ಲೋಕಾಪುರ: ಮುಧೋಳ ತಾಲೂಕಿನ ಕಸಬಾ ಜಂಬಗಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿ ಒರ್ವ ಮೃತಪಟ್ಟಿರುವ ಘಟನೆ ಭಾನುವಾರ ಸಾಯಂಕಾಲ 4.30ರ ಹೊತ್ತಿಗೆ ಸಂಭವಿಸಿದೆ.

ಲೋಕಾಪುರ: ಮುಧೋಳ ತಾಲೂಕಿನ ಕಸಬಾ ಜಂಬಗಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿ ಒರ್ವ ಮೃತಪಟ್ಟಿರುವ ಘಟನೆ ಭಾನುವಾರ ಸಾಯಂಕಾಲ 4.30ರ ಹೊತ್ತಿಗೆ ಸಂಭವಿಸಿದೆ.

ಭೀಮಪ್ಪ ಬಸಪ್ಪ ಬದಾಮಿ (49) ಮೃತ ವ್ಯಕ್ತಿ. ವೃತ್ತಿಯಲ್ಲಿ ಕೃಷಿಕರಾಗಿರುವ ಭೀಮಪ್ಪ ಅವರಿಗೆ ಸಿಡಿಲು ಬಡಿದಿದೆ. ಮೃತರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಸ್ಥಳೀಯ ಶಾಸಕರ ಹಾಗೂ ಮಾಜಿ ಶಾಸಕರ ಮಾರ್ಗದರ್ಶನದಂತೆ ಮೃತನ ಕುಟುಂಬಕ್ಕೆ ತುರ್ತಾಗಿ ಕಂದಾಯ ಇಲಾಖೆಯಿಂದ ಪ್ರಕೃತಿ ವಿಕೋಪದಡಿ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್‌ ತಿಳಿಸಿದ್ದಾರೆ.