್ವಾಮಿ ಚೌಕೀಮಠ (ಉಪಾಧ್ಯಕ್ಷ), ಟಿಪ್ಪು ಸುಲ್ತಾನ ಹುಲ್ಮನಿ (ಪ್ರಧಾನ ಕಾರ್ಯದರ್ಶಿ), ಕರಿಬಸವಸ್ವಾಮಿ ಬರದೂರಹಿರೇಮಠ (ಖಜಾಂಚಿ), ನಿರ್ದೇಶಕರಾಗಿ ಗಣೇಶ ಅರ್ಕಾಚಾರಿ, ಪ್ರೇಮಾ ಹುನಗುಂದ, ಶಿವರಾಜ ಉಜನಿ, ಕುಮಾರ ಕರ್ಚಡ, ಪುಷ್ಪಾಇಂಡಿಮಠ, ಪರಮೇಶಪ್ಪಅಂಗಡಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ವಿನಾಯಕ ಹುದ್ದಾರ, ನಾರಾಯಣ ಹೆಗಡೆ, ನಾಗರಾಜ ಮೈದೂರು, ಪ್ರಧಾನ ಕಾರ್ಯದರ್ಶಿ ವಿರೇಶ ಮಡ್ಲೂರ, ಖಚಾಂಚಿ ಬಸವರಾಜ ಮರಳಿಹಳ್ಳಿ, ಕಾರ್ಯದರ್ಶಿ ವಿ.ಬಿ.ಕೇಶವಮೂರ್ತಿ, ಮಂಜುನಾಥ ಗುಡಿಸಾಗರ, ವೀರೇಶ ಕೊಪ್ಪದ, ಗಿರೀಶ ಇಂಡಿಮಠ ಇದ್ದರು.